ನ್ಯೂಯಾರ್ಕ್: ಅಮೆರಿಕದಲ್ಲಿ (America) 13 ವರ್ಷ ವಯಸ್ಸಿನ ಬಾಲಕಿಗೆ ಚಾಕುವಿನಿಂದ 114 ಬಾರಿ ಇರಿದು ಕೊಲೆ ಮಾಡಿದ್ದ ಬಾಲಕ ತನ್ನ ಅಪರಾಧ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.
ಜ್ಯಾಕ್ಸನ್‌ವಿಲ್ಲೆಯ ಶಾಂತ ಉಪನಗರದಲ್ಲಿ 2021ರಲ್ಲಿ ಟ್ರಿಸ್ಟಿನ್ ಬೈಲಿ ಎಂಬ ಬಾಲಕಿಗೆ 114 ಬಾರಿ ಇರಿದು ಐಡೆನ್ ಫ್ಯೂಸಿ ಹೆಸರಿನ ಬಾಲಕ ಹತ್ಯೆ ಮಾಡಿದ್ದ. ನಂತರ ಆಕೆಯ ದೇಹವನ್ನು ನೆರೆಯ ಅರಣ್ಯ ಪ್ರದೇಶದಲ್ಲಿ ಎಸೆದಿದ್ದ. ಇದನ್ನೂ ಓದಿ: ಮತ್ತೆ ಪಾಕ್‌ನಿಂದ ದುರ್ಬುದ್ಧಿ – ಟರ್ಕಿಗೆ ಹೊರಟಿದ್ದ NDRF ವಿಮಾನಕ್ಕೆ ನಿರ್ಬಂಧ
Advertisement
Advertisement
ನಂತರ ಆತನನ್ನು ಪೊಲೀಸರು ಬಂಧಿಸಿದ್ದರು. ಕೋರ್ಟ್‌ಗೆ ಹಾಜರುಪಡಿಸಿದ್ದ ವೇಳೆ ಆರೋಪಿ ಬಾಲಕ ತಪ್ಪೊಪ್ಪಿಕೊಂಡಿದ್ದಾನೆ. ನ್ಯಾಯಾಲಯಕ್ಕೆ ನೀಡಿದ ಸಂಕ್ಷಿಪ್ತ ಹೇಳಿಕೆಯಲ್ಲಿ, ನಾನು ತಪ್ಪಿತಸ್ಥನೆಂದು ಹೇಳಲು ಬಯಸುತ್ತೇನೆ. ಬೈಲಿ ಕುಟುಂಬ ಮತ್ತು ನನ್ನ ಕುಟುಂಬದವರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
Advertisement
Advertisement
ಟ್ರಿಸ್ಟಿನ್ ಬೈಲಿ ಮತ್ತು ಐಡೆನ್ ಫ್ಯೂಸಿ ಇಬ್ಬರೂ ಒಟ್ಟಿಗೆ ಓದುತ್ತಿದ್ದರು. ಹತ್ಯೆಗೆ ಮುಂಚಿನ ತಿಂಗಳುಗಳಲ್ಲಿ ಹಿಂಸಾಚಾರ ಮತ್ತು ಕೊಲೆಯ ಬಗ್ಗೆ ಫ್ಯೂಸಿ ಕಲ್ಪನೆ ಮಾಡಿಕೊಳ್ಳುತ್ತಿದ್ದ. ಆತ ಆಗಾಗ್ಗೆ ಬಿಡಿಸುತ್ತಿದ್ದ ರೇಖಾಚಿತ್ರಗಳಲ್ಲಿ ಛಿದ್ರಗೊಂಡ ದೇಹಗಳನ್ನು ಚಿತ್ರಿಸುತ್ತಿದ್ದ ಎಂಬ ಮಾಹಿತಿ ವಿಚಾರಣೆ ವೇಳೆ ತಿಳಿದುಬಂದಿದೆ. ಇದನ್ನೂ ಓದಿ: Turkey – Syria Earthquake- ಕಟ್ಟಡದ ಅವಶೇಷಗಳಡಿಯೇ ಮಗುವಿಗೆ ಜನ್ಮ ನೀಡಿ ಮಹಿಳೆ ಸಾವು
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k