ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ವಿಶೇಷ ಒಲವನ್ನು ಹೊರಹಾಕಿ, ಸ್ನೇಹಿತನಿಗೆ ಶುಭಾಶಯ ತಿಳಿಸಿದ್ದಾರೆ.
‘ನಾನು ಭಾರತವನ್ನು ಪ್ರೀತಿಸುತ್ತೇನೆ. ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಈ ಶುಭಾಶಯಗಳನ್ನು ತಿಳಿಸಿಬಿಡಿ ಅಂತ ಡೊನಾಲ್ಡ್ ಟ್ರಂಪ್ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಹೇಳಿದ್ದಾರೆ.
Advertisement
ಅಮೆರಿಕಾದಲ್ಲಿ ನಡೆಯುತ್ತಿರುವ ಮಾದಕ ದ್ರವ್ಯದ ವಿರುದ್ಧದ ಜಾಗತಿಕ ಮಟ್ಟದ ಸಭೆಯಲ್ಲಿ ಸಚಿವೆ ಸುಷ್ಮಾ ಸ್ವರಾಜ್ ಭಾಗಿಯಾಗಿದ್ದರು. ಈ ವೇಳೆ ಸುಷ್ಮಾ ಸ್ವರಾಜ್ ಅವರನ್ನು ಅಮೆರಿಕಾದ ರಾಯಭಾರಿ ನಿಕ್ಕಿ ಹಾಲೆ, ಟ್ರಂಪ್ ಅವರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.
Advertisement
Advertisement
Advertisement
ಟ್ರಂಪ್ ಜೊತೆಗೆ ಮಾತು ಪ್ರಾರಂಭಿಸಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರು ನಿಮಗೆ ಶುಭಾಶಯ ತಿಳಿಸಲು ಹೇಳಿದ್ದಾರೆ ಎಂದು ಸುಷ್ಮಾ ಶುಭಕೊರಿದ್ದೇ ತಡ, ಟ್ರಂಪ್ ಪ್ರತಿಕ್ರಿಯಿಸಿ, ‘ನಾನು ಭಾರತವನ್ನು ಪ್ರೀತಿಸುತ್ತೇನೆ. ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರಿಗೂ ನನ್ನ ಶುಭಾಶಯ ತಿಳಿಸಿ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಡೊನಾಲ್ಡ್ ಟ್ರಂಪ್ ಅವರು ಸ್ನೇಹಿತ ಅಂತ ಕರೆದಿದ್ದು ಇದೇ ಮೊದಲಲ್ಲ. ಕಳೆದ ವರ್ಷ ನವೆಂಬರ್ ನಂದು ಅಮೆರಿಕಾದ ವೈಟ್ ಹೌಸ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೂಡ ಮೋದಿ ನನ್ನ ಆತ್ಮೀಯ ಗೆಳೆಯ ಎಂದಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv