ವಾಷಿಂಗ್ಟನ್: ಉಕ್ರೇನ್ ವಿರುದ್ಧ ದಾಳಿ ನಡೆಸುತ್ತಿರುವ ರಷ್ಯಾಗೆ ಚೀನಾ ಯಾವುದೇ ಸಹಾಯವನ್ನು ಮಾಡದಂತೆ ಅಮೆರಿಕ ಚೀನಾಗೆ ಎಚ್ಚರಿಕೆ ನೀಡಿದೆ.
ಉಕ್ರೇನ್ ವಿರುದ್ಧ ದಾಳಿ ತನ್ನ ಯುದ್ಧವನ್ನು ಮುಂದುವರಿಸಲು ರಷ್ಯಾ ಡ್ರೋನ್‍ಗಳು ಸೇರಿದಂತೆ ಮಿಲಿಟರಿ ನೆರವು ನೀಡುವಂತೆ ಚೀನಾವನ್ನು ಕೇಳಿತ್ತು. ಈ ಸುದ್ದಿ ಎಲ್ಲೆಡೆ ವರದಿಯಾಗುತ್ತಿದ್ದಂತೆ ಅಮೆರಿಕ ರಷ್ಯಾಗೆ ಯಾವುದೇ ರೀತಿಯ ಸಹಾಯವನ್ನು ಚೀನಾ ಮಾಡಬಾರದು ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ದ – ಚೀನಾದ ಮಿಲಿಟರಿ ನೆರವು ಕೇಳಿದ ರಷ್ಯಾ
ರಷ್ಯಾದ ಆರ್ಥಿಕತೆಯನ್ನು ಕುಗ್ಗಿಸುವ ಜಾಗತಿಕ ನಿರ್ಬಂಧಗಳಿಂದ ರಷ್ಯಾ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ ಮತ್ತು ಉಕ್ರೇನ್ ವಿರುದ್ಧ ಯುದ್ಧ ನಡೆಸಲು ಮಾಸ್ಕೋಗೆ ಮಿಲಿಟರಿ ನೆರವು ನೀಡುವಂತೆ ಚೀನಾಗೆ ಕೋರಿದೆ. ಹಾಗಾಗಿ ರಷ್ಯಾಗೆ ಚೀನಾ ಯಾವುದೇ ರೀತಿಯ ಸಹಾಯ ಮಾಡಬಾರದು ಎಂದು ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ತಿಳಿಸಿದ್ದಾರೆ.
ಮತ್ತೊಂದೆಡೆ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಅಮೆರಿಕವು ಚೀನಾದ ವಿರುದ್ಧ ತಪ್ಪು ಮಾಹಿತಿಗಳನ್ನು ಕೆಟ್ಟ ಉದ್ದೇಶದಿಂದ ಹರಡುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ರಸ್ತೆ ಗುಂಡಿಗೆ ಬಲಿಯಾದ ಅಶ್ವಿನ್ ಕುಟುಂಬಕ್ಕೆ ಉಚಿತ ಸೈಟ್: ಎಸ್.ಆರ್ ವಿಶ್ವನಾಥ್
ಉಕ್ರೇನ್ ವಿಷಯದಲ್ಲಿ ಚೀನಾದ ನಿಲುವು ಸ್ಥಿರ ಮತ್ತು ಸ್ಪಷ್ಟವಾಗಿದೆ. ನಾವು ಯಾವಾಗಲೂ ಶಾಂತಿಯನ್ನು ಮನವೊಲಿಸುವಲ್ಲಿ ಮತ್ತು ಮಾತುಕತೆಗಳನ್ನು ಉತ್ತೇಜಿಸುವಲ್ಲಿ ಹೆಚ್ಚಾಗಿ ಪಾತ್ರವನ್ನು ವಹಿಸಿದ್ದೇವೆ ಎಂದು ಹೇಳಿದ್ದಾರೆ.