ವಾಷಿಂಗ್ಟನ್: ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ (US Presidential Election) ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ (Donald Trump) ಗೆದ್ದು ಬೀಗಿದ್ದಾರೆ. ಆಡಳಿತರೂಢ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲ ಹ್ಯಾರಿಸ್ (Kamala Harris) ವಿರುದ್ಧದ ತುರುಸಿನ ಹೋರಾಟದಲ್ಲಿ ಟ್ರಂಪ್ ಜಯಶಾಲಿ ಆಗಿ 47ನೇ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಈ ಮೂಲಕ 132 ವರ್ಷ ದಾಖಲೆ ಸರಿಗಟ್ಟಿದ್ದಾರೆ.
ಕಮಲ ಹ್ಯಾರಿಸ್ ತೀವ್ರ ಪೈಪೋಟಿ ನೀಡಿದರೂ ಸ್ವಿಂಗ್ ಸ್ಟೇಟ್ಸ್ ಕ್ಲೀನ್ ಸ್ವೀಪ್ ಕಾರಣ ಅಮೆರಿಕ ಮತ್ತೊಮ್ಮೆ ಡೊನಾಲ್ಡ್ ಟ್ರಂಪ್ ವಶವಾಗಿದೆ. ಜೈಲು, ಟೀಕೆ, ಹತ್ಯೆ ಯತ್ನ, ಅಪಮಾನ, ಸಮೀಕ್ಷೆ.. ಹೀಗೆ ಎಲ್ಲವನ್ನು ಮೀರಿ ಟ್ರಂಪ್ ಮತ್ತೊಮ್ಮೆ ಗೆದ್ದು ಬೀಗಿದ್ದಾರೆ.
Advertisement
ಮೇಕ್ ಅಮೆರಿಕಾ ಗ್ರೇಟ್ ಎಗೈನ್ (MAGA) ಎಂಬ ನಿನಾದಕ್ಕೆ ಅಮೆರಿಕನ್ನರು ಜೈ ಎಂದಿದ್ದಾರೆ. ಈ ಮೂಲಕ ಜಮೈಕ-ಭಾರತ ಮೂಲದ ಕಮಲಾ ಹ್ಯಾರೀಸ್‌ರನ್ನು ಅಮೆರಿಕನ್ನರು ತಿರಸ್ಕರಿಸಿದ್ದಾರೆ.. ಮೇಡಂ ಪ್ರೆಸಿಡೆಂಟ್ ಎಂದು ಕರೆಯಲು ಅಮೆರಿಕಾ ನಿರಾಕರಿಸಿದೆ..ಇಂತಹ ಗೆಲುವನ್ನು ಅಮೆರಿಕಾ ಹಿಂದೆಂದೂ ಕಂಡಿರಲಿಲ್ಲ, ಅಮೆರಿಕನ್ನರಿಗೆ ಸ್ವರ್ಣಯುಗ ಬರಲಿದೆ ಎಂದು ಟ್ರಂಪ್ ಬಣ್ಣಿಸಿದ್ದಾರೆ.
