ನ್ಯೂಯಾರ್ಕ್: ಯುಎಸ್‍ನಲ್ಲಿ ವಾಸಿಸುವ ಕೆಲವು ಬಿಳಿ ಬಾಲದ ಜಿಂಕೆಗಳಲ್ಲಿ ಕೋವಿಡ್-19ನ ರೂಪಾಂತರಿ ವೈರಸ್ ಓಮಿಕ್ರಾನ್ ಪತ್ತೆಯಾಗಿದೆ ಎಂದು ಅಧ್ಯಯನ ತಿಳಿಸಿದೆ.
ಪ್ರಿಪ್ರಿಂಟ್ ರೆಪೊಸಿಟರಿ ಬಯೋಆರ್‍ಕ್ಸಿವ್‍ನಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಲಾದ ಪೀರ್-ರಿವ್ಯೂಡ್ ಅಧ್ಯಯನವು ಓಮಿಕ್ರಾನ್-ಸೋಂಕಿತ ಜಿಂಕೆಗಳಲ್ಲಿ ಸಾರ್ಸ್-ಸಿಒವಿ-2 ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಕಂಡುಹಿಡಿದಿದೆ. ಮನುಷ್ಯನಂತೆಯೇ ಈ ಪ್ರಾಣಿಗಳು ಸಹ ವೈರಸ್‍ನೊಂದಿಗೆ ಮರುಸೋಂಕಿಗೆ ಒಳಗಾಗಬಹುದು ಎಂದು ಹೇಳಿದೆ. ಇದನ್ನೂ ಓದಿ: ಜಾಗತಿಕ ರಾಷ್ಟ್ರಗಳ ನಿರ್ಬಂಧಕ್ಕೆ ರಷ್ಯಾ ಸೆಡ್ಡು- ಇಂಟರ್‌ನೆಟ್ ಸ್ವಾವಲಂಬನೆಯತ್ತ ಹೆಜ್ಜೆ
ಕೆಲವು ಪ್ರಾಣಿಗಳಿಗೆ ಓಮಿಕ್ರಾನ್ ಸೋಂಕು ತಗಲಹುದು ಎಂದು ನಮ್ಮ ಸಂಶೋಧನೆಯ ಮುಖಾಂತರ ತಿಳಿದು ಬಂದಿದೆ ಎಂದು ಪೆನ್ ಸ್ಟೇಟ್‍ನ ಸಹಾಯಕ ಸಂಶೋಧನಾ ಪ್ರಾಧ್ಯಾಪಕ ಮತ್ತು ಪತ್ರಿಕೆಯ ಪ್ರಮುಖ ಲೇಖಕ ಕರ್ಟ್ ವಾಂಡೆಗ್ರಿಫ್ಟ್ ಹೇಳಿದರು. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧ – 14 ವರ್ಷದ ಬಳಿಕ ಕಚ್ಚಾತೈಲ ಬೆಲೆ ಭಾರೀ ಏರಿಕೆ
ಕಳೆದ ವರ್ಷ ಅಮೆರಿಕದ ಅಯೋವಾದಲ್ಲಿ ಬಿಳಿ ಬಣ್ಣದ ಜಿಂಕೆಗಳನ್ನು ಕೋವಿಡ್-19 ಪರಿಕ್ಷೆಗೆ ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಶೇ.80 ರಷ್ಟು ಜಿಂಕೆಗಳಲ್ಲಿ ಓಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿದೆ.
ವೈರಸ್ ಈ ಪ್ರಾಣಿಗಳಿಂದ ಹರಡುತ್ತದೆ ಮತ್ತು ಇದರಿಂದಾಗಿ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳಿಗೆ ಸೋಂಕು ತಗಲುವ ಸಾಧ್ಯತೆಯದೆ. ಈ ಹೊಸ ರೂಪಾಂತರಿ ವೈರಸ್‍ಗೆ ಈಗಿನ ಲಸಿಕೆಗಳು ಸಾಕಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಸಂಶೋಧಕರು 2021ರ ಡಿಸೆಂಬರ್ 12 ಮತ್ತು 2022ರ ಜನವರಿ 31ವರೆಗೆ 131 ಜಿಂಕೆಗಳಿಂದ ರಕ್ತದ ಮಾದರಿಯನ್ನು ಸಂಗ್ರಹಿಸಿ ಈ ಸಂಶೋಧನೆ ನಡೆಸಿದ್ದಾರೆ.