ವಾಷಿಂಗ್ಟನ್: ಇರಾನ್ ಬೆಂಬಲಿತ ಹೌತಿ (Houthi) ಬಂಡುಕೋರರ ವಿರುದ್ಧ ಸಿಟ್ಟಿಗೆದ್ದಿರುವ ಅಮೆರಿಕ ಉಗ್ರರ ವಿರುದ್ಧ ಸಮರ ಸಾರಿದೆ. ಅಮೆರಿಕ ಮತ್ತು ಬ್ರಿಟನ್ ಜಂಟಿಯಾಗಿ ಶನಿವಾರ ಯೆಮೆನ್‌ನಲ್ಲಿರುವ (Yemen) ಸರಿಸುಮಾರು 36 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿವೆ.
ಕಳೆದ ಜನವರಿ 28 ರಂದು ಜೋರ್ಡಾನ್‌ನಲ್ಲಿ US ಮೂವರು ಸೈನಿಕರ ಹತ್ಯೆಗೆ ಪ್ರತಿಕ್ರಿಯೆಯಾಗಿ ಇರಾಕ್ ಮತ್ತು ಸಿರಿಯಾದಲ್ಲಿರುವ ಹೌತಿ ನೆಲೆಗಳ ಮೇಲೆ ಅಮೆರಿಕದ ಏಕಪಕ್ಷೀಯ ದಾಳಿ ನಡೆಸಿತ್ತು. ಅದಾದ ಒಂದು ದಿನದ ಬಳಿಕ ಯೆಮೆನ್ನಲ್ಲಿ ಜಂಟಿ ವಾಯು ದಾಳಿಗಳು ನಡೆದಿವೆ ಎಂದು ವರದಿಯಾಗಿವೆ.
ಅಂತಾರಾಷ್ಟ್ರೀಯ ಮತ್ತು ವಾಣಿಜ್ಯ ಹಡಗುಗಳು ಹಾಗೂ ಕೆಂಪು ಸಮುದ್ರದಲ್ಲಿ ಸಾಗುವ ನೌಕೆಗಳ ವಿರುದ್ಧ ಹೌತಿಗಳ ನಿರಂತರ ದಾಳಿಗೆ ಪ್ರತಿಕ್ರಿಯೆಯಾಗಿ ಯೆಮೆನ್‌ನ 13 ಸ್ಥಳಗಳಲ್ಲಿರುವ 36 ಹೌತಿ ನೆಲೆಗಳ ಮೇಲೆ ಈ ದಾಳಿ ನಡೆದಿದೆ ಎಂದು ಕಾರ್ಯಾಚರಣೆಗೆ ಬೆಂಬಲ ನೀಡಿದ ಯುನೈಟೆಡ್ ಸ್ಟೇಟ್ಸ್, ಬ್ರಿಟನ್ ಮತ್ತು ಇತರ ದೇಶಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿವೆ. ಇದನ್ನೂ ಓದಿ: ಕಾನೂನುಬಾಹಿರ ವಿವಾಹ – ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ದಂಪತಿಗೆ 7 ವರ್ಷ ಜೈಲು
ಜಾಗತೀಕ ವ್ಯಾಪಾರ ಮತ್ತು ಮುಗ್ಧ ನಾವಿಕರ ಜೀವಕ್ಕೆ ಹೌತಿ ಬಂಡುಕೋರರು ಬೆದರಿಕೆ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೌತಿ ಉಗ್ರರ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಹೌತಿ ಉಗ್ರರ ಶಸ್ತ್ರಾಸ್ತ್ರ ಸಂಗ್ರಹಣಾ ಸೌಲಭ್ಯಗಳು, ಕ್ಷಿಪಣಿ ವ್ಯವಸ್ಥೆಗಳು ಮತ್ತು ಲಾಂಚರ್ಗಳ ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ರಾಡಾರ್ಗೆ ಸಂಬಂಧಿಸಿದ ತಾಣಗಳನ್ನು ಗುರಿಯಾಗಿಸಿ ಜಂಟಿ ದಾಳಿ ನಡೆದಿದೆ.
ಅಲ್ಲದೇ ಕೆಂಪು ಸಮುದ್ರದಲ್ಲಿ ಹಡಗುಗಳ ವಿರುದ್ಧ ಉಡಾಯಿಸಲು ಸಿದ್ಧವಾಗಿದ್ದ 6 ಹೌತಿ ಹಡಗು ಕ್ಷಿಪಣಿಗಳ ವಿರುದ್ಧ ಯುಎಸ್ ಪಡೆಗಳು ಶನಿವಾರ ಪ್ರತ್ಯೇಕವಾಗಿ ದಾಳಿ ನಡೆಸಿದ್ದವು ಎಂದು ಸೆಂಟ್ರಲ್ ಕಮಾಂಡ್ (ಸೆಂಟ್ಕಾಮ್) ತಿಳಿಸಿದೆ. ಇದನ್ನೂ ಓದಿ: ಜೈಲು ಶಿಕ್ಷೆ ವಿಧಿಸಿದ ಕೆಲವೇ ಗಂಟೆಗಳಲ್ಲಿ ಬಾಂಬ್ ಬ್ಲಾಸ್ಟ್ – ಇಮ್ರಾನ್ ಖಾನ್ ಪಕ್ಷದ ಮೂವರ ದುರ್ಮರಣ
ಕಳೆದ ಜನವರಿ 28ರಂದು ಸಿರಿಯಾ ಗಡಿ (Syrian Border) ಸಮೀಪದಲ್ಲಿರುವ ಈಶಾನ್ಯ ಜೋರ್ಡಾನ್‌ನಲ್ಲಿ ಅಮೆರಿಕ ಸೇನೆಯ ಮೇಲೆ ಡ್ರೋನ್ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಮೂರು ಸೈನಿಕರು (American Soldiers) ಸಾವನ್ನಪ್ಪಿದ್ದರು. ಈ ನಂತರ ಅಮೆರಿಕ ಪ್ರತೀಕಾರ ತೀರಿಸಿಕೊಳ್ಳೋದಾಗಿ ಸವಾಲು ಹಾಕಿತ್ತು.