ಶಾಕಿಂಗ್: ತುಂಬು ಗರ್ಭಿಣಿ ಸ್ನೇಹಿತೆಯ ಕತ್ತು ಸೀಳಿ ಹೊಟ್ಟೆಯಲ್ಲಿದ್ದ ಮಗು ಕದ್ದಳು!

Public TV
1 Min Read
murder us

ನ್ಯೂಯಾರ್ಕ್: ಇಂತಹ ಘಟನೆಯನ್ನು ನೀವು ಎಂದೂ ಕೇಳಿರಲು ಸಾಧ್ಯವಿಲ್ಲ. ಮಹಿಳೆಯೊಬ್ಬಳು ತನ್ನ ಸ್ನೇಹಿತೆಯ ಕತ್ತು ಸೀಳಿ ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನ ಕದ್ದಿರುವ ಶಾಕಿಂಗ್ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ. ಈ ಘಟನೆ ನಡೆದದ್ದು 2015ರಲ್ಲಿ. ಪ್ರಸ್ತುತ ಪ್ರಕರಣದ ವಿಚಾರಣೆ ನಡೆಯುತ್ತಿದೆ.

angelikque sutton 1 2

ಒಂಭತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದ ಏಂಜಲೀಕ್ ಸುಟ್ಟುನ್ ಎಂಬ ಮಹಿಳೆ, ತನ್ನ ಗೆಳೆಯ ಪ್ಯಾಟ್ರಿಕ್ ಬ್ರಾಡ್ಲಿ ಜೊತೆ ವಿವಾಹವಾಗಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಅಂದು ಆಕೆಯ ಜೀವನದಲ್ಲಿ ಘೋರ ಕೃತ್ಯವೊಂದು ನಡೆದೇ ಹೋಯ್ತು. ವಿವಾಹ ಮಾಡಿಕೊಳ್ಳಲು ಅಂದು ಏಂಜಲೀಕ್ ಕೋರ್ಟ್‍ಹೌಸ್‍ಗೆ ತೆರಳುತ್ತಿದ್ದರು. ಆದ್ರೆ ಮಾರ್ಗ ಮಧ್ಯೆದಲ್ಲಿ ಆಕೆಯ ಬಾಲ್ಯ ಸ್ನೇಹಿತೆ ಆಶ್ಲಿ ವೇಡ್ ಆಕೆಯನ್ನ ತಡೆದು ಉಡುಗೊರೆ ಕೊಡಬೇಕೆಂದು ಹೇಳಿ ಕರೆದುಕೊಂಡು ಹೋಗಿದ್ದಳು.

ashleighwade 1

ನಂತರ ಆಶ್ಲಿ ಏಂಜಲೀಕ್‍ಳ ಕತ್ತು ಕುಯ್ದಿದ್ದಳು. ಜೋರಾಗಿ ಕಿರುಚಲು ಸಾಧ್ಯವಾಗಬಾರದೆಂದು ಧ್ವನಿ ಪೆಟ್ಟಿಗೆಯನ್ನೇ ಸೀಳಿದ್ದಳು ಎಂದು ಸೋಮವಾರದಂದು ವಿಚಾರಣೆ ವೇಳೆ ವಕೀಲರಾದ ಮೆರೆಡಿತ್ ಹಾಲ್ಟ್ಸ್‍ಮನ್ ಹೇಳಿದ್ದಾರೆ.

ಕತ್ತು ಸೀಳಿದ್ದರಿಂದ ಏಂಜಲೀಕ್ ಕಿರುಚಲು ಆಗಿರಲಿಲ್ಲ. ಒಂದು ಮಾತನ್ನೂ ಆಡಲು ಆಗಿರಲಿಲ್ಲ. ಮುಂದೆ ನಡೆದಿದ್ದು ಮಾತ್ರ ಹೇಳಲಾರದಂತಹದ್ದು ಎಂದು ಹಾಲ್ಟ್ಸ್‍ಮನ್ ಹೇಳುತ್ತಿದ್ದಾಗ ಇಡೀ ಕೋರ್ಟ್ ಅಚ್ಚರಿಯಿಂದ ಕೇಳುತ್ತಿತ್ತು.

babystealerboyfriend

ಆಶ್ಲೀ ತನ್ನ ಒಂಭತ್ತು ತಿಂಗಳ ತುಂಬು ಗರ್ಭಿಣಿ ಬಾಲ್ಯ ಸ್ನೇಹಿತೆ ಏಂಜಲಿಕ್‍ಳ ಹೊಟ್ಟೆಯನ್ನು ಚಾಕುವಿನಿಂದ ಕುಯ್ದು ಗರ್ಭಾಶಯವನ್ನು ತೆರೆದು ಮಗುವನ್ನ ಹೊರಗೆ ತೆಗೆದಿದ್ದಳು. ನಂತರ ಗರ್ಭಾಶಯದ ಭಾಗವನ್ನು ಬಾತ್‍ರೂಮಿನ ನೆಲದ ಮೇಲೆ ಎಸೆದಿದ್ದಳು ಎಂದು ಹಾಲ್ಟ್ಸ್‍ಮನ್ ಹೇಳಿದ್ದಾರೆ. ಈ ಘಟನೆಯಲ್ಲಿ ಮಗು ಜೀವಂತವಾಗಿ ಉಳಿದಿದೆ.

baby3

ಕೃತ್ಯಕ್ಕೂ ಮುನ್ನ ಆರೋಪಿ ಆಶ್ಲೀ ಕೆಲವು ತಿಂಗಳಿನಿಂದ ತಾನು ಗರ್ಭಿಣಿ ಎಂದು ನಾಟಕ ಮಾಡಿದ್ದಳು. ನಂತರ ತನ್ನ ಸ್ನೇಹಿತೆಯಿಂದ ಕದ್ದ ಮಗುವನ್ನು ತನ್ನದು ಎಂದು ಹೇಳಿಕೊಂಡಿದ್ದಳು.

ಆಶ್ಲೀ ಕೋರ್ಟ್‍ನಲ್ಲಿ ಈ ಆರೋಪವನ್ನು ಒಪ್ಪಿಕೊಂಡಿಲ್ಲ. ಆದ್ರೆ ಆಕೆಯ ಮೇಲಿನ ಆರೋಪ ಸಾಬೀತಾದರೆ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆಯಿದೆ.

Share This Article
Leave a Comment

Leave a Reply

Your email address will not be published. Required fields are marked *