ವಾಷಿಂಗ್ಟನ್: ರಷ್ಯಾ-ಉಕ್ರೇನ್ ಯುದ್ಧದಲ್ಲಿ ರಷ್ಯಾದ ಜನರಲ್‌ಗಳನ್ನು ಕೊಲ್ಲಲು ಉಕ್ರೇನ್ ಪಡೆಗಳಿಗೆ ಅಮೆರಿಕದ ಗುಪ್ತಚರರು ಸಹಾಯ ಮಾಡಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ರಷ್ಯಾ ಪಡೆಗಳ ಚಲನವಲನ, ಸ್ಥಳ ಹಾಗೂ ರಷ್ಯಾದ ಮಿಲಿಟರಿ ಪ್ರಧಾನ ಕಚೇರಿಗಳ ಬಗೆಗಿನ ವಿವರಗಳನ್ನು ವಾಷಿಂಗ್ಟನ್ ಉಕ್ರೇನ್‌ಗೆ ಒದಗಿಸಿದೆ. ರಷ್ಯಾದ ಅಧಿಕಾರಿಗಳ ಮೇಲೆ ಫಿರಂಗಿ ಹಾಗೂ ಇತರ ದಾಳಿಗಳನ್ನು ನಡೆಸಲು ಅಮೆರಿಕ ಗುಪ್ತಚರರು ಸಹಾಯ ಮಾಡಿರುವುದಾಗಿ ವರದಿ ತಿಳಿಸಿದೆ. ಇದನ್ನೂ ಓದಿ: ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು 2 ವರ್ಷ ಸಹಿಸಿಕೊಳ್ಳಬೇಕು: ಹಣಕಾಸು ಸಚಿವ
Advertisement
Advertisement
ಯುದ್ಧದಲ್ಲಿ ಉಕ್ರೇನ್ ಪಡೆಗಳು ರಷ್ಯಾದ 12 ಜನರಲ್‌ಗಳನ್ನು ಕೊಂದಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕದ ಗುಪ್ತಚರರ ಸಹಾಯದಿಂದ ಎಷ್ಟು ಜನರಲ್‌ಗಳನ್ನು ಕೊಲ್ಲಲಾಗಿದೆ ಎಂಬುದನ್ನು ತಿಳಿಸಲು ಅಮೆರಿಕ ನಿರಾಕರಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್ ಬ್ಯಾನ್ ಮಾಡಿದ ತಾಲಿಬಾನ್
Advertisement