ನ್ಯೂಯಾರ್ಕ್: ರಷ್ಯಾ ಮತ್ತು ಉಕ್ರೇನ್ (Russia- Ukraine) ನಡುವೆ ಯುದ್ಧ ಮುಂದುವರಿದಿದೆ. ಇತ್ತೀಚಿನ ದಿನಗಳಲ್ಲಿ ರಷ್ಯಾದಿಂದ ಉಕ್ರೇನ್ ಮೇಲೆ ಕ್ಷಿಪ್ರ ದಾಳಿ ನಡೆಸಲಾಗುತ್ತಿದೆ. ಉಕ್ರೇನ್ ಮದ್ದುಗುಂಡುಗಳ ತೀವ್ರ ಕೊರತೆಯನ್ನು ಹೊಂದಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ, ಉಕ್ರೇನ್‌ಗೆ ಸಹಾಯ ಮಾಡಲು ಅಮೆರಿಕ ಮತ್ತೆ ಮುಂದೆ ಬಂದಿದೆ.
ಅಧಿಕಾರಿಗಳ ಪ್ರಕಾರ, ಈ ಯುದ್ಧದಲ್ಲಿ ಉಕ್ರೇನ್‌ಗೆ ಬೆಂಬಲವನ್ನು ನೀಡಲು ಅಮೆರಿಕ ತಯಾರಿ ನಡೆಸುತ್ತಿದೆ. ಅಮೆರಿಕ ಈಗ ಉಕ್ರೇನ್‌ಗೆ 275 ಮಿಲಿಯನ್ ಡಾಲರ್‌ಗಳ ಮಿಲಿಟರಿ ನೆರವು ಪ್ಯಾಕೇಜ್ ನೀಡಲು ಸಿದ್ಧತೆ ನಡೆಸಿದೆ. ಇದರಲ್ಲಿ 155 ಎಂಎಂ ಫಿರಂಗಿ ಶೆಲ್‌ಗಳು, ನಿಖರವಾದ ವಾಯು ಯುದ್ಧಸಾಮಗ್ರಿಗಳು ಮತ್ತು ವಾಹನಗಳು ಸೇರಿವೆ ಎನ್ನಲಾಗಿದೆ.
ಇತ್ತ ರಷ್ಯಾದ ಭೂ ದಾಳಿಯ ನಂತರ ಈಶಾನ್ಯ ಉಕ್ರೇನ್‌ನಲ್ಲಿ ಸಾವಿರಾರು ಮಂದಿ ನಾಗರಿಕರು ಪ್ರದೇಶವನ್ನು ತೊರೆದಿದ್ದಾರೆ. ರಷ್ಯಾ ಫಿರಂಗಿ, ಪಟ್ಟಣಗಳು ಮತ್ತು ಹಳ್ಳಿಗಳನ್ನು ಗುರಿಯಾಗಿಸಿದೆ. ರಷ್ಯಾದ ಸೇನೆಯು ಗಡಿಯ ಬಹುಭಾಗದ ಮೇಲೆ ಹಿಡಿತ ಸಾಧಿಸಿದೆ. ಇದನ್ನೂ ಓದಿ: ಕತ್ತು ಹಿಸುಕಿ, ಚರ್ಮ ಸುಲಿದು ಬಾಂಗ್ಲಾ ಸಂಸದನ ದೇಹವನ್ನು ಕತ್ತರಿಸಿ ಹಾಕಿದ್ರು!