ಲಾಸ್ ಏಂಜಲೀಸ್: ತನ್ನ ಪತಿಯೊಂದಿಗೆ ಸುಮಾರು 1 ಬಿಲಿಯನ್ (78,94,75,00,000 ರೂ.) ಡಾಲರ್ ಸೋಲಾರ್ ಹಗರಣ ಮಾಡಿದ ಮಹಿಳೆಗೆ 11 ವರ್ಷ, ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಕ್ಯಾಲಿಫೋರ್ನಿಯಾದ ಅಧಿಕಾರಿಗಳು ತಿಳಿಸಿದ್ದಾರೆ.
ಪಾಲೆಟ್ ಕಾರ್ಪೋಫ್(51) 2011 ಮತ್ತು 2018 ರ ನಡುವೆ ತನ್ನ ಪತಿ ಜೆಫ್‍ನೊಂದಿಗೆ ವ್ಯಾಪಕವಾದ ಪಿರಮಿಡ್ ಯೋಜನೆ ಮಾಡಲು ಸಾಥ್ ಕೊಟ್ಟಿದ್ದಳು. ಇವರು ಸೌರ ಉತ್ಪಾದಕಗಳ ಅಭಿವೃದ್ಧಿ ಮಾಡುತ್ತಿದ್ದಾರೆಂದು ಭಾವಿಸಿದ ಸುಮಾರು 20 ಹೂಡಿಕೆದಾರರು ಇವರತ್ತ ಆಕರ್ಷಣೆಯಾಗಿ ಹೊಡಿಕೆ ಮಾಡಿದ್ದರು. ಇದನ್ನೂ ಓದಿ: ಸಾಕುನಾಯಿ ವಿಚಾರದಲ್ಲಿ ಜಗಳ – ದೊಣ್ಣೆ, ಕಬ್ಬಿಣದ ರಾಡ್‍ನಿಂದ ಕುಟುಂಬದ ಮೂವರ ಮೇಲೆ ಗಂಭೀರ ಹಲ್ಲೆ
Advertisement
Advertisement
ಈ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ಸಿಕ್ಕಿ ದಂಪತಿಯನ್ನು 2020ರಲ್ಲಿ ಬಂಧಿಸಿದ್ದರು. ಇವರನ್ನು ವಿಚಾರಣೆ ಮಾಡುವ ವೇಳೆ, ತಂತಿ ವಂಚನೆ ಮತ್ತು ಮನಿ ಲಾಂಡರಿಂಗ್ ಮಾಡುವ ಪಿತೂರಿ ಮಾಡಿದ್ದೇವೆ ಎಂದು ತಪ್ಪೊಪ್ಪಿಕೊಂಡರು. ಈ ಹಿನ್ನೆಲೆ ಜೆಫ್ ಕಾರ್ಪೋಫ್ ಅವರಿಗೆ 30 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಅದೇ ರೀತಿ ಪಾಲೆಟ್ ಕಾರ್ಪೋಫ್ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಪ್ರಸ್ತುತ ಆಕೆಗೆ ನ್ಯಾಯಾಲಯವು 11 ವರ್ಷ, ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
Advertisement
Advertisement
ದಂಪತಿ 17 ಮಂದಿ ಹೂಡಿಕೆದಾರರಿಂದ 910 ಮಿಲಿಯನ್(71,84,26,80,000 ರೂ.) ಸಂಗ್ರಹಿಸಿದ್ದರು. ಈ ಹಣದಲ್ಲಿ 17,000 ಸೋಲರ್ ಸಾಧನಗಳನ್ನು ತಯಾರು ಮಾಡಿದ್ದರು. ಆದರೆ ಇದರಲ್ಲಿ ಅರ್ಧದಷ್ಟು ಸಾಧನಗಳು ಕೆಲಸ ಮಾಡುತ್ತಿರಲ್ಲಿಲ್ಲ. ಜೆಫ್ ಮತ್ತು ಪಾಲೆಟ್ ಕಾರ್ಪೋಫ್ ತಮ್ಮ ಸ್ವಂತ ಬಳಕೆಗಾಗಿಯೇ 140 ಮಿಲಿಯನ್(11,05,39,80,000) ಇಟ್ಟುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಈ ಹಣದಲ್ಲಿ ದಂಪತಿ ಐಷಾರಾಮಿ ಜೀವನ ನಡೆಸುತ್ತಿದ್ದು, ಪ್ರಸ್ತುತ ಅವರ ಬಳಿ ಆಭರಣಗಳು, 148 ಕಾರು, ಐಷಾರಾಮಿ ರಿಯಲ್ ಎಸ್ಟೇಟ್ ಖರೀದಿಸಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಇದೊಂದು ವ್ಯವಸ್ಥಿತ ಸಂಚು, ದೇಶದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆ ಶುರು: ಕಟೀಲ್