ಜೂನ್ 21 ರಿಂದ 5 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ
- 10 ಮಿಲಿಯನ್ ಡೋಸ್ ಸ್ಟಾಕ್ ಇಟ್ಟ ಬೈಡನ್ ಸರ್ಕಾರ

ವಾಷಿಂಗ್ಟನ್: ವಿಶ್ವದಾದ್ಯಂತ ಕೋವಿಡ್ ಹೆಚ್ಚಳವಾಗುತ್ತಿದೆ. ಇದರಿಂದ ಆಯಾ ದೇಶಗಳು ಕೋವಿಡ್ ನಿಯಂತ್ರಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿವೆ. ಆಸ್ಪತ್ರೆಗಳಲ್ಲಿ ಹಾಸಿಗೆ, ವೆಂಟಿಲೇಟರ್ ಹಾಗೂ ಐಸಿಯು ಘಟಕಗಳನ್ನು ಸಿದ್ಧಪಡಿಸಿವೆ.
ಅಮೆರಿಕದಲ್ಲೂ ಕೆಲ ದಿನಗಳಿಂದ ಕೋವಿಡ್ ಕೇಸ್ ಹೆಚ್ಚಳವಾಗುತ್ತಿದ್ದು, ಮಕ್ಕಳ ಮೇಲೆ ನಿಗಾ ಇರಿಸಲಾಗಿದೆ. ಅದಕ್ಕಾಗಿ ಜೂನ್ 21 ರಿಂದ 5 ವರ್ಷದ ಮಳಿಗೂ ಕೊರೊನಾ ಲಸಿಕೆ ನೀಡಲು ಅಮೆರಿಕದ ಆರೋಗ್ಯ ಇಲಾಖೆ ನಿರ್ಧರಿಸಿದೆ. ಇದನ್ನೂ ಓದಿ: 140 ಪ್ರಯಾಣಿಕರ ಜೀವ ಉಳಿಸಿ ತಾನೇ ಪ್ರಾಣ ಬಿಟ್ಟ ಹೈಸ್ಪೀಡ್ ಬುಲೆಟ್ ಟ್ರೈನ್ ಚಾಲಕ
ಇದಕ್ಕಾಗಿ ಜೂನ್ 15ರಂದೇ ಸ್ವತಂತ್ರ ತಜ್ಞರ ಸಮಿತಿಯು ಮಕ್ಕಳ ದತ್ತಾಂಶವನ್ನು ಕಲೆ ಹಾಕಲು ಸಭೆ ನಡೆಸಲಿದೆ. ಇದನ್ನೂ ಓದಿ: ಸೇನೆಯಲ್ಲಿ 4 ವರ್ಷ ಮಾತ್ರ ಸೇವೆ – ಶೀಘ್ರವೇ ಅಗ್ನಿಪಥ್‌ಗೆ ಅನುಮೋದನೆ
ಈ ಕುರಿತು ಮಾಹಿತಿ ನೀಡಿರುವ ಶ್ವೇತಭವನದ ಕೋವಿಡ್ ಪ್ರತಿಕ್ರಿಯೆ ಸಂಯೋಜಕ ಡಾ.ಆಶಿಶ್ ಝಾ, ಬೈಡನ್ ನೇತೃತ್ವದ ಸರ್ಕಾರವು 10 ಮಿಲಿಯನ್ (ದಶಲಕ್ಷ) ನಷ್ಟು ಫಿಜರ್ ಮತ್ತು ಮೊಡೆರ್ನಾ ಲಸಿಕೆಗಳನ್ನು ರಾಜ್ಯಗಳ ಔಷಧಾಲಯಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಲಭ್ಯವಾಗುವಂತೆ ಮಾಡಿದೆ. ಆರೋಗ್ಯ ಇಲಾಖೆ ಅಧಿಕೃತ ಆದೇಶ ಹೊರಡಿಸಿದ ನಂತರ ಲಸಿಕೆಯನ್ನು ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.