Monday, 22nd October 2018

Recent News

ಫ್ಲಿಪ್‍ಕಾರ್ಟ್ ಕಂಪೆನಿಯನ್ನು 1.07 ಲಕ್ಷ ಕೋಟಿಗೆ ಖರೀದಿಸಿದ ಅಮೆರಿಕದ ವಾಲ್‍ಮಾರ್ಟ್

ನವದೆಹಲಿ: ಬೆಂಗಳೂರು ಮೂಲದ ಫ್ಲಿಪ್‍ಕಾರ್ಟ್ ಕಂಪೆನಿಯನ್ನು ಅಮೆರಿಕ ಮೂಲದ ಚಿಲ್ಲರೆ ಮಾರಾಟ ಕ್ಷೇತ್ರದ ದಿಗ್ಗಜ ವಾಲ್‍ಮಾರ್ಟ್ ಖರೀದಿಸಿದೆ

20 ಬಿಲಿಯನ್ ಯುಎಸ್ ಡಾಲರ್(ಅಂದಾಜು 1.34 ಲಕ್ಷ ಕೋಟಿ ರೂ) ಮೌಲ್ಯದ ಫ್ಲಿಪ್ ಕಾರ್ಟ್ ಇ-ಕಾಮರ್ಸ್ ಕಂಪೆನಿಯನ್ನು 16 ಬಿಲಿಯನ್ ಯುಎಸ್ ಡಾಲರ್(ಅಂದಾಜು 1.07 ಲಕ್ಷ ಕೋಟಿ ರೂ) ಗಳಿಗೆ ವಾಲ್ ಮಾರ್ಟ್ ಖರೀದಿ ಮಾಡಿದೆ. ಕಂಪೆನಿಯ 77% ಷೇರನ್ನು ತನ್ನದಾಗಿಸಿಕೊಂಡಿದೆ ಎಂದು ತಿಳಿಸಿದೆ.

ಅಮೆಜಾನ್ ಕಂಪೆನಿ ಕೂಡ ಫ್ಲಿಪ್‍ಕಾರ್ಟ್ ಖರೀದಿಸಲು ಪ್ರಯತ್ನಿಸಿತ್ತು. ಅಂತಿಮವಾಗಿ ಫ್ಲಿಪ್‍ಕಾರ್ಟ್ ಆಡಳಿತ ಮಂಡಳಿಯು ವಾಲ್‍ಮಾರ್ಟ್ ಅನ್ನು ಆಯ್ಕೆ ಮಾಡಿದೆ. ವಾಲ್‍ಮಾರ್ಟ್ ಹಾಗೂ ಅಮೆಜಾನ್ ಎರಡೂ ಕಂಪನಿಗಳು ಭಾರತೀಯ ಮಾರುಕಟ್ಟೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸಿವೆ.

2007 ರಲ್ಲಿ ಫ್ಲಿಪ್ ಕಾರ್ಟ್ ಕಂಪೆನಿಯನ್ನು ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಸ್ಥಾಪಿಸಿದ್ದರು. ಸಂಸ್ಥೆ ಆರಂಭದಿಂದಲೂ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು ಅಮೆಜಾನ್ ಗೆ ತೀವ್ರ ಪೈಪೋಟಿ ಒಡ್ಡುತಿತ್ತು.

ಸಚಿನ್ ಬನ್ಸಾಲ್ ಹುದ್ದೆಯಿಂದ ನಿರ್ಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಖರೀದಿಯಿಂದ ವಾಲ್‍ಮಾರ್ಟ್ ಮತ್ತು ಅಮೆಜಾನ್ ಭಾರತದ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ದಿಗ್ಗಜ ಕಂಪೆನಿಗಳಾಗಲಿವೆ. ಇ ಕಾಮರ್ಸ್ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳಿಗೆ, ಗ್ರಾಹಕರ ಮೇಲೆ ಹೆಚ್ಚಿನ ಪರಿಣಾಮ ಆಗಲಿದೆ ಎನ್ನಲಾಗಿದೆ.

ವಾಲ್ ಮಾರ್ಟ್ 500 ಬಿಲಿಯನ್ ಯುಎಸ್ ಡಾಲರ್(33.63 ಲಕ್ಷ ಕೋಟಿ ರೂ) ಮೌಲ್ಯದ ಅಮೆರಿಕದ ಕಂಪೆನಿಯಾಗಿದೆ. ಬಹಳ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವುದು ಇದರ ವಿಶೇಷ. ಇಷ್ಟು ದಿನ ಪ್ಲಿಪ್ ಕಾರ್ಟ್ ಗೆ ಸರಬರಾಜು ಮಾಡುತ್ತಿದ್ದ ವರ್ತಕರು ಈ ಖರೀದಿಯಿಂದ ವ್ಯಾಪಾರವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ವಾಲ್‍ಮಾರ್ಟ್ ತನ್ನದೇ ಬ್ರಾಂಡ್ ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಚಿಂತೆಗೀಡಾಗಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಭಾರತದ ಮಾರುಕಟ್ಟೆಗೆ ಪ್ರವೇಶಿಸಲು ವಾಲ್‍ಮಾರ್ಟ್ ಪ್ರಯತ್ನಿಸುತ್ತಿತ್ತು. ವಿದೇಶಿ ನೇರ ಬಂಡವಾಳದ ಕಾನೂನಿನಿಂದಾಗಿ ಸಾಧ್ಯವಾಗಿರಲಿಲ್ಲ. ಹೋಲ್ ಸೇಲ್ ವ್ಯಾಪಾರಕ್ಕೆ ಸೀಮಿತವಾಗಿ 21 ಹೋಲ್ ಸೇಲ್ ಮಳಿಗೆಗಳನ್ನು ಭಾರತದಾದ್ಯಂತ ಹೊಂದಿತ್ತು. ಭಾರತದ ಮಾರುಕಟ್ಟೆಗೆ ಬರಲು ಮತ್ತು ತನ್ನ ಪ್ರತಿಸ್ಪರ್ಧಿ ಅಮೆರಿಕದ ಅಮೆಜಾನ್ ಗೆ ಸೆಡ್ಡು ಹೊಡೆಯಲು ಫ್ಲಿಪ್‍ಕಾರ್ಟ್ ಖರೀದಿ ವಾಲ್ಮಾರ್ಟ್ ಭಾರೀ ಸಹಾಯವಾಗಲಿದೆ

ಭಾರತದಲ್ಲಿ ಚಿಲ್ಲರೆ ವ್ಯಾಪಾರವು ಈಗಿರುವ 1.3 ಟ್ರಿಲಿಯನ್ ಡಾಲರ್(87451 ಕೋಟಿ ರೂ) ಗಳಿಂದ 2027ಕ್ಕೆ 3.6 ಟ್ರಿಲಿಯನ್ ಡಾಲರ್(2.42 ಲಕ್ಷ ಕೋಟಿ ರೂ) ಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *