ನವದೆಹಲಿ: ಭಾರತದಲ್ಲಿನ (India) ಯುಎಸ್ (US) ಕಾನ್ಸುಲರ್ ತಂಡವು 2023 ರಲ್ಲಿ ಹಿಂದೆಂದಿಗಿಂತಲೂ ಹೆಚ್ಚು ವೀಸಾಗಳನ್ನು ಪರಿಶೀಲಿಸಿದೆ. ಈ ಮೂಲಕ ವಿಸಿಟರ್ ವೀಸಾ ಅಪಾಯಿಂಟ್‍ಮೆಂಟ್ ಕಾಯುವ ಸಮಯವನ್ನು 75% ರಷ್ಟು ಕಡಿಮೆ ಮಾಡಿದೆ.
2023 ರಲ್ಲಿ ಭಾರತದಲ್ಲಿನ ಯುಎಸ್ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳು ದಾಖಲೆಯ ಪ್ರಮಾಣದ 1.4 ಮಿಲಿಯನ್ ಯುಎಸ್ ವೀಸಾಗಳನ್ನು ಪರಿಶೀಲಿಸಿವೆ. ಎಲ್ಲಾ ವೀಸಾ ವಿಭಾಗಗಳಲ್ಲಿ ಬೇಡಿಕೆಯು ಅಭೂತಪೂರ್ವವಾಗಿದ್ದು, 2022ಕ್ಕೆ ಹೋಲಿಸಿದರೆ ಅರ್ಜಿಗಳಲ್ಲಿ 60% ಹೆಚ್ಚಳವಾಗಿದೆ. ವಿಶ್ವಾದ್ಯಂತ ಪ್ರತಿ ಹತ್ತು ಯುಎಸ್ ವೀಸಾ ಅರ್ಜಿದಾರರಲ್ಲಿ ಒಬ್ಬರು ಭಾರತೀಯರಿದ್ದಾರೆ. ಇದನ್ನೂ ಓದಿ: ಹಿಂದೂಗಳಿಗೆ ದೊಡ್ಡ ಗೆಲುವು – ಜ್ಞಾನವಾಪಿ ಮಸೀದಿಯಲ್ಲಿ ಮೂರ್ತಿಗಳಿಗೆ ಪೂಜೆ ಮಾಡಲು ಅನುಮತಿ
Advertisement
ವಿಸಿಟರ್ ವೀಸಾಗಳಿಗೆ (ಬಿ1/ಬಿ2) ಯುಎಸ್ ಮಿಷನ್‍ನ ಇತಿಹಾಸದಲ್ಲಿ ಎರಡನೇ ಬಾರಿ 700,000 ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಅರ್ಜಿಗಳನ್ನು ಸ್ವೀಕರಿಸಿದ್ದು ಅದನ್ನು ಪರಿಶೀಲಿಸಲು ಸಿದ್ಧವಾಗಿದೆ. ಮುಂಬೈನಲ್ಲಿ ವರ್ಷದ ಆರಂಭದಲ್ಲಿ ಮೂರು ತಿಂಗಳು ಸಿಬ್ಬಂದಿ ಹೆಚ್ಚಿಸಿ, ಶಾಶ್ವತ ಸಿಬ್ಬಂದಿಗಳ ಸ್ಥಾನಗಳ ಸಂಖ್ಯೆ ಹೆಚ್ಚಿಸುವ ಮೂಲಕ ಮತ್ತು ನವೀನ ತಾಂತ್ರಿಕ ಪರಿಹಾರಗಳ ಮೂಲಕ ಯುಎಸ್ ರಾಯಭಾರ ಕಚೇರಿ ಮತ್ತು ದೂತಾವಾಸಗಳು ಈ ಬೇಡಿಕೆಯನ್ನು ಪೂರೈಸಿವೆ. ಪರಿಶೀಲನೆ ಪ್ರಕ್ರಿಯೆಯಲ್ಲಿ ಸುಧಾರಣೆಗಳು ಮತ್ತು ಸಿಬ್ಬಂದಿ ಸಂಖ್ಯೆ ಹೆಚ್ಚಿಸುವಲ್ಲಿ ಹೂಡಿಕೆಯು ದೇಶಾದ್ಯಂತ ವಿಸಿಟರ್ ವೀಸಾಗಳಿಗಾಗಿ ಅಪಾಯಿಂಟ್‍ಮೆಂಟ್ ಕಾಯುವ ಸಮಯವನ್ನು ಸರಾಸರಿ 1,000 ದಿನಗಳಿಂದ ಕೇವಲ 250 ದಿನಗಳವರೆಗೆ ಇಳಿಸಿದೆ. ಎಲ್ಲಾ ಇತರ ವೀಸಾ ವಿಭಾಗಗಳಲ್ಲಿ ಕಾಯುವ ಸಮಯ ಕಡಿಮೆಯಾಗಿದೆ.
