– ಪ್ರತಿ 10 ಡಾಲರ್ ಗೆ 1 ನಗ್ನ ಫೋಟೋ ಮಾರಾಟ
– ಖಾತೆ ಬ್ಲಾಕ್ ಮಾಡಿದ ಇನ್‍ಸ್ಟಾಗ್ರಾಮ್
ವಾಷಿಂಗ್ಟನ್: ಇನ್‍ಸ್ಟಾಗ್ರಾಮ್‍ನಲ್ಲಿ ತನ್ನ ಬೆತ್ತಲೆ ಫೋಟೋ ಮಾರಾಟ ಮಾಡುವ ಮೂಲಕ ಅಮೆರಿಕ ಮೂಲದ ಯುವತಿಯೊಬ್ಬಳು ಆಸ್ಟ್ರೇಲಿಯಾ ಕಾಡ್ಗಿಚ್ಚಿಗಾಗಿ ಬರೋಬ್ಬರಿ 5 ಕೋಟಿ ರೂಪಾಯಿ(700 ಸಾವಿರ ಡಾಲರ್) ಸಂಗ್ರಹಿಸಿದ್ದಾಳೆ.
ಕಾಡ್ಗಿಚ್ಚಿನಿಂದ ಬೆಂದು ಹೋಗುತ್ತಿರುವ ಆಸ್ಟ್ರೇಲಿಯಾಕ್ಕಾಗಿ ಹಣ ಸಂಗ್ರಹ ಮಾಡಲು ಅಮೆರಿಕ ಮೂಲದ ಕೇಲೆನ್ ವಾರ್ಡ್(20) ಈ ರೀತಿ ಪ್ಲಾನ್ ಮಾಡಿದ್ದಾಳೆ. ‘ದಿ ನೆಕ್ಡ್ ಫಿಲ್ಯಾಂಥ್ರೋಪಿಸ್ಟ್’ ಹೆಸರಿನ ಇನ್‍ಸ್ಟಾಗ್ರಾಮ್ ಖಾತೆ ಹೊಂದಿದ್ದ ಕೇಲೆನ್ ತನ್ನ ಖಾತೆಯಿಂದ ನಗ್ನ ಫೋಟೋಗಳನ್ನು ಮಾರಾಟ ಮಾಡುತ್ತಿದ್ದಳು. ಕಾಡ್ಗಿಚ್ಚಿನಿಂದ ಸಂಕಷ್ಟಕ್ಕೆ ಸಿಲುಕಿರುವ ಆಸ್ಟ್ರೇಲಿಯಾ ಮಂದಿಗೆ ಹಾಗೂ ಪ್ರಾಣಿಗಾಳಿಗಾಗಿ ಕೇಲೆನ್ ಹಣ ಸಂಗ್ರಹ ಮಾಡಲು ತನ್ನ ನಗ್ನ ಫೋಟೋಗಳನ್ನು ಇನ್‍ಸ್ಟಾದಲ್ಲಿ ಮಾರಾಟ ಮಾಡುತ್ತಿದ್ದಳು.
Advertisement
Advertisement
ನಾನು ಆಸ್ಟ್ರೇಲಿಯಾ ಕಾಡ್ಗಿಚ್ಚಿಗಾಗಿ ಹಣ ಸಂಗ್ರಹ ಮಾಡುತ್ತಿದ್ದೇನೆ. ನೀವು ಕೊಡುವ ಪ್ರತಿ 10 ಡಾಲರ್ ಗೆ ನನ್ನ 1 ಬೆತ್ತಲೆ ಫೋಟೋವನ್ನು ನಿಮಗೆ ಕಳುಹಿಸುತ್ತೇನೆ ಎಂದು ಜನವರಿ 4ರಂದು ಕೇಲೆನ್ ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿದ್ದಳು. ಈ ಪೋಸ್ಟ್ ನೋಡಿದ ಅನೇಕರು ಆಸ್ಟ್ರೇಲಿಯಾ ಕಾಡ್ಗಿಚ್ಚಿಗಾಗಿ ಹಣ ನೀಡಿ ಕೇಲೆನ್‍ನ ಬೆತ್ತಲೆ ಫೋಟೋವನ್ನು ಖರೀದಿಸಿದ್ದಾರೆ. ಈ ಮೂಲಕ ಕೇವಲ ಎರಡೇ ದಿನದಲ್ಲಿ ಕೇಲೆನ್ ಬರೋಬ್ಬರಿ 5 ಕೋಟಿ ರೂಪಾಯಿ ಹಣವನ್ನು ಸಂಗ್ರಹಿಸಿದ್ದಳು.
Advertisement
Advertisement
ಈ ಬಗ್ಗೆ ಸ್ವತಃ ಕೇಲೆನ್ ತನ್ನ ಇನ್‍ಸ್ಟಾ ಖಾತೆಯಲ್ಲಿ ಸೋಮವಾರ ಪೋಸ್ಟ್ ಮಾಡಿದ್ದಳು. ನನ್ನ ಪೋಸ್ಟ್ ನೋಡಿದ ಅನೇಕರು ಆಸ್ಟ್ರೇಲಿಯಾ ಕಾಡ್ಗಿಚ್ಚಿಗೆ ಹಣ ನೀಡಿದ್ದಾರೆ. ಇದು ನಿಜ ಜೀವನ. ಸುಮಾರು 700 ಸಾವಿರ ಡಾಲರ್(5 ಕೋಟಿ ರೂಪಾಯಿ) ಹಣ ಈಗಾಗಲೇ ಸಂಗ್ರಹವಾಗಿದೆ ಎಂದು ಬರೆದುಕೊಂಡಿದ್ದಳು.
