InternationalLatestMain Post

ಭಾರತ, ಅಮೆರಿಕ ಆತ್ಮೀಯ ಪಾಲುದಾರರು- ಸ್ವಾತಂತ್ರ್ಯ ದಿನಕ್ಕೆ ಶುಭ ಕೋರಿದ ಬೈಡನ್

ವಾಷಿಂಗ್ಟನ್: ಭಾರತ ಹಾಗೂ ಅಮೆರಿಕ ಆತ್ಮೀಯ ಪಾಲುದಾರರಾಗಿದ್ದು, ಮುಂದಿನ ವರ್ಷಗಳಲ್ಲಿ ಜಾಗತಿಕ ಸವಾಲುಗಳನ್ನು ಎದುರಿಸಲು ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾರತದ 75ನೇ ಸ್ವಾತಂತ್ರ್ಯ ದಿನಕ್ಕೆ ಶುಭಕೋರಿದರು. ಇದನ್ನೂ ಓದಿ: ಮಧ್ಯರಾತ್ರಿ ಧ್ವಜ ಹಾರಿಸಿದ ಸಿಎಂ ಬಸವರಾಜ ಬೊಮ್ಮಾಯಿ

1947 ರಲ್ಲಿ ಬ್ರಿಟಿಷ್ ವಸಾಹತುಶಾಹಿ ಆಡಳಿತದ ಅಂತ್ಯವನ್ನು ಆಚರಿಸುವ ಭಾರತ ಸೋಮವಾರ ತನ್ನ 75 ನೇ ಸ್ವಾತಂತ್ರ‍್ಯದ ವರ್ಷವನ್ನು ಆಚರಿಸುತ್ತಿದೆ. ಮಹಾತ್ಮ ಗಾಂಧಿಯವರು ಸತ್ಯ ಮತ್ತು ಅಹಿಂಸೆಯ ನಿರಂತರ ಸಂದೇಶವನ್ನು ನೀಡಿ, ಮಾರ್ಗದರ್ಶನ ಮಾಡಿದ್ದಾರೆ. ಈ ಪ್ರಜಾಸತ್ತಾತ್ಮಕ ಪ್ರಯಾಣವನ್ನು ಗೌರವಿಸಲು ಅಮೆರಿಕ ಭಾರತದೊಂದಿಗಿದೆ ಎಂದು ಹೇಳಿದರು. ಇದನ್ನೂ ಓದಿ: ಭವ್ಯ ಭಾರತಕ್ಕೆ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ – ದೇಶವಾಸಿಗಳಿಗೆ ಪ್ರಧಾನಿ ಶುಭಾಶಯ

ಉಭಯ ರಾಷ್ಟ್ರಗಳ ಒಗ್ಗಟ್ಟು ಅಮೆರಿಕವನ್ನು ಇನ್ನೂ ಹೆಚ್ಚು ನವೀನ, ಅಂತರ್ಗತ ಹಾಗೂ ಬಲಿಷ್ಠವಾದ ರಾಷ್ಟ್ರವನ್ನಾಗಿ ಮಾಡಿದೆ ಎಂದು ಬೈಡನ್ ಕೊಂಡಾಡಿದರು.

Live Tv

Leave a Reply

Your email address will not be published.

Back to top button