ವಾಷಿಂಗ್ಟನ್: ಟಾಟಾ ಗ್ರೂಪ್ಸ್ (Tata-Group) ಒಡೆತನದ ಏರ್ ಇಂಡಿಯಾಗೆ (Air India) ಮರುಪಾತಿ (Refund) ಹಾಗೂ ದಂಡವಾಗಿ (Fine) ಅಮೆರಿಕ (America) 121.5 ಮಿಲಿಯನ್ ಡಾಲರ್ (ಸುಮಾರು 987 ಕೋಟಿ ರೂ.) ವಿಧಿಸಿದೆ. ಈ ಮೂಲಕ ಏರ್ ಇಂಡಿಯಾ ಭಾರೀ ನಷ್ಟ ಅನುಭವಿಸಲಿದೆ.
ಕೋವಿಡ್ ಸಾಂಕ್ರಾಮಿಕ ವೇಳೆಯಲ್ಲಿ ಸಾಕಷ್ಟು ಬಾರಿ ವಿಮಾನ ರದ್ದತಿ ಹಾಗೂ ವಿಮಾನ ಬದಲಾವಣೆ ಮಾಡಿರುವ ಹಿನ್ನೆಲೆ ಏರ್ ಇಂಡಿಯಾ ಸೇರಿದಂತೆ ಒಟ್ಟು 6 ವಿಮಾನಯಾನ ಸಂಸ್ಥೆಗಳಿಗೆ ಅಮೆರಿಕ ಒಟ್ಟು 600 ಮಿಲಿಯನ್ ಡಾಲರ್ (ಸುಮಾರು 4 ಸಾವಿರ ಕೋಟಿ ರೂ.) ಮರುಪಾವತಿ ಮಾಡುವಂತೆ ಹೇಳಿದೆ.
Advertisement
Advertisement
ವರದಿಗಳ ಪ್ರಕಾರ, ಏರ್ ಇಂಡಿಯಾ ರದ್ದುಗೊಳಿಸಿದ ಹಾಗೂ ವಿಮಾನಗಳನ್ನು ಬದಲಿಸಿದ ಕಾರಣಕ್ಕೆ ಸಲ್ಲಿಸಲಾದ 1,900 ಮರುಪಾವತಿ ದೂರುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚಿನವುಗಳಿಗೆ ಪ್ರತಿಕ್ರಿಯಿಸಲು 100ಕ್ಕೂ ಹೆಚ್ಚು ದಿನಗಳನ್ನು ತೆಗೆದುಕೊಂಡಿದೆ.
Advertisement
ಏರ್ ಇಂಡಿಯಾ ವಿಮಾನ ರದ್ದತಿ ಹಾಗೂ ವಿಳಂಬಗೊಳಿಸಿದ್ದಕ್ಕೆ ತಮ್ಮ ಗ್ರಾಹಕರಿಗೆ ಸಕಾಲದಲ್ಲಿ ಮರುಪಾವತಿಯನ್ನು ಮಾಡಿಲ್ಲ. ತಮ್ಮ ಗ್ರಾಹಕರಿಗೆ ಮರುಪಾವತಿ ಮಾಡುವಲ್ಲಿ ತೀವ್ರವಾದ ವಿಳಂಬ ಮಾಡಿರುವುದರಿಂದ ಅವರು ಸಮಸ್ಯೆಗಳನ್ನು ಎದುರಿಸಿದ್ದಾರೆ. ಹೀಗಾಗಿ ಸಂಸ್ಥೆಗೆ ದಂಡ ವಿಧಿಸಿರುವುದಾಗಿ ಅಮೆರಿಕದ ಸಾರಿಗೆ ಇಲಾಖೆ ತಿಳಿಸಿದೆ.
Advertisement
ಏರ್ ಇಂಡಿಯಾದೊಂದಿಗೆ ಫ್ರಾಂಟಿಯರ್, ಟಿಎಪಿ ಪೋರ್ಚುಗಲ್, ಏರೋ ಮೆಕ್ಸಿಕೋ, ಇಐ ಎಐ ಮತ್ತು ಏವಿಯಾಂಕಾ ಸೇರಿದಂತೆ ಇತರ ವಿಮಾನಯಾನ ಸಂಸ್ಥೆಗಳಿಗೆ ದಂಡ ವಿಧಿಸಲಾಗಿದೆ. ಏರ್ ಇಂಡಿಯಾ ತನ್ನ ಪ್ರಯಾಣಿಕರಿಗೆ 121.5 ಮಿಲಿಯನ್ ಡಾಲರ್ ಮರುಪಾವತಿಯೊಂದಿಗೆ 1.4 ಮಿಲಿಯನ್ ಡಾಲರ್ (11 ಕೋಟಿ ರೂ.) ದಂಡವನ್ನು ಪಾವತಿಸಲು ಆದೇಶಿಸಲಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.