ವಾಷಿಂಗ್ಟನ್: ಅಮೆರಿಕಾದಲ್ಲಿ (US) ಹಿಮ ಸುನಾಮಿ (Bomb Cyclone) ಭೀಭತ್ಸ ಸೃಷ್ಟಿಸಿದೆ. ತೀವ್ರ ಶೀತಗಾಳಿಗೆ ಉಷ್ಣಾಂಶ ದೊಡ್ಡ ಪ್ರಮಾಣದಲ್ಲಿ ಬಿದ್ದುಹೋಗ್ತಿದೆ. ಮೈನಸ್ 50 ಡಿಗ್ರಿವರೆಗೂ ತಾಪಮಾನ ಕುಸಿದಿದೆ. ನಿನ್ನೆಯಷ್ಟೇ 38 ಇದ್ದ ಸಾವಿನ ಪ್ರಮಾಣ ಇಂದು ಏಕಾ-ಏಕಿ 60ರ ಗಡಿ ದಾಟಿದೆ.
ನ್ಯೂಯಾರ್ಕ್ ಸಿಟಿ (Newyork City) ಒಂದರಲ್ಲೇ 27 ಮಂದಿ ಸೇರಿದಂತೆ ದೇಶಾದ್ಯಂತ ಸುಮಾರು 60 ಮಂದಿ ಮೃತಪಟ್ಟಿದ್ದಾರೆ. ಅತಿಯಾದ ಹಿಮದಿಂದಾಗಿ ಕಾರು, ಬಸ್, ಅಂಬುಲೆನ್ಸ್ ಹಾಗೂ ಟ್ರಕ್‌ಗಳು ಹಿಮದಲ್ಲಿ ಹೂತು ಹೋಗಿವೆ. ಇದರಿಂದ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವುದು ಕಷ್ಟ ಸಾಧ್ಯವಾಗಿದೆ. ಇಂದು ಬೆಳಗ್ಗೆಯಿಂದ ಭಾರೀ ಪ್ರಮಾಣದಲ್ಲಿ ಹಿಮ ಸುರಿಯುತ್ತಿದೆ. ಪಶ್ಚಿಮ ನ್ಯೂಯಾರ್ಕ್ನಲ್ಲಿ ಸುಮಾರು 9 ಇಂಚು (23 ಸೆಂ.ಮೀ.) ಪ್ರಮಾಣದಲ್ಲಿ ಹಿಮ ಬೀಳುತ್ತಿದೆ. ಇದನ್ನೂ ಓದಿ: ಹಿಮ ಸುನಾಮಿಗೆ ಅಮೆರಿಕ, ಕೆನಡಾ ತಲ್ಲಣ – ಫ್ರಿಡ್ಜ್‌ನಂತಾದ ವಾಹನಗಳು, 38 ಮಂದಿ ಸಾವು
15 ಸಾವಿರ ವಿಮಾನ (Airlines) ಸಂಚಾರ ರದ್ದು: ಕುಡಿಯುವ ನೀರಿಗೂ ಜನ ಪರದಾಡುವಂತಾಗಿದೆ. 15 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸರಬರಾಜು ಬಂದ್ ಆಗಿದ್ದು, ಜನ ಕತ್ತಲಲ್ಲಿ ಕೊಳೆಯುವಂತಾಗಿದೆ. ಅಂದಾಜು 20 ಕೋಟಿ ಮಂದಿ ಸಂತ್ರಸ್ತರಾಗಿದ್ದಾರೆ. ಕನಿಷ್ಠ 17 ಮಂದಿ ಸಾವನ್ನಪ್ಪಿದ್ದಾರೆ. ಈ ನಡುವೆ ಕಳೆದ ಮೂರ್ನಾಲ್ಕು ದಿನಗಳಿಂದ ಸುಮಾರು 15 ಸಾವಿರ ವಿಮಾನ ಸಂಚಾರ ರದ್ದಾಗಿದೆ. ಇದನ್ನೂ ಓದಿ: ಜನಾಂಗೀಯ ದಾಳಿ – ಫ್ರಾನ್ಸ್‌ನಲ್ಲಿ ಹಿಂಸಾತ್ಮಕ ಪ್ರತಿಭಟನೆ, ಕಾರುಗಳಿಗೆ ಬೆಂಕಿ ಹಚ್ಚಿ ಆಕ್ರೋಶ
ಅಮೆರಿಕ-ಕೆನಡಾ ಮಧ್ಯೆ ಆರ್ಕಟಿಕ್ ಬ್ಲಾಸ್ಟ್ ಹೋಗಿ ಬಾಂಬ್ ಸೈಕ್ಲೋನ್ (Bomb Cyclone) ಆಗಿದೆ. ಅಮೆರಿಕ-ಕೆನಡಾ ನಡುವೆ ಹಿಮರಾಶಿ ಹರಡುತ್ತಲೇ ಇದೆ. ಟೆಕ್ಸಾಸ್‌ನಿಂದ ಕ್ಯೂಬೆಕ್‌ವರೆಗೆ ಸುಮಾರು 3,200 ಕಿ.ಮೀ.ವರೆಗೆ ಹಿಮ ಆವರಿಸಿದೆ. ನ್ಯೂಯಾರ್ಕ್, ಬಫೆಲೋ ಮಿಚಿಗನ್, ಒರ್ಲಾಂಡೋ, ಡೆನ್ವರ್, ದಲ್ಲಾಸ್, ನಾಶ್‌ವಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ಹೆದ್ದಾರಿಗಳಲ್ಲಿ ದಾರಿ ಕಾಣದೆ ಸರಣಿ ಅಪಘಾತಗಳಾಗಿವೆ. ಎಲ್ಲೆಂದರಲ್ಲೇ ಜನ, ವಾಹನಗಳು ಫ್ರೀಜ್ ಆಗುತ್ತಿದ್ದಾರೆ. ಭಾರೀ ಪ್ರಮಾಣದಲ್ಲಿ ಹಿಮ ಸುರಿಯುತ್ತಿರುವ ಕಾರಣ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ. ಓಹಿಯೋದಲ್ಲಿ ಹಿಮ ತೂಫಾನ್ ಕಾರಣದಿಂದ 50 ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ.