ಲಾಸ್ ಏಂಜಲಿಸ್: ಕೆಲವೊಮ್ಮೆ ಕಿವಿಯೊಳಗೆ ಇರುವೆಯೋ, ಜಿರಲೆಯೋ ಹೋಗಿ ಸಿಲುಕಿಕೊಂಡಿರೋ ಘಟನೆ ಬಗ್ಗೆ ಕೇಳಿರ್ತೀವಿ. ಆದ್ರೆ ಅಮೆರಿಕದಲ್ಲಿ ಯುವತಿಯೊಬ್ಬಳ ಕಿವಿಯ ರಂಧ್ರದಲ್ಲಿ ಹೆಬ್ಬಾವೊಂದು ಸಿಕ್ಕಿ ಹಾಕಿಕೊಂಡ ಘಟನೆ ನಡೆದಿದೆ.
Advertisement
ನಂಬಲು ಅಸಾಧ್ಯವಾದ್ರೂ ಇದು ನಿಜ. ಇಲ್ಲಿನ ಒರೆಗಾನ್ ನಿವಾಸಿಯಾದ 17 ವರ್ಷದ ಆಶ್ಲೀ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಆಕೆ ಸಾಕಿದ್ದ ಬಾಲ್ ಪೈಥಾನ್ ಜಾತಿಯ ಬಾರ್ಟ್ ಎಂಬ ಹೆಬ್ಬಾವು ಕಿವಿಯಲ್ಲಿ ಸಿಲುಕಿಕೊಂಡಿದೆ. ಈ ವೇಳೆ ಆಕೆ ಗಾಬರಿಗೊಂಡು ಹಾವನ್ನು ಹೊರಗೆಳೆಯಲು ಹರಸಾಹಸ ಪಟ್ಟಿದ್ದಾಳೆ. ಆದ್ರೆ ಅದು ಸಾಧ್ಯವಾಗದಿದ್ದಾಗ ಎಮರ್ಜೆನ್ಸಿ ನಂಬರ್ ಗೆ ಕರೆ ಮಾಡಿದ್ದಾಳೆ. ಕೂಡಲೇ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದಿದ್ದು, ಅವರೂ ಕೂಡ ಹಾವನ್ನು ತೆಗೆಯಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ಬಳಿಕ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದು, ವೈದ್ಯರು ಆಕೆಯ ಕಿವಿಯನ್ನು ಮರಗಟ್ಟುವಂತೆ ಔಷಧಿ ನೀಡಿ ಹಾವನ್ನು ಹೊರತೆಗೆದಿದ್ದಾರೆ.
Advertisement
Advertisement
ಕಿವಿಯ ರಂಧ್ರದೊಳಗೆ ಹಾವು ಹೋಗಲು ಹೇಗೆ ಸಾಧ್ಯ?: ಕಿವಿಯಲ್ಲಿ ದೊಡ್ಡದಾದ ರಂಧ್ರವಾಗುವಂತೆ ಕಿವಿ ಚುಚ್ಚಿಸುವುದು ಇತ್ತೀಚಿನ ಫ್ಯಾಶನ್. ಇದಕ್ಕೆ ಸ್ಟ್ರೆಚ್ ಪಿಯರ್ಸಿಂಗ್ ಅಂತಾರೆ. ರಿಂಗ್‍ವೊಂದನ್ನು ಕಿವಿಯ ಆಲೆಗೆ ಹಾಕಲಾಗಿರುತ್ತದೆ. ಆಶ್ಲೀ ಕೂಡ ಇದೇ ರೀತಿ ಕಿವಿ ಚುಚ್ಚಿಸಿಕೊಂಡಿದ್ದರಿಂದ ಹಾವು ಒಳಗೆ ಸಿಲುಕಿ ಈ ಫಜೀತಿ ಅನುಭವಿಸಬೇಕಾಯ್ತು.