InternationalLatestLeading NewsMain Post

ಪತ್ರಕರ್ತೆ ಹಿಜಬ್ ಧರಿಸದ್ದಕ್ಕೆ ಸಂದರ್ಶನವನ್ನೇ ರದ್ದುಗೊಳಿಸಿದ ಇರಾನ್ ಅಧ್ಯಕ್ಷ

ವಾಷಿಂಗ್ಟನ್: ಸಂದರ್ಶಕಿಯೊಬ್ಬಳು ಹಿಜಬ್ (Hijab) ಧರಿಸಲು ನಿರಾಕರಿಸಿದ್ದಾಗಿ ಇರಾನ್ ಅಧ್ಯಕ್ಷ (Iran President) ಇಬ್ರಾಹಿಂ ರೈಸಿ ಸಂದರ್ಶನವನ್ನು ರದ್ದುಗೊಳಿಸಿದ್ದಾರೆ.

ಸಿಎನ್‍ನ್ ವಾಹಿನಿಯ ಖ್ಯಾತ ಆ್ಯಂಕರ್ (CNN Journalist) ಕ್ರಿಸ್ಟಿಯಾನೆ ಅಮನ್‍ಪೋರ್ (Christiane Amanpour) ಅವರು ಹಿಜಬ್ ಧರಿಸದೇ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿಯನ್ನು (Ebrahim Raisi) ಸಂದರ್ಶನ ಮಾಡಲು ನಿರ್ಧರಿಸಿದ್ದರು. ಸಂದರ್ಶನ ನಡೆಸುವ ಮುನ್ನವೇ ಹಿಜಬ್ ಧರಿಸಬೇಕು ಎಂದು ಷರತ್ತು ವಿಧಿಸಲಾಗಿತ್ತು. ಆದರೆ ಈ ಷರತ್ತನ್ನು ಅಮ್‍ಪೋರ್ ನಿರಾಕರಿಸಿದ್ದಾರೆ. ಹಿಜಬ್ ಧರಿಸದ್ದಕ್ಕೆ ಇಬ್ರಾಹಿಂ ರೈಸಿ ಸಂದರ್ಶನವನ್ನು ರದ್ದುಗೊಳಿಸಿದ್ದಾರೆ.

ಈ ಬಗ್ಗೆ ಅಮನ್‍ಪೋರ್ ಸರಣಿ ಟ್ವೀಟ್ ಮಾಡಿದ್ದು, ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ವಿರುದ್ಧ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೇ ಖಾಲಿ ಕುರ್ಚಿ ಇರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?: ಇರಾನ್‍ನಲ್ಲಿ ಹೆಚ್ಚುತ್ತಿರುವ ಪ್ರತಿಭಟನೆ ಬಗ್ಗೆ ಚರ್ಚಿಸಲು ಯೋಜಿಸಿದ್ದೆ. ಇದರಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಮಹ್ಸಾ ಅಮಿನಿಯ ಸಾವು, ಮಹಿಳೆಯರು ಹಿಜಬ್ ಸುಟ್ಟು ಪ್ರತಿಭಟನೆ ನಡೆಸುತ್ತಿರುವುದರ ಜೊತೆಗೆ ಹಲವಾರು ಘಟನೆಗಳು ಸೇರಿತ್ತು. ಇರಾನ್‍ನ ಅಧ್ಯಕ್ಷ ರೈಸಿ ಯುಎಸ್‍ಗೆ ಭೇಟಿ ನೀಡಿದ ಸಂದರ್ಭದಲ್ಲಿ ಇದು ಅವರ ಮೊದಲ ಸಂದರ್ಶನವಾಗಿದೆ. ಈ ಸಂದರ್ಶನವು ವಾರಗಳ ಹಿಂದಿನ ಯೋಜನೆಯಾಗಿದ್ದು, 8 ಗಂಟೆಗಳಿಂದ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದೆವು.

ಇರಾನ್‍ನ ಅಧ್ಯಕ್ಷರು ಬರುತ್ತಾರೆ ಎಂದು ಅವರಿಗಾಗಿ 40 ನಿಮಿಷಗಳ ಕಾಲ ಕಾಯುತ್ತಿದ್ದೆವು. ಆದರೆ ಸಂದರ್ಶನ ಪ್ರಾರಂಭವಾಗುವ ಮುನ್ನ ಸಹಾಯಕರೊಬ್ಬರು ಬಂದು ಅಧ್ಯಕ್ಷರು ಹೇಳಿದ್ದಾರೆ. ತಲೆಗೆ ಸ್ಕಾರ್ಫ್ ಧರಿಸಬೇಕು. ಏಕೆಂದರೆ ಇದು ಮೊಹರಂನ ಪವಿತ್ರ ತಿಂಗಳಾಗಿದೆ ಎಂದು ಸಲಹೆ ನೀಡಿದ್ದರು. ಇದನ್ನೂ ಓದಿ: ಇರಾನ್‍ ಹಿಜಬ್ ಹೋರಾಟ – ಪೊಲೀಸರ ಗುಂಡಿಗೆ 8 ಮಂದಿ ಬಲಿ

ಈ ಹಿನ್ನೆಲೆಯಲ್ಲಿ ನಾನು ನಯವಾಗಿ ನಿರಾಕರಿಸಿದ್ದು, ನಾವು ನ್ಯೂಯಾರ್ಕ್‍ನಲ್ಲಿದ್ದೇವೆ. ಹಿಜಬ್‍ಗೆ ಸಂಬಂಧಿಸಿದಂತೆ ಇಲ್ಲಿ ಯಾವುದೇ ಕಾನೂನು ಅಥವಾ ಸಂಪ್ರದಾಯಗಳಿಲ್ಲ. ನಾನು ಇರಾನ್ ಹೊರಗೆ ಸಂದರ್ಶನ ಮಾಡುವಾಗ ಹಿಂದಿನ ಯಾವ ಅಧ್ಯಕ್ಷರು ಹಿಜಬ್ ಧರಿಸಲು ಹೇಳಿರಲಿಲ್ಲ ಎಂದು ಅವರಿಗೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅವರು ಸಂದರ್ಶನವನ್ನು ನಿರಾಕರಿಸಿದರು ಎಂದು ಹೇಳಿದ್ದಾರೆ.

ಹಿಜಬ್ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸ್ ಕಸ್ಟಡಿಯಲ್ಲಿ ಯುವತಿಯೊಬ್ಬಳು ಸಾವನ್ನಪ್ಪಿದ್ದಳು. ಇದಾದ ನಂತರ ಇರಾನ್‍ನಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದ್ದು 30 ಮಂದಿ ಸಾವನ್ನಪ್ಪಿದ್ದಾರೆ. ಪ್ರತಿಭಟನೆ ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಇರಾನ್‍ನಲ್ಲಿ ಇಂಟರ್‌ನೆಟ್ ಸೇವೆಯನ್ನು ಬಂದ್ ಮಾಡಲಾಗಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್ ಹೋರಾಟ- ವಾಟ್ಸಪ್, ಇನ್‌ಸ್ಟಾಗ್ರಾಮ್ ಬಳಕೆ ಸ್ಥಗಿತ

Live Tv

Leave a Reply

Your email address will not be published.

Back to top button