ಹ್ಯೂಸ್ಟನ್: ನಾವು ಪ್ರತಿ ಹಂತದಲ್ಲೂ ನಿಮ್ಮೊಂದಿಗೆ ಇರುತ್ತೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭರವಸೆ ನೀಡಿದ್ದಾರೆ.
ಹೌಡಿ ಮೋದಿ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರಿಗಾಗಿ ಅದ್ಭುತ ಕೆಲಸವನ್ನು ಮಾಡುತ್ತಿದ್ದಾರೆ. ಐತಿಹಾಸಿಕ ಸಾಲಿಗೆ ಸೇರುವ ಈ ಕಾರ್ಯಕ್ರಮದಲ್ಲಿ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ಖುಷಿ ತಂದಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ 50 ಸಾವಿರ ಜನ ಅನಿವಾಸಿ ಭಾರತೀಯರಿಗೆ ನನ್ನ ಧನ್ಯವಾದಗಳು ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗ್ಳೂರು ಹೆಸ್ರು ಪ್ರಸ್ತಾಪಿಸಿದ ಪ್ರಧಾನಿ ‘ಹೌಡಿ’ ಮೋದಿ
Advertisement
US President Donald Trump: As a result of PM Modi's pro growth policies, India has lifted nearly 300 million out of poverty, and that is an incredible number. #HowdyModi pic.twitter.com/M6MYfZyoCp
— ANI (@ANI) September 22, 2019
Advertisement
ಅನಿವಾಸಿ ಭಾರತೀಯರು ನರೇಂದ್ರ ಮೋದಿ ಹಾಗೂ ಅವರ ತಂಡವನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಈ ಕಾರ್ಯಕ್ರಮ ಆಯೋಜಿಸಲು ನಮ್ಮ ಆಡಳಿತ ಸಿಬ್ಬಂದಿಯೂ ಶ್ರಮಿಸಿದ್ದಾರೆ. ನಮ್ಮ ಸರ್ಕಾರವು ಅನಿವಾಸಿ ಭಾರತೀಯರ ಸೇವೆಗಾಗಿ ಸದಾ ಸಿದ್ಧವಿದೆ. ಎರಡೂ ದೇಶಗಳ ಮಧ್ಯೆ ಉತ್ತಮ ಸಂಬಂಧ ಬೆಳೆಸುತ್ತಿರುವ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ನನ್ನ ಧನ್ಯವಾದ ಎಂದರು. ಇದನ್ನೂ ಓದಿ: ನೀವು ದೇಶದಿಂದ ದೂರ ಇರಬಹುದು, ನಿಮ್ಮೊಂದಿಗೆ ದೇಶವಿದೆ: ಮೋದಿ
Advertisement
ಪ್ರಧಾನಿ ಮೋದಿಯವರು ಅಮೆರಿಕಗೆ ಭೇಟಿ ನೀಡಿದಾಗ ನನ್ನೊಂದಿಗೆ ಅನೇಕ ಅಭಿವೃದ್ಧಿ ವಿಚಾರವಾಗಿ ಚರ್ಚಿಸುತ್ತಾರೆ. ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಮೊದಲಿಗಿಂತ ಬಲವಾಗಿದೆ. ಮೋದಿಯವರ ನಾಯಕತ್ವದಲ್ಲಿ ಜಗತ್ತು ಬಲವಾದ ಸಾರ್ವಭೌಮತೆಗೆ ಸಾಕ್ಷಿಯಾಗಿದೆ. ಭಾರತವು 300 ದಶಲಕ್ಷಕ್ಕೂ ಹೆಚ್ಚು ಜನರನ್ನು ಬಡತನದಿಂದ ಹೊರತಂದಿದೆ ಎಂದು ಹೇಳಿದರು. ಇದನ್ನೂ ಓದಿ: ಹ್ಯೂಸ್ಟನ್‍ನಲ್ಲಿ ಕನ್ನಡ ಡಿಂಡಿಮ
Advertisement
#WATCH US Pres Donald Trump: Very soon India will have to access to another world class American product-NBA basketball. Wow, sounds good. Next week thousands in Mumbai will watch the first ever NBA game in India..am I invited Mr. Prime Minister? I may come, be careful I may come pic.twitter.com/QmcyeXurLg
— ANI (@ANI) September 22, 2019
ನಾವು ನಿಮ್ಮನ್ನು ಪ್ರೀತಿಸುತ್ತೇವೆ, ನಿಮ್ಮನ್ನು ಬೆಂಬಲಿಸುತ್ತೇವೆ ಮತ್ತು ಪ್ರತಿ ಹಂತದಲ್ಲೂ ನಿಮ್ಮೊಂದಿಗೆ ಇರುತ್ತೇವೆ. ನಮ್ಮೆರಡೂ ರಾಷ್ಟ್ರಗಳು ಹಿಂದೆಂದಿಗಿಂತಲೂ ಸಮೃದ್ಧಿಯಾಗಲು ನಿಮ್ಮೊಂದಿಗೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇನೆ. ಮುಗ್ಧ ನಾಗರಿಕರನ್ನು ಇಸ್ಲಾಮಿಕ್ ಭಯೋತ್ಪಾದನೆಯಿಂದ ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು.