ಕ್ಯಾಲಿಫೋರ್ನಿಯಾದ ನೌಕಾನೆಲೆಯಲ್ಲಿ F-35 ಯುದ್ಧ ವಿಮಾನ ಪತನ

Public TV
1 Min Read
F 35 Fighter Jet Crash In california

ಸ್ಯಾಕ್ರಮೆಂಟೊ: ಕ್ಯಾಲಿಫೋರ್ನಿಯಾದ (California) ನೇವಲ್ ಏರ್ ಸ್ಟೇಷನ್ ಲೆಮೂರ್ (Naval Air Station Lemoore) ಬಳಿ ಎಫ್-35 ಯುದ್ಧ ವಿಮಾನ (F-35 Fighter Jet) ಪತನಗೊಂಡಿದೆ.

ವಾಯುನೆಲೆಯ ಅಧಿಕೃತ ಹೇಳಿಕೆಯ ಪ್ರಕಾರ, ವಿಮಾನ ಪತನದ ವೇಳೆ ಪೈಲಟ್ ಯಶಸ್ವಿಯಾಗಿ ಜಿಗಿದಿದ್ದು, ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ಜೀವ ಬೆದರಿಕೆ ಕೇಸ್ – ಸ್ಥಳ ಮಹಜರಿಗೆ ಬರುವಂತೆ ಪ್ರಥಮ್, ರಕ್ಷಕ್‌ಗೆ ನೋಟಿಸ್

ಬುಧವಾರ ಸ್ಥಳೀಯ ಕಾಲಮಾನ ಸಂಜೆ 6:30ರ ವೇಳೆಗೆ ವಿಮಾನ ಪತನಗೊಂಡಿದೆ. ವಿಮಾನ ಪತನಗೊಂಡ ಪರಿಣಾಮ ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಕಾಣಿಸಿದೆ. ಘಟನೆಗೆ ನಿಖರ ಕಾರಣ ಏನು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ನೌಕಾಪಡೆ ತಿಳಿಸಿದೆ. ಇದನ್ನೂ ಓದಿ: ಬೆಂಗ್ಳೂರಿನ ಪ್ರತಿಷ್ಠಿತ ಕಂಪನಿಯ ಸರ್ವರ್ ಹ್ಯಾಕ್ – 378 ಕೋಟಿ ಕ್ರಿಪ್ಟೋ ಕರೆನ್ಸಿ ಕಳ್ಳತನ

ವಿಮಾನವು ಸ್ಟ್ರೈಕ್ ಫೈಟರ್ ಸ್ಕ್ವಾಡ್ರನ್ ವಿಎಫ್-125ಗೆ ಸೇರಿದ್ದು, ಇದನ್ನು ‘ರಫ್ ರೈಡರ್ಸ್’ ಎಂದೂ ಕರೆಯುತ್ತಾರೆ. ಈ ಸ್ಕ್ವಾಡ್ರನ್ ಫ್ಲೀಟ್ ರಿಪ್ಲೇಸ್ಮೆಂಟ್ ಸ್ಕ್ವಾಡ್ರನ್ ಆಗಿ ಕಾರ್ಯನಿರ್ವಹಿಸುತ್ತದೆ. ಇದನ್ನೂ ಓದಿ: Uttar Pradesh | ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿನಿಯ ಕಿಡ್ನ್ಯಾಪ್ – ದೃಶ್ಯ ಸಿಸಿಟಿವಿಯಲ್ಲಿ ಸೆರೆ

Share This Article