ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆ (US Presidential Election) ಅಂತಿಮ ಘಟ್ಟ ತಲುಪಿದೆ. ಇಡೀ ಜಗತ್ತೇ ಕುತೂಹಲದಿಂದ ಎದುರು ನೋಡ್ತಿರುವ ಮತದಾನ ಇಂದು ನಡೆಯಲಿದೆ. ಭಾರತೀಯ ಕಾಲಮಾನ ಇಂದು ರಾತ್ರಿಯಿಂದ ನಾಳೆಯವರೆಗೆ ಮತದಾನ ನಡೆಯಲಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಾನಾ ನೀನಾ ಎನ್ನುವಂತೆ ಫೈಟ್ ಮಾಡ್ತಿದ್ದಾರೆ.
ನ್ಯೂ ಹ್ಯಾಂಪ್‌ಶೈರ್‌ನ ಡಿಕ್ಸ್‌ವಿಲ್ಲೆ ನಾಚ್‌ನ ಸಣ್ಣ ಟೌನ್‌ಶಿಪ್‌ನಲ್ಲಿ 2024 ರ ಅಧ್ಯಕ್ಷೀಯ ಚುನಾವಣೆಗಳಿಗಾಗಿ ಮೊದಲ ಮತದಾನವನ್ನು ಚಲಾಯಿಸಲಾಗಿದೆ. ಇಂದು ಮತ್ತು ನಾಳೆ (ನ.5 ಮತ್ತು ನ.6) ಮತದಾನ ನಡೆಯಲಿದೆ. ಟೌನ್‌ಶಿಪ್ ಯುಎಸ್-ಕೆನಡಾ ಗಡಿಯಲ್ಲಿದೆ ಮತ್ತು ನ್ಯೂ ಹ್ಯಾಂಪ್‌ಶೈರ್‌ನ ಉತ್ತರ ತುದಿಯಲ್ಲಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡೋದು 7 ರಾಜ್ಯದ ಜನತೆ! – ಏನಿದು Swing States? ಯಾಕೆ ಇಷ್ಟೊಂದು ಮಹತ್ವ?
Advertisement
Advertisement
ಅಮೆರಿಕಾದ 50 ರಾಜ್ಯಗಳ ಪೈಕಿ ಬಹುತೇಕ ರಾಜ್ಯಗಳು ಯಾವ ಪಕ್ಷವನ್ನು ಬೆಂಬಲಿಸುತ್ತವೆ ಎಂಬ ಬಗ್ಗೆ ಸ್ಪಷ್ಟತೆ ಇದೆ. ಆದರೆ, ಪೆನ್ಸಿಲ್ವೇನಿಯಾ, ಮಿಚಿಗನ್, ನಾರ್ತ್ ಕರೋಲಿನಾ, ಜಾರ್ಜಿಯಾ, ನೆವಡಾ, ಅರಿಜೋನ ಸೇರಿ ಏಳು ರಾಜ್ಯಗಳ ಮೂಡ್ ಮಾತ್ರ ಯಾವ ಪಕ್ಷದತ್ತ ಇರುತ್ತೆ ಎನ್ನುವುದು ಗೊತ್ತಾಗಲ್ಲ. ಈ ರಾಜ್ಯಗಳಲ್ಲಿ ಪ್ರಚಾರಕ್ಕೆ ಅಭ್ಯರ್ಥಿಗಳು ಹೆಚ್ಚು ಆದ್ಯತೆ ನೀಡ್ತಾರೆ. ಈ ರಾಜ್ಯಗಳ ಎಲೆಕ್ಟೋರಲ್ ಮತಗಳ ಸಂಖ್ಯೆ 93. ಈ ಪೈಕಿ ಹೆಚ್ಚು ಮತ ಗಳಿಸುವ ಅಭ್ಯರ್ಥಿಗಳು ಅಧ್ಯಕ್ಷ ಪೀಠವನ್ನು ಏರುತ್ತಾರೆ. ಅಂದ ಹಾಗೇ, ಈಗಾಗಲೇ 6.8 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
Advertisement
538 ಎಲೆಕ್ಚರ್ಸ್ ಅಮೆರಿಕಾದ ಅಧ್ಯಕ್ಷರ ಭವಿಷ್ಯ ನಿರ್ಧರಿಸಲಿವೆ. ಅಮೆರಿಕ ಅಧ್ಯಕ್ಷರಾಗಲು ಕನಿಷ್ಠ 270 ಮತಗಳ ಅಗತ್ಯವಿದೆ. ಜನರು ಇಲ್ಲಿ ನೇರವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡುವುದಿಲ್ಲ. ಪ್ರತಿಯೊಂದು ರಾಜ್ಯವು ಜನ ಸಂಖ್ಯೆಗೆ ಅನುಗುಣವಾಗಿ ನಿರ್ದಿಷ್ಟ ಸಂಖ್ಯೆಯ ಜನಪ್ರತನಿಧಿಗಳನ್ನು ಒಳಗೊಂಡಿದೆ. ಕ್ಯಾಲಿಫೋರ್ನಿಯಾ 54 ಸ್ಥಾನಗಳೊಂದಿಗೆ ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಹೊಂದಿದೆ. ನಂತರ ಟೆಕ್ಸಾಸ್ (40) ಮತ್ತು ಫ್ಲೋರಿಡಾ (30). ಮತ್ತೊಂದೆಡೆ, ಉತ್ತರ ಡಕೋಟಾ, ದಕ್ಷಿಣ ಡಕೋಟಾ, ಡೆಲವೇರ್ ಮತ್ತು ವರ್ಮೊಂಟ್‌ನಂತಹ ರಾಜ್ಯಗಳು ಕನಿಷ್ಠ 3 ಸ್ಥಾನಗಳನ್ನು ಹೊಂದಿವೆ. ಇದನ್ನೂ ಓದಿ: US Election 2024 | ಮತ ಎಣಿಕೆ ಯಾವಾಗ? ಸಂಖ್ಯೆ 270ಕ್ಕೆ ಯಾಕೆ ಮಹತ್ವ?
