ವಾಷಿಂಗ್ಟನ್: ಪತಿಯನ್ನು ಕೊಂದು ಸ್ನೇಹಿತರಿಗೆ ಪಾರ್ಟಿ ಕೊಟ್ಟಿದ್ದ ಕಿಲ್ಲರ್ ಲೇಡಿಯನ್ನು ಅಮೆರಿಕ ಪೊಲೀಸರು (US Police) ಬಂಧಿಸಿದ್ದಾರೆ.
ಮೂಲಗಳ ಪ್ರಕಾರ, ತನ್ನ ಪತಿ ಎರಿಕ್ ರಿಚಿನ್ಸ್ ಸಾವಿನ ಮರುದಿನವೇ ಪತ್ನಿ ಮನೆಗೆ ಬೀಗ ಜಡಿದು, ದೊಡ್ಡ ಪಾರ್ಟಿ ಆಯೋಜಿಸಿ ಸ್ನೇಹಿತರನ್ನು (Friends Party) ಕರೆದಿದ್ದಳು. ತಾನೂ ಚೆನ್ನಾಗಿ ಕುಡಿದು ಕುಣಿದು ಕುಪ್ಪಳಿಸಿದ್ದಳು. ಇದನ್ನೂ ಓದಿ: ಹೋಟೆಲ್ ನಲ್ಲಿ ವೇಶ್ಯಾವಾಟಿಕೆ : ಖ್ಯಾತನಟಿ ಜೊತೆ ಮಾಡೆಲ್ ಬಂಧನ
Advertisement
Advertisement
2022ರ ಮಾರ್ಚ್ 4ರಂದು ಕಾಮಾಸ್ ವಿಲ್ಲೋ ಕೋರ್ಟ್ನಲ್ಲಿರುವ ತನ್ನ ಮನೆಯಲ್ಲಿ ಪತಿ ಎರಿಕ್ ರಿಚಿನ್ಸ್ ವಿಷ ನೀಡಿ ಕೊಂದಿರುವ ಆರೋಪದ ಮೇಲೆ ಪತ್ನಿ ರಿಚಿನ್ಸ್ನನ್ನು ಕಳೆದವಾರ ಬಂಧಿಸಲಾಗಿತ್ತು. ಪತಿ ಸತ್ತ ಒಂದು ವರ್ಷದ ನಂತರ ?ಆರ್ ಯು ವಿತ್ ಮಿ?’ ಎಂಬ ಮಕ್ಕಳ ಪುಸ್ತಕವನ್ನೂ ಈಕೆ ಪ್ರಕಟಿಸಿದ್ದಳು. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ ಆಗುವ ಕಷ್ಟದ ಅನುಭವವನ್ನು ಸರಳವಾಗಿ ಮಕ್ಕಳಿಗೆ ತಿಳಿಸುವುದು. ಈ ಪುಸ್ತಕದ ಉದ್ದೇಶವಾಗಿತ್ತು.
Advertisement
ಪೊಲೀಸರು ಸಾವಿನ ಕುರಿತು ವಿಚಾರಣೆ ನಡೆಸಿದಾಗ ಮೊದಲು ಉಲ್ಟಾ ಹೊಡೆದಿದ್ದ ಈಕೆ ನಂತರ ಪಾರ್ಟಿ ವೇಳೆ ವೋಡ್ಕಾ ಮಿಶ್ರಿತ ಪಾನೀಯಾ ಬೆರಸಿ ಕೊಟ್ಟಿದ್ದೆ ಎಂದು ಹೇಳಿದ್ದಳು. ಇದನ್ನೂ ಓದಿ: ಕೆಲಸದ ನೆಪದಲ್ಲಿ ಕರೆದೊಯ್ದು ಕಾರಿನಲ್ಲಿ ಕಿರುಕುಳ- ಬೈಕಲ್ಲಿ ಬಂದವ್ರಿಂದ ಮಹಿಳೆ ರಕ್ಷಣೆ
Advertisement
ವೈದ್ಯಕೀಯ ಪರೀಕ್ಷೆಯಲ್ಲಿ ಮಿತಿಮೀರಿದ ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಫೆಂಟಾನಿಲ್ ಲಿಕ್ವಿಡ್ ಅನ್ನು 5 ಪಟ್ಟು ಹೆಚ್ಚಾಗಿ ಸೇವಿಸಿದ್ದಾರೆ ಎಂದು ವೈದ್ಯರು ಹೇಳಿದ್ದರು.
ದಂಪತಿ ಔಷಧ ಮಳಿಗೆ ಪ್ರಾರಂಭಿಸಲು ಮುಂದಾಗಿದ್ದರು. ಅದಕ್ಕಾಗಿ ರಿಚಿನ್ಸ್ ಕೆಲವು ಔಷಧಗಳ ಬಗ್ಗೆ ಪ್ರಿಸ್ಕ್ರಿಪ್ಷನ್ ಕೇಳಿ, ಹೈಡ್ರೋಕೋಡೋನ್ ಸೇರಿ ಹಲವು ರೀತಿಯ ಮಾತ್ರೆಗಳನ್ನೂ ಪಡೆದಿದ್ದರು. ಫೆಬ್ರವರಿ 14ರಂದು ಪ್ರೇಮಿಗಳ ದಿನದ ಪ್ರಯುಕ್ತವಾಗಿ ದಂಪತಿ ಡಿನ್ನರ್ ಮಾಡಿದ್ದರು. ಅದೇ ದಿನ ಪತಿ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಪತಿ ಸಾವನ್ನಪ್ಪಿದ್ದ. ಬಳಿಕ ತಾನೇ ಪೊಲೀಸರಿಗೆ ಕರೆ ಮಾಡಿ ನನ್ನ ಪತಿ ಕರೆಗೆ ಸ್ಪಂದಿಸುತ್ತಿಲ್ಲ ಎಂದು ರಿಚಿನ್ಸ್ ದೂರು ನೀಡಿದ್ದಳು. ಆದ್ರೆ ತನಿಖೆಯಲ್ಲಿ ಈಕೆಯ ಬಂಡವಾಳ ಬಯಲಾಗಿ ಬಂಧಿಸಲಾಗಿತ್ತು.