ವಾಷಿಂಗ್ಟನ್: ಇಡೀ ಜಗತ್ತೇ ಕುತೂಹಲದಿಂದ ನೋಡುತ್ತಿರುವ ಅಮೆರಿಕಅಧ್ಯಕ್ಷೀಯ ಚುನಾವಣೆಯಲ್ಲಿ (US Presidential Election) ಮತದಾನ ಬಿರುಸಿನಿಂದ ಸಾಗಿದೆ. ಮತದಾನ ಶುರುವಾದ ಕೆಲವೇ ಗಂಟೆಗಳಲ್ಲಿ ಸಣ್ಣ ಸಣ್ಣ ಕೌಂಟಿಗಳಲ್ಲಿ ಮತದಾನ ಪೂರ್ಣಗೊಂಡಿದ್ದು ಫಲಿತಾಂಶವೂ ಹೊರಬಿದ್ದಿದೆ.
ನ್ಯೂ ಹ್ಯಾಂಪ್‌ಶೈರ್‌ನ ಡಿಕ್ಸ್ವಿಲ್ಲೆ ನಾಚ್‌ನಲ್ಲಿ (New Hampshire’s Dixville Notch) ಮೊದಲ ಫಲಿತಾಂಶ ಬಂದಿದೆ. ಅಲ್ಲಿನ ಒಟ್ಟು ಆರು ಮತಗಳಲ್ಲಿ ತಲಾ ಮೂರು ಮತಗಳು ಟ್ರಂಪ್ (Donald Trump) ಮತ್ತು ಹ್ಯಾರಿಸ್‌ಗೆ (Kamala Harris) ಬಿದ್ದಿವೆ. 2020ರಲ್ಲಿ ಇಲ್ಲಿನ ಬೈಡನ್ (Joe Biden) ಪರ 5 ಮಂದಿ ಮತ ಹಾಕಿದ್ದರೆ ಟ್ರಂಪ್ 0 ಮತ ಪಡೆದಿದ್ದರು. ಇದನ್ನೂ ಓದಿ: Kamala, you’re fired – ಮಧ್ಯರಾತ್ರಿ 2:15 ಕ್ಕೆ ಕೊನೆಯ ಪ್ರಚಾರದಲ್ಲಿ ಗುಡುಗಿದ ಟ್ರಂಪ್
The first election result is in, and it’s a Trump-Harris tie. Polls in Dixville Notch, New Hampshire, opened at midnight and closed shortly after the town’s six residents cast their ballots.
Follow live election updates: https://t.co/54b0Mopd58 pic.twitter.com/PE7YuCyauI
— The New York Times (@nytimes) November 5, 2024
ಕೆಲ ಸಮೀಕ್ಷೆಗಳು ಟ್ರಂಪ್ ಗೆಲ್ಲುತ್ತಾರೆ ಎಂದರೆ ಕೆಲ ಸಮೀಕ್ಷೆಗಳು ಕಮಲಾ ಗೆಲ್ಲಬಹುದು ಎಂದು ಹೇಳಿವೆ. ಇಬ್ಬರ ಮಧ್ಯೆ ನೇರಾನೇರ ಪೈಪೋಟಿ ಇದ್ದು ಸೋಲಿನ ಅಂತರ ಬಹಳ ಕಡಿಮೆ ಇರಬಹುದು ಎಂದು ಸಮೀಕ್ಷೆಗಳು ಹೇಳಿವೆ. ಭಾರತೀಯ ಕಾಲಮಾನ ಬುಧವಾರ ಸಂಜೆ ಮುಂದಿನ ಅಮೆರಿದ ಅಧ್ಯಕ್ಷರು ಯಾರಾಗ್ತಾರೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ. ಇದನ್ನೂ ಓದಿ: US Election 2024 | 7 ಕೋಟಿಗೂ ಹೆಚ್ಚು ಜನರಿಂದ ಮೊದಲೇ ಮತದಾನ – Swing ರಾಜ್ಯಗಳಲ್ಲಿ ಟ್ರಂಪ್ ಮುನ್ನಡೆ
ಮಧ್ಯರಾತ್ರಿ ಮತದಾನ:
ನ್ಯೂ ಹ್ಯಾಂಪ್‌ಶೈರ್‌ನ ಡಿಕ್ಸ್ವಿಲ್ಲೆ ನಾಚ್‌ನಲ್ಲಿ ಮಧ್ಯರಾತ್ರಿಯೇ ಚುನಾವಣೆ ನಡೆದಿದೆ. ಬೇರೆ ಕಡೆಗಳಲ್ಲಿ ಬೆಳಗ್ಗೆ ಚುನಾವಣೆ ನಡೆದರೆ ಇಲ್ಲಿ ಮಧ್ಯರಾತ್ರಿ ಚುನಾವಣೆ ನಡೆಯುವುದು ವಿಶೇಷ. 1960 ರ ನಂತರ ಇಲ್ಲಿ ಮಧ್ಯರಾತ್ರಿ ಚುನಾವಣೆ ನಡೆಯುತ್ತಿದೆ. ಈ ಭಾಗದಲ್ಲಿ ಹಿಂದೆ ರೈಲ್ವೇ ಕೆಲಸಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಬೆಳಗ್ಗೆ ಚುನಾವಣೆ ನಡೆದರೆ ಕೆಲಸಕ್ಕೆ ಸಮಸ್ಯೆ ಆಗುತ್ತೆ ಎಂಬ ಕಾರಣಕ್ಕೆ ರಾತ್ರಿ ಮತದಾನ ಮಾಡುವ ಸಂಪ್ರದಾಯ ಆರಂಭಿಸಿದ್ದರು. ಈ ಸಂಪ್ರದಾಯ ಈಗಲೂ ಮುಂದುವರಿಯುತ್ತಿದೆ.