ಉಕ್ರೇನ್‌ಗೆ ಮಿಲಿಟರಿ ನೆರವು ನಿಲ್ಲಿಸಿದ ಟ್ರಂಪ್‌

Public TV
1 Min Read
Volodymyr Zelensky Donald Trump 3

– ಝೆಲೆನ್ಸ್ಕಿ ಜೊತೆ ಟ್ರಂಪ್ ಘರ್ಷಣೆ ಬೆನ್ನಲ್ಲೇ ನಿರ್ಧಾರ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್‌ಗೆ ಮಿಲಿಟರಿ ನೆರವನ್ನು ಸ್ಥಗಿತಗೊಳಿಸಿದ್ದಾರೆ. ಈ ಕುರಿತು ಶ್ವೇತಭವನದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಬೆಳವಣಿಗೆ ರಷ್ಯಾದೊಂದಿಗೆ ಶಾಂತಿ ಮಾತುಕತೆಗೆ ಒಪ್ಪಿಕೊಳ್ಳಲು ಉಕ್ರೇನ್ ಮೇಲೆ ಒತ್ತಡವನ್ನು ತೀವ್ರವಾಗಿ ಹೆಚ್ಚಿಸಿದೆ.

donald trump vladimir putin

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಯುದ್ಧಕ್ಕೆ ತ್ವರಿತ ಅಂತ್ಯ ಹಾಡಲು ಪ್ರಯತ್ನಿಸುತ್ತಿರುವ ಟ್ರಂಪ್ ನಡುವಿನ ಸಾರ್ವಜನಿಕ ಘರ್ಷಣೆಯ ಕೆಲವೇ ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಅಮೆರಿಕದ ಈ ನಿರ್ಧಾರವು ಉಕ್ರೇನ್‌ಗೆ ಸಂಕಷ್ಟ ತಂದೊಡ್ಡಿದೆ. ಅಮೆರಿಕದ ಶಸ್ತ್ರಾಸ್ತ್ರ ನೆರವಿನಲ್ಲಿ ಅಡಚಣೆಯಾದರೆ, ರಷ್ಯಾದ ಆಕ್ರಮಣವನ್ನು ಹಿಮ್ಮೆಟ್ಟಿಸುವುದು ಉಕ್ರೇನ್‌ಗೆ ಕಷ್ಟವಾಗಲಿದೆ.

ಅಮೆರಿಕ ಅಧ್ಯಕ್ಷರು ಶಾಂತಿಯತ್ತ ಗಮನಹರಿಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ನಮ್ಮ ಪಾಲುದಾರರು ಸಹ ಆ ಗುರಿಗೆ ಬದ್ಧರಾಗಿರಬೇಕು ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article