ವಾಷಿಂಗ್ಟನ್: ರಷ್ಯಾದಿಂದ ಎಸ್-400 ಕ್ಷಿಪಣಿ ಖರೀದಿಸಿದ್ದಕ್ಕೆ ಪ್ರತಿಯಾಗಿ ಕಾಟ್ಸಾ ಕಾಯ್ದೆಯಡಿ ಭಾರತದ ಮೇಲೆ ಯಾವುದೇ ದಿಗ್ಬಂಧನ ವಿಧಿಸದಿರುವುದಕ್ಕೆ ಅಮೆರಿಕ ಪ್ರತಿನಿಧಿಗಳ ಸಭೆ ಒಪ್ಪಿಗೆ ಸೂಚಿಸಿದೆ.
Advertisement
ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಇಂಡೋ ಅಮೆರಿಕನ್ ಸದಸ್ಯ ರೋ ಖನ್ನಾ ಅಮೆರಿಕ ಪ್ರತಿನಿಧಿಗಳ ಸಭೆಯಲ್ಲಿ ಮಂಡಿಸಿದ್ರು. ಇದಕ್ಕೆ ಮೇಜುಕುಟ್ಟುವ ಮೂಲಕ ಅಮೆರಿಕಾದ ಕೆಳಸಭೆ ಅನುಮೋದನೆ ನೀಡಿದೆ. 2014ರಲ್ಲಿ ಕ್ರಿಮಿಯಾವನ್ನು ರಷ್ಯಾ ಆಕ್ರಮಿಸಿದ್ದಕ್ಕೆ ಮತ್ತು 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಮೂಗು ತೂರಿಸಿದ್ದಕ್ಕೆ ಪ್ರತಿಯಾಗಿ 2017ರಲ್ಲಿ ಅಮೆರಿಕ ಕಾಟ್ಸಾ ಕಾಯ್ದೆಯನ್ನು ಜಾರಿ ಮಾಡಿತ್ತು. ರಷ್ಯಾದ ಸೇನೆ ಮತ್ತು ಗೂಢಚರ್ಯೆ ಪಡೆಗಳ ಜೊತೆ ವ್ಯವಹಾರ ಹೊಂದಿರುವ ದೇಶಗಳ ಮೇಲೆ ಶಿಕ್ಷಾತ್ಮಕ ದಿಗ್ಬಂಧನ ವಿಧಿಸುವುದು ಕಾಟ್ಸಾ ಕಾಯ್ದೆಯ ಉದ್ದೇಶವಾಗಿದೆ. ಇದನ್ನೂ ಓದಿ: ಜ್ಞಾನವಾಪಿ ವಿವಾದ – ಹಿಂದೂಗಳಿಗೆ ಪೂಜೆ ಮಾಡಲು ಅನುಮತಿ ನೀಡುವಂತೆ ಕೋರಿ ಸುಪ್ರೀಂಗೆ ಅರ್ಜಿ
Advertisement
Advertisement
ಈ ತಿದ್ದುಪಡಿ ಕಾಯ್ದೆಯು ಚೀನಾದಂತಹ ಆಕ್ರಮಣಕಾರರನ್ನು ತಡೆಯಲು ಸಹಾಯ ಮಾಡುವ ನಿಟ್ಟಿನಲ್ಲಿ ವಿನಾಯಿತಿಯನ್ನು ಭಾರತಕ್ಕೆ ಒದಗಿಸಲು ಬೈಡನ್ ಆಡಳಿತ ಅನುವು ಮಾಡಿಕೊಟ್ಟಿದೆ. ಚೀನಾದಂತಹ ಆಕ್ರಮಣಕಾರರನ್ನು ತಡೆಯಲು ನೆರವಾಗಲು ರಷ್ಯಾದಿಂದ ಭಾರತ ಖರೀದಿಸುತ್ತಿರುವ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಕಾಟ್ಸಾ ಕಾಯ್ದೆಯಿಂದ ವಿನಾಯಿತಿ ನೀಡುವ ತಿದ್ದುಪಡಿ ಮಸೂದೆಗೆ ಅಮೆರಿಕದ ಪ್ರತಿನಿಧಿ ಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕಾರ ಸಿಕ್ಕಿದೆ. ಇದನ್ನೂ ಓದಿ: ಭಗತ್ ಸಿಂಗ್ ಒಬ್ಬ ಭಯೋತ್ಪಾದಕ: ಶಿರೋಮಣಿ ಅಕಾಲಿ ದಳ ಸಂಸದ ವಿವಾದಾತ್ಮಕ ಹೇಳಿಕೆ
Advertisement
BREAKING: US provides India with CAATSA waiver. The Countering America’s Adversaries Through Sanctions Act (CAATSA) had remained on the table ever since India’s S-400 missile deal with Russia. Waiver, pushed by @RepRoKhanna, affirms India’s independence in defence contracting. pic.twitter.com/fRLpD2035v
— Shiv Aroor (@ShivAroor) July 15, 2022
ಅಮೆರಿಕ ಮಾಡಿರುವ ತಿದ್ದುಪಡಿಯು ಅತ್ಯಂತ ಮಹತ್ವದ್ದಾಗಿದ್ದು, ಇದರಿಂದ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಬಹುದಾಗಿದೆ. ಅಕ್ಟೋಬರ್ 2018ರಲ್ಲಿ ಎಸ್-400 ವಾಯು ರಕ್ಷಣಾ ಕ್ಷಿಪಣಿ ಐದು ಘಟಕಗಳನ್ನು ಖರೀದಿಸಲು ಭಾರತ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಬಳಿಕ ಭಾರತದ ಮೇಲೆ ಅಮೆರಿಕ ಕಾಟ್ಸಾ ಕಾಯ್ದೆಯ ಮೂಲಕ ಕ್ರಮ ಕೈಗೊಳ್ಳುವ ಸಾಧ್ಯತೆ ಹೆಚ್ಚಿತ್ತು.