-ಭಯೋತ್ಪಾದನೆಗೆ ಪಾಕ್ ಸಹಕಾರ
ಶ್ರೀನಗರ: ಭಾರತ ಗಡಿಯಲ್ಲಿ ಉಗ್ರರು ನಡೆಸುತ್ತಿರುವ ದಾಳಿಗೆ ಪಾಕ್ ಸೇನೆ ನೆರವನ್ನು ನೀಡುತ್ತಿದೆ ಎಂಬುವುದಕ್ಕೆ ಪುರಾವೆ ದೊರೆತಿದೆ. ಉಗ್ರರು ಸದೆಬಡಿರುವ ಸೇನೆ ಅವರ ಬಳಿಕ ಪಾಕ್ ಸೇನೆಯ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.
ಶುಕ್ರವಾರ ಬದ್ಗಾಮ್‍ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ಭದ್ರತಾಪಡೆ ಜೈಶ್-ಎ- ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರನ್ನು ಹತ್ಯೆಗೈದಿದ್ದು, ಒರ್ವನನ್ನು ಬಂಧಿಸಿದೆ. ಈ ವೇಳೆ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳಲ್ಲಿ ಪಾಕಿಸ್ತಾನ ಸೇನೆಯ ಅಮೆರಿಕ ನಿರ್ಮಿತ ಎಂ4 ಕಾರ್ಬೈನ್ ರೈಫಲ್ ಕೂಡಾ ಪತ್ತೆಯಾಗಿದೆ. ಇದರಿಂದ ಪಾಕ್ ಸೈನ್ಯವೇ ನೇರವಾಗಿ ಈ ರೈಫಲ್‍ಗಳನ್ನು ಉಗ್ರರಿಗೆ ನೀಡಿರುವುದಕ್ಕೆ ಇದು ಸಾಕ್ಷಿಯಾಗಿದೆ.
Advertisement
Advertisement
ಪಾಕ್ ಯೋಧರು ಬಳಸುವ ರೈಫಲ್ ಉಗ್ರರ ಬಳಿ ಪತ್ತೆಯಾಗುತ್ತಿರುವುದು ಇದು 3ನೇ ಬಾರಿಯಾಗಿದ್ದು, ಈ ಹಿಂದೆ 2017ರ ಅಕ್ಟೋಬರ್‍ನಲ್ಲಿ ಮಸೂದ್ ಅಜರ್‍ನ ಅಳಿಯ ತಲ್ಹಾ ರಶೀದ್‍ನ ಎನ್‍ಕೌಂಟರ್ ನಡೆದಾಗ ಇದೇ ಶಸ್ತ್ರ ದೊರಕಿತ್ತು. ಅಲ್ಲದೆ 2018ರ ಅಕ್ಟೋಬರ್ 31ರಂದು ಪುಲ್ವಾಮಾ ಜಿಲ್ಲೆಯ ಟ್ರಾನ್‍ನಲ್ಲಿ ಜೈಷ್‍ಟ ಉಗ್ರರ ಮೇಲೆ ದಾಳಿ ನಡೆಸಿದಾಗಲೂ ಸ್ಥಳದಲ್ಲೂ ಎಂ4 ರೈಫಲ್ ಪತ್ತೆಯಾಗಿತ್ತು.
Advertisement
Advertisement
ಏನಿದು ಎಂ4 ರೈಫಲ್?
ಎಂ4 ಕಾರ್ಬೈನ್ ರೈಫಲ್‍ಗಳು ಅರೆಸ್ವಯಂಚಾಲಿತ ಶಸ್ತ್ರವಾಗಿದ್ದು, ಇದರಿಂದ ಮೂರು ಸುತ್ತು ಗುಂಡು ಹಾರಿಸಬಹುದಾಗಿದೆ. ಅಮೆರಿಕ ಯೋಧರು ಇದನ್ನು ಪ್ರಧಾನವಾಗಿ ಬಳಸುತ್ತಾರೆ. ಹಲವಾರು ಯುದ್ಧಗಳಲ್ಲಿ ಅಮೆರಿಕಾ ಎಂ4 ರೈಫಲ್‍ಗಳನ್ನು ಬಳಸಿದೆ. ಹಾಗೆಯೇ ಈ ಶಸ್ತ್ರಗಳನ್ನು ಪಾಕಿಸ್ತಾನಕ್ಕೂ ಮಾರಾಟ ಮಾಡಿದೆ.
ಪುಲ್ವಾಮಾ ದಾಳಿ ಬಳಿಕ ಗಡಿಭಾಗದಲ್ಲಿ ಗುಂಡಿನ ಸದ್ದು ಜೋರಾಗಿಯೇ ಕೇಳಿಬರುತ್ತಿದೆ. ಅಲ್ಲದೆ ಈ ದಾಳಿ ಬಳಿಕ ಭಾರತೀಯ ಭದ್ರತಾ ಪಡೆ ಕಣಿವೆಯಲ್ಲಿ ಉಗ್ರರ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದು, ಈವರೆಗೆ ಸುಮಾರು ಜೈಶ್ ಸಂಘಟನೆಗೆ ಸೇರಿರುವ 30 ಉಗ್ರರನ್ನು ಸದೆಬಡಿಯಲಾಗಿದೆ. ಹಾಗೆಯೇ ಕಳೆದ 24 ಗಂಟೆಗಳಲ್ಲಿ ಸುಮಾರು 6 ಮಂದಿ ಉಗ್ರರನ್ನು ಭದ್ರತಾಪಡೆ ಹತ್ಯೆಗೈದಿದೆ. ಗುರುವಾರ ಶೋಪಿಯಾನ್ ಬಳಿ ನಡೆಸಿದ ಎನ್‍ಕೌಂಟರ್‍ನಲ್ಲಿ ನಾಲ್ವರು ಉಗ್ರರು ಹಾಗೂ ಶುಕ್ರವಾರದಂದು ಬದ್ಗಾಮ್‍ನಲ್ಲಿ ಇಬ್ಬರು ಜೈಷ್ ಉಗ್ರರು ಹತರಾಗಿದ್ದಾರೆ.