ಭಾರತೀಯ ಮೂಲದ ವಿದ್ಯಾರ್ಥಿಗೆ ಚೂರಿ ಇರಿತ ಪ್ರಕರಣದಿಂದ ವಿಚಲಿತರಾಗಿದ್ದೇವೆ: ಯುಎಸ್

Public TV
1 Min Read
VARUN RAJ

ವಾಷಿಂಗ್ಟನ್: ಇಂಡಿಯಾನಾ ರಾಜ್ಯದ ಜಿಮ್‍ನಲ್ಲಿ (Gym) 24 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬನಿಗೆ ಚೂರಿ ಇರಿದ ಘಟನೆ ವಿಚಲಿತರಾಗುವಂತೆ ಮಾಡಿದೆ. ಅಲ್ಲದೆ ಪ್ರಸ್ತುತ ಸ್ಥಿತಿ ಗಂಭೀರವಾಗಿದೆ ಎಂದು ಯುಎಸ್  ಹೇಳಿದೆ.

ವರುಣ್ ರಾಜ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅಮೆರಿಕ (America) ಹಾರೈಸಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರರು ತಿಳಿಸಿದ್ದಾರೆ. ಘಟನೆಯ ಬಳಿಕ ದಾಳಿಕೋರ ಆಂಡ್ರೇಡ್ ಅನ್ನು ಬಂಧಿಸಲಾಗಿದೆ. ಜೊತೆಗೆ ದಾಳಿಗೆ ಬಳಸಿದ ಆಯುಧಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಲಾಗುತ್ತಿದೆ.

ಘಟನೆ ಸಂಬಂಧ ಸ್ಟೇಟ್ ಡಿಪಾರ್ಟ್‌ ಮೆಂಟ್ ವಕ್ತಾರರು ಪ್ರತಿಕ್ರಿಯಿಸಿ, ಭಾರತೀಯ ಪದವೀಧರ ವಿದ್ಯಾರ್ಥಿ ವರುಣ್ ರಾಜ್ (Varun Raj) ವಿರುದ್ಧದ ಕ್ರೂರ ದಾಳಿಯ ವರದಿಗಳಿಂದ ನಾವು ತೀವ್ರವಾಗಿ ವಿಚಲಿತರಾಗಿದ್ದೇವೆ. ಅವರು ಆದಷ್ಟು ಬೇಗ ಸಂಪೂರ್ಣ ಚೇತರಿಸಿಕೊಳ್ಳುವಂತಾಗಲಿ ಎಂದು ನಾವು ಬಯಸುತ್ತೇವೆ ತಿಳಿಸಿದ್ದಾರೆ. ಇದನ್ನೂ ಓದಿ: World Cup 2023: ಮತ್ತೆ ಶತಕ ಮಿಸ್‌ – ಕ್ಯಾಬಿನ್‌ನಲ್ಲಿ ಕುಳಿತು ಕಣ್ಣೀರಿಟ್ಟ ಕೊಹ್ಲಿ

ಅಕ್ಟೋಬರ್ 29ರಂದು ಜಿಮ್‍ನಲ್ಲಿ ಪಿ. ವರುಣ್ ರಾಜ್ ಎಂಬ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯನ್ನು ಜೋರ್ಡಾನ್ ಆಂಡ್ರೇಡ್ (24) ಎಂಬಾತ ಚಾಕುವಿನಿಂದ ಇರಿದಿದ್ದನು. ಈ ದಾಳಿ ಯಾಕೆ ನಡೆಯಿತು?, ಇದರ ಹಿಂದಿನ ಉದ್ದೇಶವೇನು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಗಂಭೀರ ಸ್ವರೂಪದ ಗಾಯಗಳಾಗಿರುವ ಕಾರಣ ವರುಣ್ ರಾಜ್ ಅವರನ್ನು ಫೋರ್ಟ್ ವೇನ್‍ನಲ್ಲಿರುವ ಲುಥೆರನ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಮೂರು ದಿನಗಳ ಚಿಕಿತ್ಸೆಯ ನಂತರ, ವರುಣ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಶಾಶ್ವತ ಅಂಗವೈಕಲ್ಯವನ್ನು ಹೊಂದುವ ಸಾಧ್ಯತೆಯಿದೆ ಮತ್ತು ಭಾಗಶಃ, ಪೂರ್ಣವಾಗಿಲ್ಲದಿದ್ದರೆ, ದೃಷ್ಟಿ ನಷ್ಟ ಮತ್ತು ಎಡಭಾಗದ ದೌರ್ಬಲ್ಯವನ್ನು ಹೊಂದಿರುತ್ತಾರೆ ಎಂಬುದಾಗಿ ವರದಿಯಾಗಿದೆ.

Web Stories

Share This Article