Advertisement
Advertisement
2023 ರಲ್ಲಿ, ಭಾರತದಲ್ಲಿನ ಯುಎಸ್ ಕಾನ್ಸುಲರ್ ತಂಡವು 140,000 ಕ್ಕೂ ಹೆಚ್ಚು ವಿದ್ಯಾರ್ಥಿ (Student) ವೀಸಾಗಳನ್ನು ನೀಡಿತ್ತು. ಇದು ವಿಶ್ವದ ಎಲ್ಲಾ ದೇಶಗಳಿಗಿಂತ ಹೆಚ್ಚಾಗಿದ್ದು, ಸತತ ಮೂರನೇ ವರ್ಷ ಈ ದಾಖಲೆಯನ್ನು ಮಾಡಿದೆ. ಪ್ರತ್ಯೇಕವಾಗಿ ತೆಗೆದುಕೊಂಡರೆ, ಮುಂಬೈ, ನವದೆಹಲಿ, ಹೈದರಾಬಾದ್ ಮತ್ತು ಚೆನ್ನೈ ಈಗ ವಿಶ್ವದ ಅತ್ಯಂತ ಹೆಚ್ಚು ವಿದ್ಯಾರ್ಥಿ ವೀಸಾ ಪರಿಶೀಲನೆ ನಡೆಸುವ ನಾಲ್ಕು ಪೋಸ್ಟ್‌ಗಳಲ್ಲಿ ಒಂದಾಗಿದೆ. ಇದರ ಪರಿಣಾಮವಾಗಿ, ಭಾರತೀಯ ವಿದ್ಯಾರ್ಥಿಗಳು ಯುನೈಟೆಡ್ ಸ್ಟೇಟ್ಸ್‍ನಲ್ಲಿ ಅಂತರರಾಷ್ಟ್ರೀಯ ಪದವಿ ವಿದ್ಯಾರ್ಥಿಗಳ ಅತಿದೊಡ್ಡ ಗುಂಪಾಗಿದ್ದಾರೆ ಮತ್ತು ಯುನೈಟೆಡ್ ಸ್ಟೇಟ್ಸ್‍ನಲ್ಲಿ ಅಧ್ಯಯನ ಮಾಡುತ್ತಿರುವ ದಶಲಕ್ಷಕ್ಕಿಂತಲೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳಲ್ಲಿ ಕಾಲು ಭಾಗಕ್ಕಿಂತಲೂ ಹೆಚ್ಚು ಇದ್ದಾರೆ.
Advertisement
ಉದ್ಯೋಗ ವೀಸಾಗಳು ಮೊದಲ ಆದ್ಯತೆಯಾಗಿವೆ. ಕಾನ್ಸುಲರ್ ಟೀಮ್ ಇಂಡಿಯಾ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಚೆನ್ನೈ ಮತ್ತು ಹೈದರಾಬಾದ್‍ನಲ್ಲಿ ಅರ್ಜಿ-ಆಧಾರಿತ ವೀಸಾ ಪರಿಶೀಲನೆಪ್ರಕ್ರಿಯೆಗಳನ್ನು ಕ್ರೋಢೀಕರಿಸಿದೆ. 2023 ರಲ್ಲಿ ಭಾರತೀಯರು ಮತ್ತು ಅವರ ಕುಟುಂಬ ಸದಸ್ಯರಿಗೆ 380,000 ಕ್ಕೂ ಹೆಚ್ಚು ಉದ್ಯೋಗ ವೀಸಾಗಳನ್ನು ಪರಿಶೀಲಿಸಿತ್ತು ಮತ್ತು ಈ ಮೂಲಕ ಕನಿಷ್ಠ ಅಪಾಯಿಂಟ್‍ಮೆಂಟ್ ಕಾಯುವ ಸಮಯವನ್ನು ನಿರ್ವಹಿಸಲು ಯುಎಸ್ ಮಿಷನ್‍ಗೆ ಅನುವು ಮಾಡಿಕೊಟ್ಟಿತು. 2024 ರಲ್ಲಿ ಪ್ರಾಯೋಗಿಕ ಕಾರ್ಯಕ್ರಮವು ಅರ್ಹ ಹೆಚ್1ಬಿ ಹೊಂದಿರುವವರು ಯುನೈಟೆಡ್ ಸ್ಟೇಟ್ಸ್‍ನಲ್ಲಿ ತಮ್ಮ ವೀಸಾಗಳನ್ನು ನವೀಕರಿಸಲು ಇದು ಅನುಮತಿಸುತ್ತದೆ. ಈ ಗುಂಪಿನ ಪರಿಶೀಲನೆ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುತ್ತದೆ.
