ವಾಷಿಂಗ್ಟನ್: ಓಹಿಯೋದಲ್ಲಿ ಎಫ್‌ಬಿಐ ಕಚೇರಿ ಮೇಲೆ ದಾಳಿ ಮಾಡಲು ಮುಂದಾದ ಬಂದೂಕುಧಾರಿಯನ್ನು ಪೊಲೀಸರು ಕೊಂದಿದ್ದಾರೆ.
ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಸಿನ್ಸಿನಾಟಿ ಫೀಲ್ಡ್ ಕಚೇರಿ ಮೇಲೆ ದಾಳಿಗೆ ಶಸ್ತ್ರಸಜ್ಜಿತ ವ್ಯಕ್ತಿ ಯತ್ನಿಸಿದ್ದ. ಕೂಡಲೇ ಎಚ್ಚೆತ್ತುಕೊಂಡ ಓಹಿಯೋ ಪೊಲೀಸ್ ಅಧಿಕಾರಿಗಳು ಆತನನ್ನು ಹತ್ಯೆಗೈದಿದ್ದಾರೆ. ಇದನ್ನೂ ಓದಿ: ಬಾಂಬ್ ಸ್ಫೋಟಿಸಿ ತಾಲಿಬಾನ್ ಧರ್ಮಗುರು ಹತ್ಯೆ
Advertisement
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹತ್ಯೆಯಾದ ಶಸ್ತ್ರಸಜ್ಜಿತ ವ್ಯಕ್ತಿಗೆ, ಜನವರಿ 6 ರಂದು ರಾಜಧಾನಿ ಮೇಲಿನ ದಾಳಿಯಲ್ಲಿ ಭಾಗವಹಿಸಿದ್ದ ಉಗ್ರಗಾಮಿ ಗುಂಪುಗಳೊಂದಿಗೆ ಸಂಬಂಧವಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
Advertisement
Advertisement
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫ್ಲೋರಿಡಾದ ಮನೆಯನ್ನು ಫೆಡರಲ್ ಏಜೆಂಟ್‌ಗಳು ಶೋಧಿಸಿದ ಕೆಲವೇ ದಿನಗಳಲ್ಲಿ ಎಫ್‌ಬಿಐ ಉದ್ಯೋಗಿಗಳನ್ನು ಕೊಲ್ಲುವುದಾಗಿ ಬೆದರಿಕೆ ಸಂದೇಶ ಬಂದಿತ್ತು. ಫೆಡರಲ್ ಕಾನೂನು ಜಾರಿ ವಿರುದ್ಧ ಆನ್‌ಲೈನ್ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಎಫ್‌ಬಿಐ ನಿರ್ದೇಶಕರು ವರದಿಗಾರರಿಗೆ ತಿಳಿಸಿದ ಒಂದು ದಿನದ ನಂತರ ಸಿನ್ಸಿನಾಟಿಯಲ್ಲಿ ಈ ದಾಳಿ ನಡೆದಿದೆ. ಇದನ್ನೂ ಓದಿ: ಮಕ್ಕಳಿಗೆ ಊಟ ಹಾಕ್ಲೋ, ಸಾಯಿಸ್ಲೋ – ಬೆಲೆ ಏರಿಕೆ ಖಂಡಿಸಿ ಪಾಕ್ ಪ್ರಧಾನಿಗೆ ಮಹಿಳೆಯಿಂದ ಕ್ಲಾಸ್