– ಭಯೋತ್ಪಾದನೆ ವಿರುದ್ಧ ಭಾರತದೊಂದಿಗೆ ಸಹಕರಿಸಲು ಬದ್ಧ ಎಂದ ಯುಎಸ್
ವಾಷಿಂಗ್ಟನ್: ಪಹಲ್ಗಾಮ್ ಉಗ್ರರ ದಾಳಿ (Pahalgam Terror Attack) ತನಿಖೆಗೆ ಪಾಕಿಸ್ತಾನ (Pakistan) ಸಹಕರಿಸಬೇಕು ಎಂದು ಅಮೆರಿಕ ಬುದ್ದಿಮಾತು ಹೇಳಿದೆ.
26 ಜೀವಗಳನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಶಮನಕ್ಕೆ ಯುನೈಟೆಡ್ ಸ್ಟೇಟ್ಸ್ (US) ಮುಂದಾಗಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಕರೆ ಮಾಡಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಸೋನಾಮಾರ್ಗ್ ಸುರಂಗ ದಾಳಿಯಲ್ಲಿ 7 ಜನರನ್ನು ಬಲಿಪಡೆದಿದ್ದ ಉಗ್ರರ ಟೀಮ್‌ನಿಂದಲೇ ಪಹಲ್ಗಾಮ್ ದಾಳಿ
ಭಯೋತ್ಪಾದನೆಯ ವಿರುದ್ಧ ಭಾರತದೊಂದಿಗೆ ಸಹಕರಿಸಲು ಯುಎಸ್ ಬದ್ಧವಾಗಿದೆ ಎಂದು ರುಬಿಯೊ ಸ್ಪಷ್ಟಪಡಿಸಿದ್ದಾರೆ. ಕಾಶ್ಮೀರದಲ್ಲಿ ನಡೆದ ಈ ಅಸಮರ್ಪಕ ದಾಳಿಯ ತನಿಖೆಗೆ ಪಾಕಿಸ್ತಾನ ಸಹಕರಿಸಬೇಕು ಎಂದು ಅಮೆರಿಕ ಒತ್ತಾಯಿಸಿದೆ.
ಪಹಲ್ಗಾಮ್ ದಾಳಿಯಿಂದ ಜೀವ ಕಳೆದುಕೊಂಡವರ ಬಗ್ಗೆ ಅಮೆರಿಕ ವಿಷಾದ ವ್ಯಕ್ತಪಡಿಸಿತು. ಭಯೋತ್ಪಾದನೆ ವಿರುದ್ಧ ಭಾರತಕ್ಕೆ ಸಹಕಾರ ನೀಡಲು ನಾವು ಬದ್ಧ. ಆದರೆ, ದಕ್ಷಿಣ ಏಷ್ಯಾದಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಶಾಂತಿ, ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು ಎಂದು ಜೈಶಂಕರ್‌ಗೆ ಕರೆ ಮಾಡಿ ರುಬಿಯೊ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಆಯ್ಕೆ ಮಾಡಿದ್ದು 4, ಟಾರ್ಗೆಟ್ 1 – ದಾಳಿಗೆ ಪಕ್ಕಾ ಪ್ಲ್ಯಾನ್ ಮಾಡಿದ್ದ ಉಗ್ರರು
ಪ್ರಧಾನಿ ಷರೀಫ್ ಅವರೊಂದಿಗೆ ಕರೆ ಮಾಡಿ ಮಾತನಾಡುವಾಗ, ಏಪ್ರಿಲ್ 22 ರಂದು ಕಾಶ್ಮೀರದಲ್ಲಿ ನಡೆದ ದಾಳಿಯನ್ನು ಪಾಕಿಸ್ತಾನ ಖಂಡಿಸಬೇಕು. ಜೊತೆಗೆ ತನಿಖೆಗೆ ಸಹಕರಿಸಬೇಕು ಎಂದು ತಿಳಿಹೇಳಿದ್ದಾರೆ.