ವಾಷಿಂಗ್ಟನ್: ಕೋವ್ಯಾಕ್ಸಿನ್ ಕೋವಿಡ್ ಲಸಿಕೆಯ ಎರಡು ಡೋಸ್‌ಗಳನ್ನೂ ಪಡೆದವರು ನವೆಂಬರ್ 8ರಿಂದ ನಮ್ಮ ದೇಶಕ್ಕೆ ಪ್ರಯಾಣ ಬೆಳೆಸಬಹುದು ಎಂದು ಅಮೆರಿಕ ಅನುಮತಿ ನೀಡಿದೆ.
“ಎಫ್‌ಡಿಎ (ಆಹಾರ ಮತ್ತು ಔಷಧ ನಿಯಂತ್ರಕ ಸಂಸ್ಥೆ) ಅನುಮೋದಿತ ಮತ್ತು ಡಬ್ಲ್ಯೂಎಚ್‌ಒ ತುರ್ತು ಬಳಕೆಯ ಪಟ್ಟಿಯಲ್ಲಿರುವ ಲಸಿಕೆಗಳಿಗೆ ಸಿಡಿಸಿಯ ಪ್ರಯಾಣ ಮಾರ್ಗದರ್ಶನವು ಅನ್ವಯಿಸುತ್ತದೆ. ಮುಂದೆ ಆ ಪಟ್ಟಿಯಲ್ಲಿ ಹೊಸ ಲಸಿಕೆಗಳು ಸೇರಬಹುದು. ಅದರ ಆಧಾರದಲ್ಲಿ ಪ್ರಯಾಣಕ್ಕೆ ಯುಎಸ್ ಅನುಮತಿ ನೀಡಿದೆ” ಎಂದು ಸಿಡಿಸಿ ಮಾಧ್ಯಮ ಅಧಿಕಾರಿ ಸ್ಕಾಟ್ ಪೌಲೆ ತಿಳಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ
ಯುಎಸ್‌ನ ಎಫ್‌ಡಿಎ ಅಥವಾ ಡಬ್ಲ್ಯೂಎಚ್‌ಒ ಅನುಮೋದಿತ ಕೋವಿಡ್ ಲಸಿಕೆ ಪಡೆದವರು ದೇಶಕ್ಕೆ ಪ್ರಯಾಣ ಕೈಗೊಳ್ಳಲು ಈಗಾಗಲೇ ಅನುಮತಿ ನೀಡಲಾಗಿದೆ. ಅದಕ್ಕಾಗಿ ಹೊಸ ಪ್ರಯಾಣ ನಿಯಮಗಳನ್ನು ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಯು ಕೋವಿಡ್‌ನಿಂದ ರಕ್ಷಣೆಗಾಗಿ ಡಬ್ಲ್ಯೂಎಚ್‌ಒ ಮಾನದಂಡಗಳನ್ನು ಪೂರೈಸಿದೆ ಎಂದು ತಾಂತ್ರಿಕ ಸಲಹಾ ಸಮಿತಿ ನಿರ್ಧರಿಸಿದೆ. ಹೀಗಾಗಿ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ ಎಂದು ಡಬ್ಲ್ಯೂಎಚ್‌ಒ ಟ್ವೀಟ್ ಮಾಡಿದೆ. ಇದನ್ನೂ ಓದಿ: ಪುನೀತ್ ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿಲ್ಲ: ವಿಜಯ್ ಸೇತುಪತಿ
ಫೈಜರ್-ಬಯೋನ್‌ಟೆಕ್, ಜಾನ್ಸನ್ ಅಂಡ್ ಜಾನ್ಸನ್, ಮಾಡರ್ನಾ, ಆಕ್ಸ್‌ಫರ್ಡ್ ಆಸ್ಟ್ರಜೆನೆಕಾ, ಕೋವಿಶೀಲ್ಡ್, ಸಿನೊಫಾರ್ಮ, ಸಿನೊವ್ಯಾಕ್ ಲಸಿಕೆಗಳನ್ನು ಪಡೆದವರು ಅಮೆರಿಕಗೆ ಪ್ರವಾಸ ಕೈಗೊಳ್ಳಬಹುದಾಗಿದೆ.