ನ್ಯೂಯಾರ್ಕ್: ಓಹಿಯೋದ 23 ವರ್ಷದ ಮಗಳೊಬ್ಬಳು ತನ್ನ ತಾಯಿಗೆ ಕಬ್ಬಿಣದ ಬಾಣಲೆಯಿಂದ ಹೊಡೆದು, ಕುತ್ತಿಗೆಗೆ 30 ಬಾರಿ ಚಾಕುವಿನಿಂದ ಚುಚ್ಚಿ ಕೊಂದ ಆಘಾತಕಾರಿ ಘಟನೆಯೊಂದು ಅಮೆರಿಕಾದಲ್ಲಿ ನಡೆದಿದೆ.
ಮೃತಳನ್ನು ಬ್ರೆಂಡಾ ಪೋವೆಲ್(50) ಎಂದು ಗುರುತಿಸಲಾಗಿದೆ. ಸಿಡ್ನಿ ಪೋವೆಲ್, ತಾಯಿಯನ್ನು ಕೊಂದ ಪಾಪಿ ಮಗಳು. ತಾನು ಕಾಲೇಜಿನಿಂದ ಹೊರಹಾಕಲ್ಪಟ್ಟಿದ್ದಳು. ಈ ವಿಚಾರ ಬ್ರೆಂಡಾಗೆ ತಿಳಿದಿದೆ. ಹೀಗಾಗಿ ಈ ವಿಚಾರ ಸಂಬಂಧ ತಾಯಿ ತನ್ನ ಮಗಳನ್ನು ಪ್ರಶ್ನೆ ಮಾಡಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಮಗಳಿಂದ ಈ ಕೊಲೆ ನಡೆದಿದೆ ಎಂಬುದಾಗಿ ವರದಿಯಾಗಿದೆ.
Advertisement
2020ರ ಮಾರ್ಚ್‍ನಲ್ಲಿ ಸಿಡ್ನಿ ಪೋವೆಲ್ ರಾಡ್‍ನಿಂದ ಬ್ರೆಂಡಾ ಪೋವೆಲ್ ಅವರ ತಲೆಗೆ ಹೊಡೆದಿದ್ದಾಳೆ. ನಂತರ ಕುತ್ತಿಗೆಗೆ ಸುಮಾರು 30 ಬಾರಿ ಇರಿದಿದ್ದಾರೆ ಎಂದು ಸಮ್ಮಿಟ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
Advertisement
Advertisement
2020ರ ಮಾರ್ಚ್ 3 ರಂದು ಬ್ರೆಂಡಾ ಅವರ ಸ್ಕಡರ್ ಡ್ರೈವ್ ಮನೆಯೊಳಗೆ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಗಾಯಗೊಂಡು ಸಾವನ್ನಪ್ಪಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸತ್ತ ಇಲಿ ಬಾಯಲ್ಲಿಟ್ಟುಕೊಂಡು ಕಾವೇರಿ ನೀರು ಹರಿಸುವಂತೆ ತಮಿಳುನಾಡಿನ ರೈತರು ಪ್ರತಿಭಟನೆ
Advertisement
ಪೋವೆಲ್ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದರು, ಆಕೆ ತನ್ನ ತಾಯಿಯನ್ನು ಕೊಲೆ ಮಾಡಿದಾಗ, ಮಾನಸಿಕ ಸ್ಥಿತಿ ಸರಿ ಇರಲಿಲ್ಲ ಎಂದು ವಕೀಲರು ವಾದಿಸಿದ್ದಾರೆ. ಆದರೆ ವಕೀಲರ ವಾದ ಸರಿ ಇಲ್ಲ. ಪೋವೆಲ್ ತನ್ನ ತಾಯಿಗೆ ಒಂದು ಬಾರಿಯಲ್ಲ 30 ಬಾರಿ ಇರಿದಿದ್ದಾಳೆ. ಆಕೆಯ ಉದ್ದೇಶ ತಾಯಿಯನ್ನು ಕೊಲ್ಲುವುದೇ ಆಗಿತ್ತೆಂದು ನ್ಯಾಯಾಲಯ ತಿಳಿಸಿದೆ.
ಮೌಂಟ್ ಯೂನಿಯನ್ ಯೂನಿವರ್ಸಿಟಿಯ ಹಳೆಯ ವಿದ್ಯಾರ್ಥಿನಿ ಪೋವೆಲ್ ಅನ್ನು ತಪ್ಪಿತಸ್ಥೆ ಎಂದು ಕೋರ್ಟ್ ಘೋಷಿಸಿದೆ. ಸೆಪ್ಟೆಂಬರ್ 28ರಂದು ಸಿಡ್ನಿ ಪೋವೆಲ್ ಶಿಕ್ಷೆಯನ್ನು ಕೋರ್ಟ್ ಪ್ರಕಟಿಸಲಿದೆ.
Web Stories