ವಾಷಿಂಗ್ಟನ್: ಯುಎಸ್ ಅಧ್ಯಕ್ಷ ಜೋ ಬೈಡನ್ ಇಂದು ಕೊರೊನಾದಿಂದ ಗುಣಮುಖರಾಗಿದ್ದಾರೆ. ಆದರೆ ಜೋ ಬೈಡನ್ ಪತ್ನಿ ಹಾಗೂ ಯುಎಸ್ ಪ್ರಥಮ ಮಹಿಳೆಯೂ ಆಗಿರುವ ಜಿಲ್ ಬೈಡನ್ ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಸೌಮ್ಯ ಲಕ್ಷಣಗಳು ಕಂಡುಬಂದಿದ್ದು, ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿರುವುದಾಗಿ ಇಂದು ಶ್ವೇತಭವನ ತಿಳಿಸಿದೆ. ಇದನ್ನೂ ಓದಿ: ಹಣ ಕೊಡದಿದ್ರೆ ಗನ್‍ನಲ್ಲಿ ಶೂಟ್ ಮಾಡೋ ಬೆದರಿಕೆ- 100 ರೂ. ಕೊಡುವಂತೆ ಲಾರಿ ಚಾಲಕನಿಗೆ ಡಿಮ್ಯಾಂಡ್
Advertisement
Advertisement
ಅಮೆರಿಕದ ದಕ್ಷಿಣ ಕೆರೊಲಿನಾದಲ್ಲಿ ಜೋ ಬೈಡನ್ ಅವರೊಂದಿಗೆ ನಿನ್ನೆ ರಜೆಯಲ್ಲಿದ್ದಾಗ ಸೌಮ್ಯ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದಿದೆ. ಸದ್ಯ ಅವರಿಗೆ ಆಂಟಿವೈರಲ್ ಪಾಕ್ಸ್ಲೋವಿಡ್ ಔಷಧವನ್ನು ಶಿಫಾರಸು ಮಾಡಲಾಗಿದೆ. ಕನಿಷ್ಠ 5 ದಿನಗಳ ಕಾಲ ಪ್ರತ್ಯೇಕವಾಗಿರಲಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಹೈಕೋರ್ಟ್‌ನ ಐವರು ಹೆಚ್ಚುವರಿ ನ್ಯಾಯಾಧೀಶರಿಗೆ ಪ್ರಮಾಣವಚನ ಬೋಧಿಸಿದ ರಾಜ್ಯಪಾಲರು
Advertisement
ಜೋ ಬೈಡನ್‌ಗೆ ಇಂದು ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಆದರೂ ರೋಗ ನಿಯಂತ್ರಣದ ಸಲುವಾಗಿ 10 ದಿನಗಳ ಕಾಲ ಮನೆಯಲ್ಲೇ ಇರಲಿದ್ದು, ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲಿದ್ದಾರೆ ಎಂದು ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಿದೆ.