US Election 2024 | ಮತ ಎಣಿಕೆ ಯಾವಾಗ? ಸಂಖ್ಯೆ 270ಕ್ಕೆ ಯಾಕೆ ಮಹತ್ವ?

Public TV
3 Min Read
Kamala Harris vs Donald Trump

ವಾಷಿಂಗ್ಟನ್‌: ಇಡೀ ವಿಶ್ವವೇ ಗಮನಿಸುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ನವೆಂಬರ್‌ 5 ರಂದು ನಡೆಯಲಿದೆ. ಚುನಾವಣಾ ದಿನಾಂಕ ಹತ್ತಿರ ಬರುತ್ತಿದ್ದಂತೆ ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ (Donald Trump) ಮತ್ತು ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್‌ (Kamala Harris) ಮಧ್ಯೆ ನೇರಾನೇರ ಸ್ಪರ್ಧೆಯಿದ್ದು ಈ ಬಾರಿ ಅಧ್ಯಕ್ಷರಾಗಿ ಯಾರು ಆಯ್ಕೆ ಆಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.

ಹಾಲಿ ಅಧ್ಯಕ್ಷ ಜೋ ಬೈಡೆನ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಾರೆ ಎಂದಾಗ ಟ್ರಂಪ್‌ ಗ್ರಾಫ್‌ ಏರಿತ್ತು. ನಂತರ ಜೋ ಬೈಡನ್‌ ರೇಸ್‌ನಿಂದ ಹಿಂದಕ್ಕೆ ಸರಿದು ಕಮಲಾ ಹ್ಯಾರಿಸ್‌ ಸ್ಪರ್ಧೆಗೆ ಇಳಿದಾಗ ಟಂಪ್‌ ಗ್ರಾಫ್‌ ಸ್ವಲ್ಪ ಇಳಿಕೆಯಾಗಿತ್ತು. ಆದರೆ ಅಕ್ಟೋಬರ್‌ ಕೊನೆಯ ವಾರದಲ್ಲಿ ಇಬ್ಬರ ಮಧ್ಯೆ ಭಾರೀ ಸ್ಪರ್ಧೆ ಇರುವುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ನವೆಂಬರ್‌ 5 ಯಾಕೆ?
ಅಮೆರಿಕದಲ್ಲಿ ಈ ಬಾರಿ ನವೆಂಬರ್‌ 5 ರಂದು ಚುನಾವಣೆ ನಡೆಯುತ್ತದೆ. ನ.5 ರಂದು ಚುನಾವಣೆ ನಡೆಯಲು ಕಾರಣ ಇದೆ. ಅಮೆರಿಕದಲ್ಲಿ ಪ್ರತಿ 4 ವರ್ಷಗಳಿಗೊಮ್ಮೆ ಚುನಾವಣೆ ನಡೆಯಲಿದೆ. ಅಲ್ಲಿನ ಸಂವಿಧಾನದ ಪ್ರಕಾರ ನವೆಂಬರ್‌ ತಿಂಗಳ ಮೊದಲ ಮಂಗಳವಾರ ಚುನಾವಣೆ ನಡೆಯಬೇಕು. ಹೀಗಾಗಿ ಪ್ರತಿ ಬಾರಿ ನವೆಂಬರ್‌ನಲ್ಲೇ ಚುನಾವಣೆ ನಡೆಯುತ್ತಾ ಬಂದಿದೆ. ಅಮರಿಕದ ಕಾಲಮಾನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಅಮೆರಿಕಾ ಚುನಾವಣೆಯಲ್ಲೂ ಹಿಂದೂ ಅಸ್ತ್ರ ಪ್ರಯೋಗ – ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ಖಂಡಿಸಿದ ಟ್ರಂಪ್

trump biden debate

 

ಚುನಾವಣೆ ಹೇಗೆ ನಡೆಯುತ್ತದೆ?
ಅಮೆರಿಕದಲ್ಲಿ ನೇರವಾಗಿ ಅಧ್ಯಕ್ಷ ಅಭ್ಯರ್ಥಿಗಳಿಗೆ ಜನರು ಮತವನ್ನು ಹಾಕುವುದಿಲ್ಲ. ಅದರ ಬದಲು ʼಎಲೆಕ್ಟರ್ಸ್‌ʼಗೆ ಮತವನ್ನು ಹಾಕುತ್ತಾರೆ. ಜನ ಸಂಖ್ಯೆಯ ಆಧಾರದಲ್ಲಿ ಪ್ರತಿಯೊಂದು ರಾಜ್ಯವು ಸಂಸತ್ತಿನಲ್ಲಿ ಹೊಂದಿರುವ ಸ್ಥಾನಗಳನ್ನು ವಿಂಗಡಿಸಲಾಗಿದೆ. ಇದನ್ನೂ ಓದಿ: ಕಮಲಾಗೆ ಶಾಕ್‌ – ಟ್ರಂಪ್‌ ಪರ ಅನಿವಾಸಿ ಭಾರತೀಯರ ಒಲವು ಏರಿಕೆ

55 ಎಲೆಕ್ಟೋರಲ್​ ವೋಟ್​ಗಳೊಂದಿಗೆ ಕ್ಯಾಲಿಫೋರ್ನಿಯಾ ಮೊದಲ ಸ್ಥಾನದಲ್ಲಿದ್ದರೆ 38 ವೋಟ್​ಗಳೊಂದಿಗೆ ಟೆಕ್ಸಾಸ್​, ನ್ಯೂಯಾರ್ಕ್​​ ಮತ್ತು ಫ್ಲೋರಿಡಾ ತಲಾ 29, ಇಲಿನಾಯ್ಸ್​ ಮತ್ತು ಪೆನ್ಸಿಲ್ವೇನಿಯಾ ತಲಾ 20, ಓಹಿಯೊ 18, ಜಾರ್ಜಿಯಾ ಮತ್ತು ಮಿಚಿಗನ್ ತಲಾ 16 ಹಾಗೂ ನಾರ್ತ್ ಕರೊಲಿನಾ 15 ಎಲೆಕ್ಟೋರಲ್​ ಮತಗಳನ್ನು ಹೊಂದಿವೆ.

ಅಮೆರಿಕದಲ್ಲಿ ಒಟ್ಟು 538 ಎಲೆಕ್ಟೋರಲ್​ ಮತಗಳು ಇದೆ. ಈ ಪೈಕಿ 270 ಮತ ಪಡೆದವರು ವಿಜಯಿ ಎಂದು ಘೋಷಿಸಲಾಗುತ್ತದೆ. ಈ ಮತದಾರರು ನಂತರ ಅಧ್ಯಕ್ಷೀಯ ಅಭ್ಯರ್ಥಿಗಳಿಗೆ ನೇರ ಮತಗಳನ್ನು ಹಾಕುತ್ತಾರೆ. ಅದನ್ನು ಚುನಾವಣಾ ಮತಗಳು ಎಂದು ಕರೆಯಲಾಗುತ್ತದೆ.

donald trump

ಚುನಾವಣಾ ಫಲಿತಾಂಶಗಳನ್ನು ನಿರ್ಧರಿಸಲು ಜಾರ್ಜಿಯಾ, ಮಿಷಿಗನ್, ಅರಿಝೋನಾ, ಪೆನ್ಸಿಲ್ವೇನಿಯಾ, ನಾರ್ತ್ ಕೆರೊಲಿನಾ, ವಿಸ್ಕಾನ್ಸಿನ್ ಮತ್ತು ನೆವಾಡಾ ಈ ಏಳು ರಾಜ್ಯಗಳು ನಿರ್ಣಾಯಕ ಎನಿಸಿವೆ. ಈ ಕಾರಣಕ್ಕೆ ಟ್ರಂಪ್‌ ಮತ್ತು ಹ್ಯಾರಿಸ್‌ ಈ ರಾಜ್ಯಗಳಲ್ಲಿ ಹೆಚ್ಚಿನ ಪ್ರಚಾರಗಳನ್ನು ನಡೆಸಿದ್ದಾರೆ.  ಇದನ್ನೂ ಓದಿ: ಅಮೆರಿಕಾ ಚುನಾವಣೆಯಲ್ಲಿ ಈಗ ʼಕಸʼ ಪಾಲಿಟಿಕ್ಸ್ – ಕಸದ ಲಾರಿ ಚಲಾಯಿಸಿ ಬೈಡನ್‌ಗೆ ಟ್ರಂಪ್ ಟಾಂಗ್

