ವಾಷಿಂಗ್ಟನ್: ರೋಗಿಯೊಬ್ಬ ಕೋವಿಡ್-19 ಲಸಿಕೆ ಹಾಕಿಸಿಕೊಂಡಿಲ್ಲ ಎಂಬ ಕಾರಣಕ್ಕೆ ಆತನಿಗೆ ಶಸ್ತ್ರ ಚಿಕಿತ್ಸೆ ಮಾಡಿ ಹೃದಯ ಕಸಿ ಮಾಡಲು ಅಮೆರಿಕದ ಬೋಸ್ಟನ್ ಆಸ್ಪತ್ರೆ ವೈದ್ಯರು ನಿರಾಕರಿಸಿರುವ ಪ್ರಸಂಗ ನಡೆದಿದೆ.
ಅಂಗಾಂಗ ಕಸಿಗೆ ಒಳಗಾಗುವವರಿಗೆ ಕೊರೊನಾ ವೈರಸ್ ವಿರುದ್ಧದ ಲಸಿಕೆ ಅಗತ್ಯವಿದೆ ಎಂದು ಬ್ರಿಗಮ್ ಮತ್ತು ಮಹಿಳಾ ಆಸ್ಪತ್ರೆಯ ವಕ್ತಾರರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಶೀಘ್ರವೇ 50 ದೇಶಗಳಲ್ಲಿ ಲಭ್ಯವಾಗಲಿದೆ ಡಿಸ್ನಿ ಪ್ಲಸ್
Advertisement
Advertisement
31 ವರ್ಷ ವಯಸ್ಸಿನ ನನ್ನ ಪುತ್ರ ಸಾವಿನ ಅಂಚಿನಲ್ಲಿದ್ದಾನೆ. ಆತನಿಗೆ ಆದಷ್ಟು ಬೇಗ ಹೃದಯ ಕಸಿ ಆಗಬೇಕಿದೆ. ಆದರೆ ಆತ ಲಸಿಕೆ ಪಡೆದುಕೊಂಡಿಲ್ಲ ಎಂದು ವೈದ್ಯರು ನಿರಾಕರಿಸುತ್ತಿದ್ದಾರೆ. ಇದು ಅವರ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದೆ ಎಂದು ರೋಗಿಯ ತಂದೆ ಡೇವಿಡ್ ಫರ್ಗುಸನ್ ಅಳಲು ತೋಡಿಕೊಂಡಿದ್ದಾರೆ.
Advertisement
ಕಸಿಗೆ ಒಳಗಾಗುವ ರೋಗಿಗಳಿಗೆ ಶಸ್ತ್ರ ಚಿಕಿತ್ಸೆಯಾಗಿ ನಡೆಸಲು ಹಾಗೂ ರೋಗಿ ಬದುಕುಳಿಯುವುದನ್ನು ಹೆಚ್ಚು ದೃಢಪಡಿಸಲು ಈಗಿನ ಸಂದರ್ಭದಲ್ಲಿ ಪ್ರತಿಕಾಯದ ಅಗತ್ಯತೆ ಇದೆ. ಯಾವುದೇ ಕಸಿ ನಂತರ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ಕಡಿತಗೊಳ್ಳುತ್ತದೆ. ಆಗ ಕೋವಿಡ್ ಅಂತಹ ರೋಗಿಗಳನ್ನು ಕೊಲ್ಲಬಹುದು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮಿಲ್ಕಿ ವೇಯಲ್ಲಿ 18 ನಿಮಿಷಗಳಿಗೊಮ್ಮೆ ಸ್ಫೋಟವಾಗುವ ವಸ್ತು ಪತ್ತೆ
Advertisement
ಅಂಗಗಳು ವಿರಳವಾಗಿವೆ. ಕೋವಿಡ್ ಲಸಿಕೆ ಪಡೆದವರಿಗೆ ಕಸಿ ಮಾಡಿದರೆ, ಶಸ್ತ್ರ ಚಿಕಿತ್ಸೆ ನಂತರ ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಕಸಿ ನಂತರ ಬದುಕುಳಿಯುವ ಸಾಧ್ಯತೆ ಕಡಿಮೆ ಇರುವವರಿಗೆ ಶಸ್ತ್ರ ಚಿಕಿತ್ಸೆ ಮಾಡುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ನನ್ನ ಮಗನನ್ನು ಬೇರೆ ಆಸ್ಪತ್ರೆಗೆ ಸೇರಿಸಲು ಯೋಜಿಸಿದ್ದೇನೆ. ಆದರೆ ಸಮಯ ಮೀರುತ್ತಿದೆ ಎಂದು ರೋಗಿಯ ತಂದೆ ಸಮಸ್ಯೆ ಹೇಳಿಕೊಂಡಿದ್ದಾರೆ. ಅಮೆರಿಕದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಈವರೆಗೆ ಶೇ.62 ಮಂದಿ ಮಾತ್ರ ಲಸಿಕೆ ಎರಡೂ ಡೋಸ್ ಪಡೆದುಕೊಂಡಿದ್ದಾರೆ.