An estimated $700K has been raised for the Australian Bush Fires in response to my tweet….
is this real life?
— THE NAKED PHILANTHROPIST (@lilearthangelk) January 6, 2020
ಕೇಲೆನ್ ಈ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾಳೆ ಎಂದ ಆರೋಪ ಕೇಳಿ ಬಂದ ಹಿನ್ನೆಲೆ ಇನ್‍ಸ್ಟಾಗ್ರಾಮ್ ಕಂಪನಿ ಆಕೆಯ ಖಾತೆಯನ್ನು ಬ್ಲಾಕ್ ಮಾಡಿತ್ತು. ಆದರೂ ಆಸ್ಟ್ರೇಲಿಯಾ ಕಾಡ್ಗಿಚ್ಚಿಗಾಗಿ ಹಣ ಸಂಗ್ರಹಿಸಲು ಮತ್ತೊಂದು ಇನ್‍ಸ್ಟಾ ಖಾತೆಯನ್ನು ಕೇಲೆನ್ ತೆರೆದಳು. ಅದನ್ನೂ ಕೂಡ ಇನ್‍ಸ್ಟಾಗ್ರಾಮ್ ಕಂಪನಿ ಬ್ಲಾಕ್ ಮಾಡಿದೆ.
ಈ ಬಗ್ಗೆ ಸ್ಪಷ್ಟಪಡಿಸಿದ ಕೇಲೆನ್, ನಾನು ಯಾವ ಹಣವನ್ನು ದುರುಪಯೋಗ ಮಾಡಿಕೊಂಡಿಲ್ಲ. ಯಾರೆಲ್ಲಾ ಆಸ್ಟ್ರೇಲಿಯಾ ಕಾಡ್ಗಿಚ್ಚಿಗೆ ಹಣ ನೀಡಿದ್ದಾರೋ ಅವರು ಆಸ್ಟ್ರೇಲಿಯಾಗಾಗಿ ಹಣ ಸಂಗ್ರಹಿಸುತ್ತಿರುವ ತಮ್ಮ ಹತ್ತಿರದ ಚಾರಿಟಿ ಅಥವಾ ಎನ್‍ಜಿಓಗೆ ಹಣ ನೀಡಿದ್ದಾರೆ. ಹಣ ನೀಡಿದ ಬಗ್ಗೆ ಖಾತರಿಗೊಳಿಸಿದ ಬಳಿಕ ನಾನು ಅವರಿಗೆ ನನ್ನ ಬೆತ್ತಲೆ ಫೋಟೋಗಳನ್ನು ಕಳುಹಿಸಿದ್ದೇನೆ. ನಾನು ನನ್ನ ಸ್ವಂತಕ್ಕೆ ಹಣವನ್ನು ಬಳಸಿಕೊಂಡಿಲ್ಲ ಎಂದು ಟ್ವೀಟ್ ಮಾಡಿದ್ದಾಳೆ.
ಆಸ್ಟ್ರೇಲಿಯಾ ಕಾಡ್ಗಿಚ್ಚಿನ ರೌದ್ರನರ್ತನಕ್ಕೆ ಅಕ್ಷರಶಃ ನಲುಗಿಹೋಗಿದೆ. ಕಾಡ್ಗಿಚ್ಚಿಗೆ ಸುಮಾರು 5 ಮಿಲಿಯನ್ ಹೆಕ್ಟೇರ್ ಪ್ರದೇಶ ಸುಟ್ಟು ಭಸ್ಮವಾಗಿದೆ. 2 ಸಾವಿರಕ್ಕೂ ಹೆಚ್ಚು ಮನೆಗಳು ಕಾಡ್ಗಿಚ್ಚಿಗೆ ಆಹುತಿಯಾಗಿದೆ. ಈವರೆಗೆ ಸುಮಾರು 25 ಮಂದಿ ಬೆಂಕಿ ಕೆನ್ನಾಲಿಗೆಗೆ ಬಲಿಯಾಗಿದ್ದಾರೆ. ಲಕ್ಷಗಟ್ಟಲೆ ಕಾಡು ಪ್ರಾಣಿಗಳು, ಪಕ್ಷಿಗಳು ಜೀವ ಕಳೆದುಕೊಂಡಿವೆ.
https://twitter.com/Loving_mou/status/1214423178065436673
ಸಾಮಾಜಿಕ ಜಾಲತಾಣಗಳಲ್ಲಿ ‘ಪ್ರೇ ಫಾರ್ ಆಸ್ಟ್ರೇಲಿಯಾ’ ಎಂದು ಹಲವು ಪೋಸ್ಟ್ ಗಳು ಹರಿದಾಡುತ್ತಿವೆ. ಅಲ್ಲದೆ ಆಸ್ಟ್ರೇಲಿಯಾ ಕಾಡ್ಗಿಚ್ಚಿನ ಫೋಟೋಗಳು, ಸುಟ್ಟು ಕರಕಲಾಗಿರುವ ಪ್ರಾಣಿಗಳ ಮೃತದೇಹಗಳ ಫೋಟೋಗಳು ಹಾಗೂ ಸಹಾಯಕ್ಕಾಗಿ ಜನರ ಕಾಲು ಹಿಡಿದ ಕಾಂಗರುಗಳು ಹಾಗೂ ಇತರೆ ಪ್ರಾಣಿಗಳ ಫೋಟೋಗಳು ವೈರಲ್ ಆಗುತ್ತಿದೆ.
HELPING HAND: A thirsty kangaroo in Bendalong is seen drinking water out of a police officer's hand as deadly wildfires ravage Australia. https://t.co/RgI4E4SBhf pic.twitter.com/jtehkgOr6g
— ABC News (@ABC) January 7, 2020