ವಾಷ್ಟಿಂಗನ್/ ನವದೆಹಲಿ: ಭಾರತೀಯ ಮೂಲ ಇರುವ ಕಮಲಾ ಹ್ಯಾರೀಸ್ (Kamala Harris) ಈ ಚುನಾವಣೆಯನ್ನು (US Election 2024) ಸೋತಿರಬಹುದು ಹಾಗಂತಾ ಭಾರತೀಯರು ನಿರಾಸೆ ಪಡಬೇಕಿಲ್ಲ. ಉಪಾಧ್ಯಕ್ಷರಾಗಿ ಆಯ್ಕೆಯಾದ ಜೆಡಿ ವಾನ್ಸ್ ಪತ್ನಿ ಉಷಾ ಭಾರತದ ಮೂಲದವರೇ ಆಗಿದ್ದಾರೆ.
ಭಾರತ ಮೂಲದ 6 ಮಂದಿ ಗೆಲುವು ಸಾಧಿಸಿದ್ದಾರೆ. ಇಲಿನಾಯ್ಸ್‌ನಲ್ಲಿ ಡೆಮಕ್ರಟಿಕ್ ಪಕ್ಷದ ರಾಜಾ ಕೃಷ್ಣಮೂರ್ತಿ, ಕ್ಯಾಲಿಫೋರ್ನಿಯಾದಲ್ಲಿ ಡಾಕ್ಟರ್ ಅಮಿಬೇರಾ ಮತ್ತು ರೋ ಖನ್ನಾ, ವಾಷಿಂಗ್ಟನ್‌ನಲ್ಲಿ ಪ್ರಮೀಳಾ ಜಯಪಾಲ್, ಮಿಷಿಗನ್‌ನಲ್ಲಿ ಶ್ರೀತಾನೆದಾರ್ ಮತ್ತೊಮ್ಮೆ ಗೆಲುವು ಸಾಧಿಸಿ ಹೌಸ್ ಆಫ್ ರೆಪ್ರೆಸಂಟೇಟಿವ್ಸ್ಗೆ ಆಯ್ಕೆ ಆಗಿದ್ದಾರೆ.
Advertisement
Advertisement
ಅದೇ ರೀತಿ ವರ್ಜಿನಿಯಾದಿಂದ ಮೊದಲ ಬಾರಿ ಸುಹಾಸ್ ಸುಬ್ರಹ್ಮಣ್ಯನ್ ಗೆಲುವು ಸಾಧಿಸಿದ್ದಾರೆ.. ಡೆಮಕ್ರಟಿಕ್ ಪಕ್ಷದ ನಾಯಕಿ ನ್ಯಾನ್ಸಿ ಪೆಲೋಸಿ ಕ್ಯಾಲಿಫೋರ್ನಿಯಾದಲ್ಲಿ ದಾಖಲೆಯ ಸತತ 20ನೇ ಬಾರಿ ಗೆದ್ದು ಬೀಗಿದ್ದಾರೆ. ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷ ಸೆನೆಟ್ ಮೇಲೆಯೂ ಹಿಡಿತ ಸಾಧಿಸಿದೆ. ಬಹುಮತನಕ್ಕೆ ಅಗತ್ಯವಾದ ಸೀಟುಗಳು ಲಭಿಸಿವೆ. 100 ಸ್ಥಾನಗಳ ಸೆನಟ್‌ನಲ್ಲಿ 34 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
Advertisement
ಭಾರತಕ್ಕೇನು ಲಾಭ?
ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಟ್ರಂಪ್ (Donald Trump) ಉತ್ತಮ ಸ್ನೇಹಿತರಾಗಿದ್ದಾರೆ. ಈ ಚುನಾವಣೆಯ ಸಂದರ್ಭದಲ್ಲೂ ಮೋದಿ ನನ್ನ ಉತ್ತಮ ಸ್ನೇಹಿತ ಎಂದು ಬಣ್ಣಿಸಿದ್ದರು. ಹೀಗಾಗಿ ಭಾರತ-ಅಮೆರಿಕ ಸಂಬಂಧಕ್ಕೆ ಇನ್ನಷ್ಟು ಬಲ ಸಿಗಲಿದೆ. ಇದನ್ನೂ ಓದಿ: 132 ವರ್ಷ ದಾಖಲೆ ಸರಿಗಟ್ಟಿದ ಟ್ರಂಪ್ – ಗೆದ್ದಿದ್ದು ಹೇಗೆ?
Advertisement
ಕೆನಡಾದಲ್ಲಿ ಮಾಡುತ್ತಿರುವ ಖಲಿಸ್ತಾನಿಗಳ ಆಟಾಟೋಪಕ್ಕೆ ಬ್ರೇಕ್ ಬೀಳುವ ಸಾಧ್ಯತೆ. ಮೊದಲ ಅವಧಿಯಲ್ಲಿ ಟ್ರಂಪ್ ಚೀನಾದ ಕಡು ವಿರೋಧಿಯಾಗಿದ್ದರು. ಈ ಕಾರಣ ಭಾರತದ ಉತ್ಪಾದನಾ ವಲಯದ ಮೇಲೆ ಅಮೆರಿಕ ಹೆಚ್ಚು ಪ್ರಭಾವ ಬೀರುವುದಿಲ್ಲ ಎಂದು ವಿಶ್ಲೇಷಿಸಲಾಗುತ್ತದೆ.
ತಮ್ಮ ಪ್ರಚಾರದಲ್ಲಿ ರಷ್ಯಾ-ಉಕ್ರೇನ್ ಯುದ್ಧಕ್ಕೆ ಅಂತ್ಯ ಹಾಡುತ್ತೇನೆ ಎಂದು ಹೇಳಿದ್ದರು. ಇದು ಪರೋಕ್ಷವಾಗಿ ಇದು ಭಾರತಕ್ಕೆ ಅನುಕೂಲವಾಗಲಿದೆ. ಇಂಧನ ಬೆಲೆಯಲ್ಲಿ ಕೊಂಚ ಇಳಿಕೆ ಆಗಬಹುದು. ಇದಕ್ಕೆ ಪೂರಕ ಎಂಬಂತೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬುಧವಾರ ಕಚ್ಚಾ ತೈಲ ದರ ಇಳಿಕೆಯಾಗಿದೆ.
ಬಹಳ ಮುಖ್ಯವಾಗಿ ಅಮೆರಿಕಕ್ಕೆ ತೆರಳಿ ಉದ್ಯೋಗ ಮಾಡಬೇಕೆಂದು ಕನಸು ಕಾಣುತ್ತಿದ್ದ ಭಾರತೀಯರಿಗೆ ವೀಸಾ ಸಿಗುವುದು ಕಷ್ಟವಾಗಬಹುದು. ವಲಸೆ ನೀತಿಯನ್ನು ನಾನು ಬಿಗಿಗೊಳಿಸುತ್ತೇನೆ ಎಂದು ಟ್ರಂಪ್ ಹೇಳಿದ್ದರು. ಅಷ್ಟೇ ಅಲ್ಲದೇ ಅಮೆರಿಕದವರಿಗೆ ಉದ್ಯೋಗ ನೀಡುವುದು ನನ್ನ ಮೊದಲ ಆದ್ಯತೆ ಎಂದಿದ್ದರು. ಅಮೆರಿಕಕ್ಕೆ ಜನ ಉದ್ಯೋಗಕ್ಕೆ ತೆರಳದೇ ಇದ್ದರೂ ಹೊರಗುತ್ತಿಗೆ ಕೆಲಸ ಜಾಸ್ತಿಯಾಗಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ.