ವಾಷಿಂಗ್ಟನ್: 18 ವರ್ಷದ ಯುವಕನೊಬ್ಬ ಅಮೆರಿಕ ನ್ಯೂಯಾರ್ಕ್ ಬಫೆಲೋ ಸೂಪರ್ ಮಾರ್ಕೆಟ್ ದಿನಸಿ ಮಳಿಗೆಯೊಂದರಲ್ಲಿ ಭೀಕರ ಗುಂಡಿನ ದಾಳಿ ನಡೆಸಿ, 10 ಮಂದಿಯನ್ನು ಹತ್ಯೆಗೈದಿದ್ದಾನೆ. ಕಳೆದ 48 ಗಂಟೆಯಲ್ಲಿ ಎರಡು ಕಡೆ ಗುಂಡಿನ ದಾಳಿ ನಡೆದಿದ್ದು, ಇದು ಜನಾಂಗೀಯ ಪ್ರೇರಿತ ದಾಳಿ ಎಂಬುದು ಸ್ಪಷ್ಟವಾಗಿದೆ.
ದುಷ್ಕರ್ಮಿಯು ಗುಂಡಿನ ದಾಳಿ ನಡೆಸಿದ್ದಲ್ಲದೆ, ಕೃತ್ಯವನ್ನು ತನ್ನ ಕ್ಯಾಮೆರಾ ಮೂಲಕ ನೇರಪ್ರಸಾರ ಮಾಡಿದ್ದಾನೆ. ಸೇನಾ ಸಾಧನಗಳನ್ನು ಧರಿಸಿ ಬಿಳಿ ವರ್ಣೀಯ ದಾಳಿಕೋರನನ್ನು ಹತ್ಯಾಕಾಂಡದ ಬಳಿಕ ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಜೋಸೆಫ್ ಗ್ರಾಮಾಗ್ಲಿಯಾ ಹೇಳಿದ್ದಾರೆ. ಇದನ್ನೂ ಓದಿ: ಉತ್ತರ ಕೊರಿಯಾದಲ್ಲಿ ಕೊರೊನಾ ಸ್ಫೋಟ – ಮೂರೇ ದಿನಕ್ಕೆ 12 ಲಕ್ಷ ಮಂದಿಗೆ ಸೋಂಕು
Advertisement
Advertisement
ಜನಾಂಗೀಯ ಪ್ರೇರಿತ ದಾಳಿ: ಗುಂಡಿನ ದಾಳಿಯಲ್ಲಿ 10 ಮಂದಿ ಬಲಿಯಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಬಲಿಯಾದ ಹೆಚ್ಚಿನವರು ಕಪ್ಪು ವರ್ಣೀಯರಾಗಿದ್ದಾರೆ. ಹಾಗಾಗಿ ಇದು ಜನಾಂಗೀತ ಪ್ರೇರಿತ ದಾಳಿ ಎಂಬುದು ಗೋಚರವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಒಂದೇ ದಿನ 1.74 ಲಕ್ಷ ಮಂದಿಗೆ ಜ್ವರ- ಉತ್ತರ ಕೊರಿಯಾದಲ್ಲಿ 21 ಸಾವು
Advertisement
ಟಾಪ್ಸ್ ಸೂಪರ್ ಮಾರ್ಕೆಟ್‌ಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊತ್ತು ಬಂದ ದಾಳಿಕೋರ, ಮೊದಲು ಪಾರ್ಕಿಂಗ್ ಲಾಟ್‌ನಲ್ಲಿದ್ದ ನಾಲ್ವರು ವ್ಯಕ್ತಿಗಳ ಮೇಲೆ ಗುಂಡು ಹಾರಿಸಿದ್ದಾನೆ. ಅವರಲ್ಲಿ ಮೂವರು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ. ಬಳಿಕ ಸೂಪರ್ ಮಾರ್ಕೆಟ್ ಒಳಗೆ ನುಗ್ಗಿದ ಆತ, ಗುಂಡಿನ ದಾಳಿ ಮುಂದುವರಿಸಿದ್ದಾನೆ. ಅಂಗಡಿ ಒಳಗೆ ಹತ್ಯೆಯಾದವರಲ್ಲಿ ಸಶಸ್ತ್ರ ಭದ್ರತಾ ಕಾವಲು ವಿಭಾಗದಲ್ಲಿ ಕೆಲಸ ಮಾಡಿದ್ದ ನಿವೃತ್ತ ಪೊಲೀಸ್ ಅಧಿಕಾರಿಯೂ ಇದ್ದಾರೆ ಎಂದು ಗ್ರಾಮಗ್ಲಿಯಾ ತಿಳಿಸಿದ್ದಾರೆ.
Advertisement
ನಿವೃತ್ತ ಪೊಲೀಸ್ ಅಧಿಕಾರಿ ಶಂಕಿತನ ವಿರುದ್ಧ ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಆದರೆ, ಬುಲೆಟ್‌ಪ್ರೂಫ್ ಧರಿಸಿದ್ದ ದಾಳಿಕೋರ ತನ್ನನ್ನು ರಕ್ಷಿಸಿಕೊಂಡು ನಿವೃತ್ತ ಅಧಿಕಾರಿಯನ್ನು ಹತ್ಯೆಗೈದಿದ್ದಾನೆ. ಈ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸಿದ ಪೊಲೀಸರೊಂದಿಗೆ ಕೆಲಕಾಲ ವಾಗ್ವಾದ ನಡೆಸಿದ್ದಾನೆ. ತನ್ನ ಕುತ್ತಿಗೆಗೆ ಬಂದೂಕು ಹಿಡಿದುಕೊಂಡು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಬೆದರಿಸಿದ್ದಾನೆ. ಅಂತಿಮವಾಗಿ ಶರಣಾಗಿದ್ದಾನೆ. ಇದನ್ನೂ ಓದಿ: ಕಂಗೆಟ್ಟ ಶ್ರೀಲಂಕಾಕ್ಕೆ ಎಲ್‌ಟಿಟಿಇ ದಾಳಿಯ ಭೀತಿ – ಹೈ ಅಲರ್ಟ್
ಈ ಗುಂಡಿನ ದಾಳಿ ದ್ವೇಷ ಅಪರಾಧ ಮತ್ತು ಜನಾಂಗೀಯ ಪ್ರೇರಿತ ಕೃತ್ಯವೇ ಎಂಬ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಎಫ್‌ಬಿಐನ ಬಫೆಲೋ ಕ್ಷೇತ್ರ ಕಚೇರಿ ಉಸ್ತುವಾರಿ ಸ್ಟೀಫನ್ ಬೆಲೊಂಗಿಯಾ ತಿಳಿಸಿದ್ದಾರೆ.