Advertisement
President-Elect Donald Trump: “This will forever be remembered as the day the American people regained control of their country.” pic.twitter.com/shcDjTEMR9
— America (@america) November 6, 2024
Advertisement
ಐತಿಹಾಸಿಕ ಗೆಲುವು ಕಂಡ ಟ್ರಂಪ್‌ಗೆ ಪ್ರಧಾನಿ ಮೋದಿ, ಇಸ್ರೇಲ್ ಪ್ರಧಾನಿ ನೆತನ್ಯಾಹು ಸೇರಿ ವಿಶ್ವ ನಾಯಕರು ಅಭಿನಂದಿಸಿದ್ದಾರೆ. ಅಮೆರಿಕಾದಲ್ಲಿ ರಿಪಬ್ಲಿಕನ್ನರು ಸಂಭ್ರಮದಲ್ಲಿ ಮುಳುಗಿದ್ದಾರೆ. ಡೆಮಕ್ರಟಿಕ್ ಪಕ್ಷದ ಬೆಂಬಲಿಗರು ನಿರಾಸೆಯ ಮಡುವಲ್ಲಿ ಮುಳುಗಿದ್ದಾರೆ ಇದನ್ನೂ ಓದಿ: ಜಾಗತಿಕ ಶಾಂತಿಗಾಗಿ ಒಟ್ಟಾಗಿ ಕೆಲಸ ಮಾಡೋಣ – ಟ್ರಂಪ್‌ಗೆ ಮೋದಿ ಅಭಿನಂದನೆ
Advertisement
50 ರಾಜ್ಯಗಳಿರುವ ಅಮೆರಿಕದಲ್ಲಿ 538 ಎಲೆಕ್ಟೋರಲ್ ಮತಗಳಿವೆ. ಬಹುಮತಕ್ಕೆ 270 ಮತಗಳ ಅಗತ್ಯವಿದ್ದು ಈಗ ಬಂದಿರುವ ಫಲಿತಾಂಶದ ಪ್ರಕಾರ ಟ್ರಂಪ್ 277 ಮತಗಳನ್ನು ಪಡೆದರೆ ಕಮಲಾ ಹ್ಯಾರಿಸ್ 226 ಮತಗಳನ್ನು ಪಡೆದಿದ್ದಾರೆ.
President-Elect Donald Trump: “Every single day I will be fighting for you.. This will truly be the golden age of America.” pic.twitter.com/Z3XG56WsEf
— America (@america) November 6, 2024
ಎರಡನೇ ವ್ಯಕ್ತಿ ಟ್ರಂಪ್:
ಒಮ್ಮೆ ಗೆದ್ದು ನಂತರ ಸೋತು. ಮತ್ತೊಮ್ಮೆ ಗೆದ್ದ ಎರಡನೇ ವ್ಯಕ್ತಿ ಟ್ರಂಪ್ (2016, 2020,2024) ಆಗಿದ್ದಾರೆ. 1892ರಲ್ಲಿ ಗ್ರೋವರ್ ಕ್ಲೀವ್‌ಲ್ಯಾಂಡ್ (1884, 1888,1892) ಈ ಅಪರೂಪದ ಸಾಧನೆ ಮಾಡಿದ್ದರು,
ಟ್ರಂಪ್ ಗೆಲುವಿಗೆ ಕಾರಣಗಳು
* ಮೇಕ್ ಅಮೆರಿಕಾ ಗ್ರೇಟ್ ಎಗೈನ್ ನಿನಾದ
* ಗುಂಡೇಟಿನಿಂದ ಪಾರು, ಮತದಾರರ ಮೇಲೆ ಅನುಕಂಪ
* ಅಕ್ರಮ ವಲಸಿಗರ ವಿರುದ್ಧ ಬಳಸಿದ ಟ್ರಂಪ್‌ಕಾರ್ಡ್
* ಯುದ್ಧ ನಿಲ್ಲಿಸುವ ಭರವಸೆ. ಟ್ರಂಪ್ ಕಡೆ ವಾಲಿದ ಮುಸ್ಲಿಮರು
* ಟ್ರಂಪ್‌ಗೆ ಡೆಮೊಗ್ರಾಫಿಕ್ ಗ್ರೂಪ್‌ಗಳ ಬೆಂಬಲ
* ಟ್ರಂಪ್ ಕಡೆ ಯುವ ಸಮೂಹದ ಸೆಳೆತ
* ಸೋಷಿಯಲ್ ಮೀಡಿಯಾ ಪ್ರಭಾವ. ಮಸ್ಕ್ ಬಹಿರಂಗ ಪ್ರಚಾರ
* ಟ್ರಂಪ್‌ಗೆ ಏಳು ಸ್ವಿಂಗ್ ಸ್ಟೇಟ್‌ಗಳ ಬೆಂಬಲ
President-Elect Donald Trump on Elon Musk in his 2024 Victory Speech: “We have a new star… A star is born — Elon.” pic.twitter.com/m1i1DS0HAI
— America (@america) November 6, 2024