ವಾಷಿಂಗ್ಟನ್: ವಲಸಿಗರ ವಿಚಾರದಲ್ಲಿ ಅಮೆರಿಕ (America) ದಿನಕ್ಕೊಂದು ಕಠಿಣ ನಿಲುವು ತಾಳುತ್ತಿದೆ. ಇದೀಗ ಮತ್ತೆ ಹೊಸ ನಿಯಮವೊಂದನ್ನು ಜಾರಿ ಮಾಡಿದ್ದು, ವಲಸಿಗರಿಗೆ ಅಮೆರಿಕ ಸರ್ಕಾರ (America Government) ಎಚ್ಚರಿಕೆ ನೀಡಿದೆ.
ಹೌದು, ಸೋಷಿಯಲ್ ಮೀಡಿಯಾದಲ್ಲಿ ಯಾರಾದರೂ ಯಹೂದಿಗಳ ವಿರುದ್ಧ ಪೋಸ್ಟ್ ಹಾಕಿದರೆ ಅಂಥವರಿಗೆ ವೀಸಾ ಹಾಗೂ ಗ್ರೀನ್ ಕಾರ್ಡ್ ನೀಡುವುದಿಲ್ಲ ಎಂದು ತಿಳಿಸಿದೆ. ಜೊತೆಗೆ ಈ ಆದೇಶ ತಕ್ಷಣದಿಂದಲೇ ಜಾರಿಯಾಗಲಿದೆ ಎಂದು ವಲಸಿಗರನ್ನು ಎಚ್ಚರಿಸಿದೆ.ಇದನ್ನೂ ಓದಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ – ಅಕಾಲಿಕ ಮಳೆಗೆ ನೆಲಕಚ್ಚಿದ ಬೆಳೆ, ರೈತರು ಕಂಗಾಲು
ವಿದ್ಯಾರ್ಥಿ ವೀಸಾ ಸೇರಿದಂತೆ ಗ್ರೀನ್ ಕಾರ್ಡ್ ಅರ್ಜಿದಾರರೆಲ್ಲರ ಸೋಷಿಯಲ್ ಮೀಡಿಯಾ ಖಾತೆಗಳ ಮೇಲೆ ನಿಗಾ ವಹಿಸುತ್ತೇವೆ ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ವಿಭಾಗ ಸ್ಪಷ್ಟಪಡಿಸಿದೆ. ಜೊತೆಗೆ ಉಗ್ರ ಸಂಘಟನೆಗಳು ಎಂದು ಅಮೆರಿಕ ವರ್ಗೀಕರಿಸಿದ ಹಮಾಸ್, ಪ್ಯಾಲಿಸ್ತೇನಿಯನ್ ಇಸ್ಲಾಮಿಕ್ ಜಿಹಾದ್, ಲೆಬನಾನ್‌ನ ಹೆಜ್ಬುಲ್ಲಾ, ಯೆಮೆನ್‌ನ ಹೂತಿಗಳಿಗೆ ಬೆಂಬಲ ಕೊಟ್ಟರೆ ಅದನ್ನು ಯಹೂದಿ ವಿರೋಧಿ ಎಂದು ಪರಿಗಣಿಸಲಾಗುವುದು ಎಂದು ಉಲ್ಲೇಖಿಸಿದೆ.
ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿರುವವರಿಗೆ ಅಮೆರಿಕದಲ್ಲಿ ಜಾಗವಿಲ್ಲ. ಈಗಾಗಲೇ ಅಮೆರಿಕಾದಲ್ಲಿ ಇರುವ ವಲಸಿಗರು, ಯಹೂದಿಗಳ ವಿರುದ್ಧ ಪೋಸ್ಟ್ ಮಾಡಿದರೆ ಅವರ ವೀಸಾ ರದ್ದಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.ಇದನ್ನೂ ಓದಿ: 64 ವಯಸ್ಸಿನ ಉಗ್ರ ರಾಣಾ ಫೋಟೊ ರಿಲೀಸ್