ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ (Russia Ukraine War) ಶುರು ಮಾಡಿ ಇದೇ ಫೆಬ್ರವರಿ 24ಕ್ಕೆ ಒಂದು ವರ್ಷ ತುಂಬಲಿದೆ. ಈ ಹೊತ್ತಿನಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ.
ಅಮೆರಿಕ ಅಧ್ಯಕ್ಷ (US President) ಜೋ ಬೈಡನ್ (Joe Biden) ಕೀವ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೆಂಡ್‌ಗೆ ತೆರಳಿದ್ದ ಜೋ ಬೈಡನ್ ಅಲ್ಲಿನ ಅಧ್ಯಕ್ಷರ ಜೊತೆಗೆ ದಿಢೀರ್ ಆಗಿ ಉಕ್ರೇನ್‌ಗೆ ತೆರಳಿದ್ದಾರೆ. ಇದನ್ನೂ ಓದಿ: ಕಿಮ್ ಜಾಂಗ್ ಉನ್ ಮಗಳ ಹೆಸರನ್ನು ಉತ್ತರ ಕೊರಿಯಾದ ಯಾರೂ ತಮ್ಮ ಮಕ್ಕಳಿಗೆ ಇಡುವಂತಿಲ್ಲ!
ಕೀವ್‌ನಲ್ಲಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ (Volodymyr Zelensky) ಜೊತೆಗೆ ಮಾತುಕತೆ ನಡೆಸಿದ್ದಾರೆ. ಉಕ್ರೇನಿಗರ ಜೊತೆ ನಾವಿದ್ದೇವೆ ಎಂಬ ಸಂದೇಶ ನೀಡಿದ್ದಲ್ಲದೇ ಶಸ್ತ್ರಾಸ್ತ್ರ ವಿತರಣೆ ಹೆಚ್ಚಿಸುವ ಭರವಸೆ ನೀಡಿದ್ದಾರೆ. ಜೊತೆಗೆ ಉಕ್ರೇನ್ ರಕ್ಷಿಸಲು ಎಲ್ಲ ರೀತಿಯ ಸಹಾಯ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ಬಳಿಕ 500 ವಿಮಾನಗಳ ಖರೀದಿಗೆ IndiGo ಆರ್ಡರ್
`ಉಕ್ರೇನಿಯನ್ ಜನರನ್ನು ವೈಮಾನಿಕ ಬಾಂಬ್ ದಾಳಿಯಿಂದ ರಕ್ಷಿಸಲು ಫಿರಂಗಿ, ಮದ್ದು-ಗುಂಡುಗಳು, ರಕ್ಷಣಾ ವ್ಯವಸ್ಥೆಗಳು ಹಾಗೂ ವಾಯು ಕಣ್ಗಾವಲು ರಾಡರ್‌ಗಳು ಸೇರಿದಂತೆ ನಿರ್ಣಾಯಕ ಸಲಕರಣೆಗಳನ್ನು ಪೂರೈಸುತ್ತೇನೆ ಎಂಬುದಾಗಿ ಶ್ವೇತಭವನದ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಳಿಕ ಝಲೆನ್ಸ್ಕಿ, ಬೈಡನ್ ಭೇಟಿಯನ್ನು ಬೆಂಬಲದ ಸಂಕೇತ ಸ್ವಾಗತಿಸಿದ್ದಾರೆ. ಈ ಬೆಳವಣಿಗೆ ರಷ್ಯಾಗೆ ಮತ್ತಷ್ಟು ಕೋಪ ಉಂಟುಮಾಡಿದೆ.
ಇತ್ತೀಚೆಗೆ ಬ್ರಿಟನ್ ಸಹ ಉಕ್ರೇನ್‌ಗೆ ಸೇನಾ ನೆರವು ಘೋಷಣೆ ಮಾಡಿತು. ರಷ್ಯಾವನ್ನು ಹಿಮ್ಮೆಟ್ಟಿಸಲು ಮೇ ತಿಂಗಳ ವೇಳೆಗೆ ಯುದ್ಧ ವಿಮಾನಗಳು ಹಾಗೂ ಯುದ್ಧ ಟ್ಯಾಂಕರ್‌ಗಳನ್ನು ಕೀವ್‌ಗೆ ಕಳುಹಿಸಿಕೊಡುವುದಾಗಿ ಭರವಸೆ ನೀಡಿದೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k