ವಿಶ್ವಸಂಸ್ಥೆ: ಚೀನಾ ನಡುವಿನ ವ್ಯಾಪಾರ ಸಮರದಿಂದ 2019ರ ಮೊದಲಾರ್ಧದಲ್ಲಿ 755 ದಶಲಕ್ಷ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಭಾರತ ಅಮೆರಿಕಕ್ಕೆ ರಫ್ತು ಮಾಡಿದೆ ಎಂದು ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಹೂಡಿಕೆ ಸಂಸ್ಥೆ ಹೇಳಿದೆ.
ಅಮೆರಿಕ ಚೀನಾದ ಮೇಲೆ ವಾಣಿಜ್ಯ ಸಮರ ಪ್ರಾರಂಭಿಸಿದ ಬಳಿಕ ಏನೇನು ಪರಿಣಾಮವಾಗಿದೆ ಎನ್ನುವುದರ ಬಗ್ಗೆ ಸಂಸ್ಥೆ ಅಧ್ಯಯನ ಮಾಡಿ ವರದಿ ನೀಡಿದೆ. ಎರಡು ರಾಷ್ಟ್ರಗಳ ದ್ವಿಪಕ್ಷೀಯ ವ್ಯಾಪಾರ ದಿಢೀರ್ ಕುಸಿದಿದ್ದು, ಬೇರೆ ರಾಷ್ಟ್ರಗಳಿಂದ ಆಮದು ಹೆಚ್ಚಾಗಿದೆ ಎಂದು ತಿಳಿಸಿದೆ.
Advertisement
ವಾಣಿಜ್ಯ ಸಮರ ಆರಂಭಗೊಂಡ ಬಳಿಕ ತೈವಾನ್, ಮೆಕ್ಸಿಕೋ, ಯುರೋಪಿಯನ್ ದೇಶಗಳಿಂದ ಅಮೆರಿಕಕ್ಕೆ ವಸ್ತುಗಳು ರಫ್ತು ಆಗುವುದು ಹೆಚ್ಚಾಗಿದೆ. ಭಾರತ, ದಕ್ಷಿಣ ಕೊರಿಯ, ಕೆನಡಾದಿಂದ ಭಾರೀ ಪ್ರಮಾಣದಲ್ಲಿ ರಫ್ತು ಹೆಚ್ಚಾಗದೇ ಇದ್ದರೂ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ.
Advertisement
Advertisement
ಭಾರತದಿಂದ ಒಟ್ಟು 799 ದಶಲಕ್ಷ ಡಾಲರ್ ಮೌಲ್ಯದ ರಫ್ತಾಗಿದ್ದು ಅದರಲ್ಲೂ ಹೆಚ್ಚಾಗಿ ರಾಸಾಯನಿಕ (243 ದಶಲಕ್ಷ ಡಾಲರ್), ಲೋಹ ಮತ್ತು ಅದಿರು(243 ದಶಲಕ್ಷ ಡಾಲರ್) ಎಲೆಕ್ಟ್ರಿಕಲ್ ಯಂತ್ರೋಪಕರಣಗಳು(83 ದಶಲಕ್ಷ ಡಾಲರ್), ಇತರೇ ಯಂತ್ರೋಪಕರಣಗಳು(68 ದಶಲಕ್ಷ ಡಾಲರ್) ಜೊತೆ ಕೃಷಿ ಆಹಾರ, ಪಿಠೋಪಕರಣ, ಆಫೀಸ್ ಉಪಕರಣಗಳು, ಜವಳಿ ಮತ್ತು ಉಡುಪು, ಸಾರಿಗೆ ಉಪಕರಣಗಳು ರಫ್ತಾಗಿದೆ ಎಂದು ಅಧ್ಯಯನ ತಿಳಿಸಿದೆ.