Advertisement
ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಲಿ ಡೆಮಾಕ್ರಟಿಕ್ ಪಕ್ಷದಿಂದ ಅಭ್ಯರ್ಥಿಯಾಗಿದ್ದು, ಅವರು ಯುಎಸ್‌ನ ಮೊದಲ ಮಹಿಳೆ ಎಂಬ ಇತಿಹಾಸವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದಾರೆ. ಅವರು ಆಯ್ಕೆಯಾದರೆ, ಯುನೈಟೆಡ್ ಸ್ಟೇಟ್ಸ್‌ನ ಮೊದಲ ಭಾರತೀಯ ಮೂಲದ ಅಧ್ಯಕ್ಷರೂ ಆಗುತ್ತಾರೆ. ಮತ್ತೊಂದೆಡೆ, ರಿಪಬ್ಲಿಕನ್ ಅಭ್ಯರ್ಥಿ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2020 ರಲ್ಲಿ ಕಹಿ ನಿರ್ಗಮನದ ನಂತರ ಶ್ವೇತಭವನಕ್ಕೆ ಐತಿಹಾಸಿಕ ಪುನರಾಗಮನವನ್ನು ಬಯಸಿದ್ದಾರೆ.
ಮತದಾನದ ಸಮಯದಲ್ಲಿ ಪ್ರತಿ ರಾಜ್ಯಕ್ಕೂ ಸಮಯದಲ್ಲಿ ಬದಲಾವಣೆ ಇರುತ್ತದೆ. ಅಮೆರಿಕ ಕಾಲಮಾನದ ಪ್ರಕಾರ, ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆ ವರೆಗೆ ಮತದಾನ ನಡೆಯುತ್ತದೆ.
ಮೊದಲ ಮತದಾನವು ಜಾರ್ಜಿಯಾ ಸೇರಿದಂತೆ ಆರು ರಾಜ್ಯಗಳಲ್ಲಿ ಸುಮಾರು 7 pm ET (5:30 am ಭಾರತೀಯ ಸಮಯ) ಕ್ಕೆ ಮುಕ್ತಾಯಗೊಳ್ಳಲಿದೆ. ಅಂತಿಮ ಮತದಾನವು ನೀಲಿ ರಾಜ್ಯವಾದ ಹವಾಯಿಯಲ್ಲಿ ಮತ್ತು ಕೆಂಪು ರಾಜ್ಯವಾದ ಅಲಾಸ್ಕಾದಲ್ಲಿ 12 am ET (10:30 am ಭಾರತೀಯ ಕಾಲಮಾನ) ಕ್ಕೆ ಮುಕ್ತಾಯಗೊಳ್ಳುತ್ತದೆ. 1 pm ET (11:30 am ಭಾರತೀಯ ಕಾಲಮಾನ) ಕ್ಕೆ ಮತದಾನ ಮುಕ್ತಾಯಗೊಳ್ಳಲಿದ್ದು, ನಂತರ ಮತ ಎಣಿಕೆ ಪ್ರಾರಂಭವಾಗಲಿದೆ. ಇದನ್ನೂ ಓದಿ: ಅಮೆರಿಕಾ ಚುನಾವಣೆಯಲ್ಲೂ ಹಿಂದೂ ಅಸ್ತ್ರ ಪ್ರಯೋಗ – ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ಖಂಡಿಸಿದ ಟ್ರಂಪ್
ಸ್ವಿಂಗ್ ರಾಜ್ಯಗಳೇ ನಿರ್ಣಾಯಕ
ಅಮೆರಿಕ ಅಧ್ಯಕ್ಷ ಭವಿಷ್ಯವನ್ನು ಸ್ವಿಂಗ್ ರಾಜ್ಯಗಳು ನಿರ್ಧರಿಸಲಿವೆ. ಒಟ್ಟು 50 ರಾಜ್ಯಗಳಿದ್ದರೂ ಈ ಏಳು ರಾಜ್ಯಗಳ ಮೇಲೆಯೇ ಸ್ಪರ್ಧಿಗಳ ಕಣ್ಣಿರುತ್ತದೆ. ಏಳು ರಾಜ್ಯಗಳು ಹೊರತುಪಡಿಸಿ ಬಾಕಿ ರಾಜ್ಯಗಳಲ್ಲಿ ಎರಡು ಪಕ್ಷಗಳಿಗೆ ಸಾಂಪ್ರದಾಯಿಕ ಮತಗಳು ಇವೆ. ಉತ್ತರ ಕೆರೊಲಿನಾ, ಅರಿಜೋನಾ, ಜಾರ್ಜಿಯಾ, ನೆವಾಡಾ, ಮಿಷಿಗನ್, ಪೆನ್ಸಿಲ್ವೇನಿಯಾ ಮತ್ತು ವಿಸ್ಕಾನ್ಸಿನ್ ನಿರ್ಣಾಯಕ ರಾಜ್ಯಗಳಾಗಿವೆ. ಪ್ರತಿ ಬಾರಿಯೂ ಇಲ್ಲಿ ಜನರು ಪಕ್ಷದ ಆಯ್ಕೆ ಬದಲಿಸುತ್ತಾರೆ. ಈ ರಾಜ್ಯಗಳನ್ನು ಯಾರು ಗೆಲ್ಲುತ್ತಾರೋ ಅವರು ಅಧ್ಯಕ್ಷ ಸ್ಥಾನಕ್ಕೇರಲಿದ್ದಾರೆ.