ಮತ ಎಣಿಕೆ ಯಾವಾಗ?
ಈಗಾಗಲೇ ಸುಮಾರು 6.83 ಕೋಟಿ ಜನ ಮೊದಲೇ ಮತದಾನ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಚುನಾವಣೆ ನಡೆದ ದಿನವಾದ ನ.5 ರಂದೇ ಮತ ಎಣಿಕೆ ಆರಂಭವಾಗುತ್ತದೆ. ಈ ಮತ ಎಣಿಕೆ ಫಲಿತಾಂಶ ಪ್ರಕಟವಾಗಲು ಹಲವು ದಿನಗಳನ್ನು ತೆಗೆದುಕೊಳ್ಳುತ್ತದೆ. ಕಳೆದ ಬಾರಿ ಜೋ ಬೈಡೆನ್‌ ಫಲಿತಾಂಶ ಮತ ಎಣಿಕೆ ಆರಂಭವಾದ 4 ದಿನಗಳ ನಂತರ ಪ್ರಕಟವಾಗಿತ್ತು. 2016 ರಲ್ಲಿ ಚುನಾವಣೆ ಕಳೆದ ಮರುದಿನವೇ ಫಲಿತಾಂಶ ಪ್ರಕಟವಾಗಿತ್ತು.

us election

ಡಿ.17 ರಂದು ಮತದಾನ
ಎಲೆಕ್ಟರ್ಸ್‌ ಡಿ.17 ರಂದು ಅಮೆರಿಕದ ಕಾಂಗ್ರೆಸ್‌(ಸಂಸತ್‌ನಲ್ಲಿ) ಅಧ್ಯಕ್ಷ ಚುನಾಣೆಯ ಅಭ್ಯರ್ಥಿಗಳಿಗೆ ಮತವನ್ನು ಹಾಕುತ್ತಾರೆ. ಜ.06 ರಂದು ಸಂಸತ್ತಿನ ಜಂಟಿ ಅಧಿವೇಶನ ನಡೆಯುವ ಮತ ಎಣಿಕೆ ನಡೆಯುತ್ತದೆ. ಇಲ್ಲಿ ಯಾರು 270 ಮತಗಳನ್ನು ಪಡೆಯುತ್ತಾರೋ ಅವರನ್ನು ಅಧಿಕೃತವಾಗಿ ವಿಜಯಿ ಎಂದು ಘೋಷಿಸಲಾಗುತ್ತದೆ. ಜನವರಿ 20 ರಂದು ಅಮೆರಿಕ ಅಧ್ಯಕ್ಷರ ಪ್ರಮಾಣವಚನ ನಡೆಯಲಿದೆ.

ಮೊದಲೇ ಫಲಿತಾಂಶ ಪ್ರಕಟ:
ಅಧಿಕೃತ ಫಲಿತಾಂಶ ಪ್ರಕಟಗೊಳ್ಳಲು ಹಲವು ದಿನಗಳನ್ನು ತೆಗೆದುಕೊಂಡೂ ಅಮೆರಿಕದ ಮಾಧ್ಯಮಗಳು ಚುನಾವಣೆ ಮುಕ್ತಾಯಗೊಂಡು ಮತ ಎಣಿಕೆ ನಡೆಯುವ ಸಮಯದಲ್ಲೇ ಫಲಿತಾಂಶವನ್ನು ಪ್ರಕಟಿಸುತ್ತವೆ.

 

Share This Article