ವಾಷಿಂಗ್ಟನ್: 15 ವರ್ಷದ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಯುಎಸ್ ವಿಶೇಷ ಶಿಕ್ಷಣ ಶಿಕ್ಷಕ್ಷಿಯನ್ನು ಬಂಧಿಸಲಾಗಿದೆ.
ಡೌನರ್ಸ್ ಗ್ರೋವ್ ಸೌತ್ ಪ್ರೌ ಸ್ಕೂಲ್ ಶಾಲೆಯ ಶಿಕ್ಷಕಿ ಕ್ರಿಸ್ಟಿನಾ ಫಾರ್ಮೆಲ್ಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಶಿಕ್ಷಕಿ ವಿರುದ್ಧ ಸಂತ್ರಸ್ತ ಬಾಲಕನ ತಾಯಿ ಪೊಲೀಸರಿಗೆ ನೀಡಿದ ದೂರಿನ ಆಧಾರದ ಮೇಲೆ ಬಂಧನ ಮಾಡಲಾಗಿದೆ.
2023ರ ಡಿಸೆಂಬರ್‌ನಲ್ಲಿ ಫಾರ್ಮೆಲ್ಲಾ, ಹುಡುಗನಿಗೆ ತರಬೇತಿ ನೀಡುತ್ತಿದ್ದರು. ಈ ವೇಳೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಕಳೆದ ತಿಂಗಳು ಹುಡುಗನ ತಾಯಿ ಅವನ ಮತ್ತು ಶಿಕ್ಷಕಿ ಫಾರ್ಮೆಲ್ಲಾ ನಡುವಿನ ಫೋನ್ ಚಾಟ್ ಅನ್ನು ಪರಿಶೀಲಿಸಿದಾಗ ವಿಚಾರ ಬೆಳಕಿಗೆ ಬಂದಿದೆ.
ಹುಡುಗ ನನ್ನನ್ನು ಬ್ಲ್ಯಾಕ್‌ಮೇಲ್ ಮಾಡಲು ಈ ತಂತ್ರ ರೂಪಿಸಿದ್ದಾನೆ. ನಾನು ಸುಂದರವಾಗಿ ಕಾಣುತ್ತೇನೆಂದು ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾನೆ. ನನ್ನ ಫೋನ್ ತೆಗೆದುಕೊಂಡು ತನಗೆ ಮೆಸೇಜ್ ಕಳಿಸಿಕೊಂಡಿದ್ದಾನೆ. ಬಳಿಕ ಆತನ ಮೊಬೈಲ್‌ನಿಂದ ನನಗೆ ಮೆಸೇಜ್ ಮಾಡಿದ್ದಾರೆ. ಬ್ಲ್ಯಾಕ್‌ಮೇಲ್ ಆಗಿ ಅದನ್ನು ಬಳಸಿಕೊಂಡಿದ್ದಾನೆ ಎಂದು ಶಿಕ್ಷಕಿ ಗಂಭೀರ ಆರೋಪ ಮಾಡಿದ್ದಾರೆ.
ಫಾರ್ಮೆಲ್ಲಾ 2017 ರಲ್ಲಿ ತನ್ನ ಬೋಧನಾ ಪರವಾನಗಿಯನ್ನು ಪಡೆದಿದ್ದರು. 2020 ರಿಂದ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. 2021 ರಿಂದ ಪ್ರಾರಂಭವಾದ ಬಾಲಕರ ಮತ್ತು ಬಾಲಕಿಯರ ಸಾಕರ್ ತರಬೇತುದಾರರೂ ಆಗಿದ್ದರು.