ಕಾನ್ಸುಲೇಟ್ ಜನರಲ್ ಮುಂಬೈ ಸಾಂಕ್ರಾಮಿಕ ರೋಗದಿಂದಾಗಿ ವಿಳಂಬವಾಗಿದ್ದ 31,000 ಕ್ಕೂ ಹೆಚ್ಚು ಇಮಿಗ್ರಂಟ್ ವೀಸಾ ಪ್ರಕರಣಗಳ ಸರದಿಯನ್ನು ತೆರವುಗೊಳಿಸಿದೆ. ವಲಸಿಗರ ವೀಸಾ ಅರ್ಜಿ ಬಾಕಿ ಉಳಿದಿರುವ ಮತ್ತು ವೇಳೆ ನಿಗದಿ ಪಡಿಸಲು ಕಾಯುತ್ತಿರುವ ಜನರು ಈಗ ಪ್ರಮಾಣಿತ, ಸಾಂಕ್ರಾಮಿಕ ಪೂರ್ವ ಅಪಾಯಿಂಟ್‍ಮೆಂಟ್ ವಿಂಡೋದಲ್ಲಿ ಅಪಾಯಿಂಟ್‍ಮೆಂಟ್ ಪಡೆಯಬಹುದು. ಯು.ಎಸ್ ಮಿಷನ್ ಭಾರತದಲ್ಲಿ ಕಾನ್ಸುಲರ್ ಸೇವೆಗಳ ಭವಿಷ್ಯದಲ್ಲಿ ಹೂಡಿಕೆ ಮಾಡುವುದನ್ನು ಮುಂದುವರೆಸಿದೆ ಮತ್ತು ಹೆಚ್ಚು ಪರಿಣಾಮಕಾರಿ ಮತ್ತು ಅನುಕೂಲಕರ ಸೇವೆಗಳನ್ನು ಒದಗಿಸುವ ಹೊಸ ಮಾರ್ಗಗಳನ್ನು ಅನ್ವೇಷಿಸುತ್ತದೆ. ಈ ಹೂಡಿಕೆಗಳು ಮಾರ್ಚ್ 2023 ರಲ್ಲಿ ಹೈದರಾಬಾದ್‍ನಲ್ಲಿ ಹೊಸ 340 ಮಿಲಿಯನ್ ಡಾಲರ್ ಮೌಲ್ಯದ ಕಚೇರಿ ತೆರೆಯುವುದು, ಅಹಮದಾಬಾದ್ ಮತ್ತು ಬೆಂಗಳೂರಿನಲ್ಲಿ ಎರಡು ಹೊಸ ದೂತಾವಾಸಗಳ ಘೋಷಣೆ, ದೇಶಾದ್ಯಂತ ನಮ್ಮ ಸೌಲಭ್ಯಗಳಿಗೆ ಬಂಡವಾಳ ಸುಧಾರಣೆಗಳನ್ನು ಮುಂದುವರೆಸುವುದು ಮತ್ತು ಭಾರತಕ್ಕೆ ಹೆಚ್ಚಿನ ಕಾನ್ಸುಲರ್ ಅಧಿಕಾರಿಗಳ ಶಾಶ್ವತ ನಿಯೋಜನೆಯನ್ನು ಒಳಗೊಂಡಿದೆ. ಇದನ್ನೂ ಓದಿ: ಅಡ್ಡಿಪಡಿಸುವವರನ್ನು ಯಾರೂ ನೆನಪಿಸಿಕೊಳ್ಳಲ್ಲ: ಅಧಿವೇಶನಕ್ಕೂ ಮುನ್ನ ಸಂಸದರಿಗೆ ಮೋದಿ ಸಲಹೆ