ನವದೆಹಲಿ: ದೇಶದ 75ನೇ ಸ್ವಾತಂತ್ರ್ಯೋತ್ಸವಕ್ಕೆ ಅತಿಥಿಯಾಗಿ ಆಫ್ರಿಕಾ ಮೂಲದ ಅಮೆರಿಕದ ಗಾಯಕಿ ಮೇರಿ ಮಿಲಬೆನ್ ಅವರು ಭಾರತಕ್ಕೆ ಆಗಮಿಸಲಿದ್ದಾರೆ.
ಈ ಬಗ್ಗೆ ಮಿಲಬೆನ್ ಮಾತನಾಡಿ, ಭಾರತದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಆಚರಣೆಗೆ ಸಾಂಸ್ಕೃತಿಕ ರಾಯಭಾರಿಯಾಗಿ ಅಮೆರಿಕವನ್ನು ಪ್ರತಿನಿಧಿಸಲು ನನಗೆ ಹೆಮ್ಮೆಯಿದೆ ಎಂದು ತಿಳಿಸಿದ್ದಾರೆ.
Advertisement
Honoring the flag honors the country. A special day, for a special land, for a special people.
Jai Hind, India. #HarGharTiranga @AmritMahotsav #AmritMahotsav #AzadiKaAmritMahotsav #IndiaAt75 pic.twitter.com/Tqcuf4XPoA
— Mary Millben (@MaryMillben) August 2, 2022
Advertisement
ಭಾರತದ ಸ್ವಾತಂತ್ರ್ಯೋತ್ಸವದ ಈ ಪ್ರಮುಖ ಆಚರಣೆಯ ಸಂದರ್ಭದಲ್ಲಿ ಅಮೆರಿಕ ಮತ್ತು ಭಾರತದ ನಡುವಿನ ಪ್ರಮುಖ ಪ್ರಜಾಸತ್ತಾತ್ಮಕ ಮೈತ್ರಿಯನ್ನು ಎಲ್ಲರಿಗೂ ತಿಳಿಸುತ್ತೇನೆ ಎಂದ ಅವರು, ನಾನು ಇತರ ದೇಶಗಳಿಗೆ ಪ್ರವಾಸಕ್ಕಾಗಿ ಹೋಗಬಹುದು ಆದರೆ ಭಾರತಕ್ಕೆ ಯಾತ್ರಾರ್ಥಿಯಾಗಿ ಹೋಗುತ್ತಿದ್ದೇನೆ ಎಂದರು. ಇದನ್ನೂ ಓದಿ: ಲಿಂಗನಮಕ್ಕಿ ಜಲಾಶಯದಲ್ಲಿ ಹೆಚ್ಚಿದ ನೀರು- ಶರಾವತಿ ತೀರ ಪ್ರದೇಶದ ಜನರಿಗೆ ಅಲರ್ಟ್
Advertisement
Advertisement
ರಾಷ್ಟ್ರಗೀತೆ ಜನ ಗಣಮನ ಹಾಗೂ ಭಕ್ತಿಗೀತೆ ಓ ಜೈ ಜಗದೀಶ್ ಹರೇ ಗೀತೆಗಳಿಂದ ಪರಿಚಿತರಾಗಿರುವ ಮಿಲಬೆನ್ ಅವರು, ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ (ಐಸಿಸಿಆರ್) ಆಹ್ವಾನದ ಮೇರೆಗೆ ಈ ಪ್ರವಾಸವನ್ನು ಕೈಗೊಂಡಿದ್ದಾರೆ. 40 ವರ್ಷದ ಮಿಲಬೆನ್ ಅವರು ಸ್ವಾತಂತ್ರ್ಯ ದಿನಾಚರಣೆಗೆ ಐಸಿಸಿಆರ್‌ನಿಂದ ಭಾರತಕ್ಕೆ ಆಹ್ವಾನಿಸಲ್ಪಟ್ಟ ಮೊದಲ ಅಮೆರಿಕದ ಕಲಾವಿದರಾಗಿದ್ದಾರೆ. ಇದನ್ನೂ ಓದಿ: CWG 2022: ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಅವಿನಾಶ್ ಸಬ್ಲೆ, ಪ್ರಿಯಾಂಕಾ ಗೋಸ್ವಾಮಿ