ವಾಷಿಂಗ್ಟನ್: ಇನ್‌ಸ್ಟಾಗ್ರಾಂ (Instagram) ಲವ್ವರ್ ಮದುವೆಯಾಗಲು ಅಮೆರಿಕದ ಮಹಿಳೆಯೊಬ್ಬರು ಭಾರತಕ್ಕೆ ಆಗಮಿಸಿದ್ದಾರೆ. ಪ್ರೇಮಿಗಾಗಿ ಅಮೆರಿಕದಿಂದ (America) ಸಾವಿರಾರು ಮೈಲುಗಳಷ್ಟು ದೂರ ಪ್ರಯಾಣಿಸಿ ಆಂಧ್ರಪ್ರದೇಶದ ಹಳ್ಳಿಗೆ ಬಂದು ತಲುಪಿಸಿದ್ದಾರೆ.
ಛಾಯಾಗ್ರಾಹಕಿ ಜಾಕ್ಲಿನ್ ಫೊರೆರೊ ಎಂಬಾಕೆಗೆ ಭಾರತದ ಚಂದನ್ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಿತರಾದರು. ಚಂದನ್ ಸರಳತೆಗೆ ಆಕರ್ಷಿತಳಾಗಿದ್ದರು. ನಂತರ ಪರಸ್ಪರರು ಪ್ರೀತಿಯಲ್ಲಿ ಬಿದ್ದಿದ್ದರು. ಇದನ್ನೂ ಓದಿ: ದೇಶ ತೊರೆಯಿರಿ ಅಥವಾ ಜೈಲು ಶಿಕ್ಷೆ ಅನುಭವಿಸಿ: ವಿದೇಶಿ ಭಯೋತ್ಪಾದಕರಿಗೆ ಅಮೆರಿಕ ಎಚ್ಚರಿಕೆ
View this post on Instagram
ಇನ್‌ಸ್ಟಾದಲ್ಲಿ ‘ಹಾಯ್’ ಎಂದು ಪರಿಚಿತರಾದ ಇವರು, ಸತತ 14 ತಿಂಗಳು ಚಾಟ್ ಮಾಡಿಕೊಂಡಿದ್ದರು. ಹೃದಯಸ್ಪರ್ಶಿ ಸಂಭಾಷಣೆಯೊಂದಿಗೆ ಪ್ರೀತಿಯಲ್ಲಿ ಬಿದ್ದರು. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು.
ಸಂಗೀತ, ಕಲೆ ಮತ್ತು ಛಾಯಾಗ್ರಹಣದಲ್ಲಿ ಚಂದನ್‌ಗೆ ಇದ್ದ ಉತ್ಸಾಹಕ್ಕೆ ನಾನು ಆಕರ್ಷಿತಳಾದೆ. 8 ತಿಂಗಳ ಕಾಲ ಆನ್‌ಲೈನ್‌ನಲ್ಲಿ ಡೇಟಿಂಗ್ ಮಾಡಿದ್ದೆವು. ನನ್ನ ತಾಯಿಯ ಅನುಮತಿ ಪಡೆದು ನಾನು ಭಾರತಕ್ಕೆ ಬಂದಿದ್ದೇನೆ ಎಂದು ಫೊರೆರೊ ತಿಳಿಸಿದ್ದಾರೆ. ಇದನ್ನೂ ಓದಿ: ನೈಟ್‌ಕ್ಲಬ್‌ನ ಛಾವಣಿ ಕುಸಿದು 79 ಮಂದಿ ದುರ್ಮರಣ
ಈ ಜೋಡಿ ಈಗ ಅಮೆರಿಕದಲ್ಲಿ ತಮ್ಮ ಜೀವನವನ್ನು ಒಟ್ಟಿಗೆ ಪ್ರಾರಂಭಿಸಲು ಚಂದನ್ ವೀಸಾಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ದೊಡ್ಡ ಸಾಹಸಗಳೊಂದಿಗೆ ಹೊಸ ಅಧ್ಯಾಯಕ್ಕಾಗಿ ನಾವಿಬ್ಬರೂ ಉತ್ಸುಕರಾಗಿದ್ದೇವೆಂದು ಹೇಳಿಕೊಂಡಿದ್ದಾರೆ.