Advertisement
ಚೀನಾಕ್ಕೆ ಒಟ್ಟು 35 ಶತಕೋಟಿ ಡಾಲರ್ ರಫ್ತು ನಷ್ಟವಾಗಿದ್ದು ಇದರಲ್ಲಿ 21 ಶತಕೋಟಿ ಡಾಲರ್(ಶೇ.62) ರಫ್ತು ಉಳಿದ ರಾಷ್ಟ್ರಗಳಿಗೆ ಹಂಚಿಕೆಯಾಗಿದೆ. ಉಳಿದ 14 ಶತಕೋಟಿ ಡಾಲರ್ ಅಮೆರಿಕಕ್ಕೆ ನಷ್ಟವಾಗಿರಬಹುದು ಅಥವಾ ಅಮೆರಿಕದ ಉತ್ಪಾದಕರೇ ಈ ಜಾಗವನ್ನು ಆಕ್ರಮಿಸಿಕೊಂಡಿರಬಹುದು ಎಂದು ವರದಿ ವಿಶ್ಲೇಷಿಸಿದೆ.
ಚೀನಾ ಮೇಲಿನ ವ್ಯಾಪಾರ ಸಮರ ಅಮೆರಿಕದ ಜನರ ಮೇಲೂ ಪರಿಣಾಮ ಬೀರಿದೆ. ಅಮೆರಿಕದ ಜನತೆ ದುಬಾರಿ ಬೆಲೆಯನ್ನು ನೀಡಿ ವಸ್ತುಗಳನ್ನು ಖರೀದಿಸುತ್ತಿದ್ದಾರೆ ಎಂದು ಹೇಳಿದೆ.
ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲೇ ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಧ್ಯಕ್ಷ ಪದವಿಗೆ ಏರಿದ ಮೇಲೆ 2018ರಲ್ಲಿ ಚೀನಾ ವಿರುದ್ಧ ವಾಣಿಜ್ಯ ಸಮರ ಆರಂಭಿಸಿದರು. ನಾವು ಅಭಿವೃದ್ಧಿ ಪಡಿಸಿದ ಸಾಫ್ಟ್ವೇರ್‌ಗಳು, ಪೇಟೆಂಟ್‌ಗಳು ಮತ್ತು ಇತರೆ ತಂತ್ರಜ್ಞಾನವನ್ನು ಚೀನಾ ಕದ್ದು ಲಾಭ ಮಾಡುತ್ತಿದೆ. ಇದಕ್ಕೆ ನಾನು ಕಡಿವಾಣ ಹಾಕುತ್ತೇನೆ ಎಂದು ಹೇಳಿದ ಟ್ರಂಪ್ 2018ರಿಂದ ಚೈನಾ ವಸ್ತುಗಳ ಮೇಲೆ ಆಮದು ಸುಂಕ ಹೇರಲು ಮುಂದಾದರು. ಇದನ್ನೂ ಓದಿ:ಅಮೆರಿಕ, ಚೀನಾ ಸಮರದಿಂದ ಭಾರತಕ್ಕೆ ಲಾಭ: ಅರುಣ್ ಜೇಟ್ಲಿ
ಅಭಿವೃದ್ಧಿ ಹೊಂದುತ್ತಿರುವ ದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡು ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯುಟಿಒ) ದಿಂದ ಚೀನಾ ಉಪಯೋಗ ಪಡೆಯುತ್ತಿವೆ. ಇನ್ಮುಂದೆ ಡಬ್ಲ್ಯುಟಿಒ ಲಾಭ ಪಡೆಯಲು ಬಿಡುವುದಿಲ್ಲ ಎಂದು ಟ್ರಂಪ್ ಗುಡುಗಿದ್ದರು.
ಅಮೆರಿಕ ಮೊದಲು ಎಂಬ ನಿಯಮಕ್ಕೆ ಆದ್ಯತೆ ನೀಡಿರುವ ಟ್ರಂಪ್, ಚೀನಾ ವಿಶ್ವ ವಾಣಿಜ್ಯ ಸಂಸ್ಥೆಯಿಂದ ಹಲವು ವರ್ಷಗಳಿಂದ ಸಾಕಷ್ಟು ಅನುಕೂಲ ಪಡೆದುಕೊಂಡಿವೆ. ಇದರಿಂದ ನಮಗೆ ನಷ್ಟವಾಗುತ್ತಿದೆ. ಇನ್ನು ಮುಂದೆ ಈ ಲಾಭವನ್ನು ಪಡೆದುಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದರು.