US Election 2024 | 7 ಕೋಟಿಗೂ ಹೆಚ್ಚು ಜನರಿಂದ ಮೊದಲೇ ಮತದಾನ – Swing ರಾಜ್ಯಗಳಲ್ಲಿ ಟ್ರಂಪ್‌ ಮುನ್ನಡೆ

Public TV
3 Min Read
US Election 2024 1

ವಾಷಿಂಗ್ಟನ್‌: ಅಮೆರಿಕ ಚುನಾವಣೆಗೆ (US Election) ಇನ್ನು ಒಂದು ದಿನ ಬಾಕಿಯಿದೆ. ಆದರೆ ಈಗಾಗಲೇ ಸುಮಾರು 7.7 ಕೋಟಿ ಜನ ಮತದಾನ (Early Voting) ಮಾಡಿದ್ದಾರೆ.

ಹೌದು. ಮಂಗಳವಾರ ಅಮೆರಿಕದಲ್ಲಿ ಚುನಾವಣೆ ನಡೆಯಲಿದೆ. ಆದರೆ ಅಮೆರಿಕದಲ್ಲಿ ಸುಮಾರು ಎರಡು ವಾರಗಳ ಮೊದಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಅದರಲ್ಲೂ ಈ ಬಾರಿ ಭಾರೀ ಪ್ರಮಾಣದಲ್ಲಿ ಮೊದಲೇ ಮತದಾನ ಮಾಡಲು ಜನರು ಆಸಕ್ತಿ ತೋರಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ (Donald Trump) ಮತ್ತು ಕಮಲಾ ಹ್ಯಾರಿಸ್‌ (Kamala Harris) ಮಧ್ಯೆ ನೇರಾನೇರ ಸ್ಪರ್ಧೆ ಇದ್ದು ಸೋಲಿನ ಅಂತರ ಬಹಳ ಕಡಿಮೆ ಇರಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

ಕಳೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ರಿಪಬ್ಲಿಕನ್‌ ಪಕ್ಷ (Republican Party) ಆರೋಪಿಸಿತ್ತು. ನಂತರ ಸಂಸತ್‌ ಮೇಲೆ ದಾಳಿ ನಡೆದಿತ್ತು. ಹೀಗಾಗಿ ಟ್ರಂಪ್‌ ಅವರು ಈ ಬಾರಿಯ ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಮೊದಲೇ ಮತದಾನ ಮಾಡುವಂತೆ ಬೆಂಬಲಿಗರಿಗೆ ಮನವಿ ಮಾಡುತ್ತಿದ್ದರು. ಈ ಕಾರಣಕ್ಕೆ ಈ ಬಾರಿ ಭಾರೀ ಪ್ರಮಾಣದಲ್ಲಿ ಮೊದಲೇ ಮತದಾನ ನಡೆದಿದೆ. ಅದಲ್ಲೂ ರಿಪಬ್ಲಿಕನ್‌ ಪಕ್ಷದ ಬೆಂಬಲಿಗರೇ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಅಮೆರಿಕಾ ಚುನಾವಣೆಯಲ್ಲೂ ಹಿಂದೂ ಅಸ್ತ್ರ ಪ್ರಯೋಗ – ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ಖಂಡಿಸಿದ ಟ್ರಂಪ್

Donald Trump 3

ಯಾಕೆ ಮೊದಲೇ ಮತದಾನ:
ನ.5 ರಂದು ಬೇರೆ ಕಾರ್ಯಕ್ರಮ ನಿಗದಿ, ಅನಾರೋಗ್ಯ ಇತ್ಯಾದಿ ಕಾರಣದಿಂದ ಹಲವು ಮಂದಿ ಮೊದಲೇ ಮತದಾನ ಮಾಡಿದ್ದಾರೆ. ಇನ್ನು ಕೆಲವರು ಮತದಾನ ಮಾಡಲು ಆಸಕ್ತಿ ತೋರದವರಿಗೆ ಸ್ಪೂರ್ತಿಯಾಗಲೆಂದು ಮೊದಲೇ ಮತದಾನ ಮಾಡಿದ್ದಾರೆ.  ಇದನ್ನೂ ಓದಿ: ಅಮೆರಿಕದಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡೋದು 7 ರಾಜ್ಯದ ಜನತೆ! – ಏನಿದು Swing States? ಯಾಕೆ ಇಷ್ಟೊಂದು ಮಹತ್ವ?

ಮೊದಲೇ ಮತದಾನ ಮಾಡಿದ್ದರಿಂದ ಚುನಾವಣಾ ಸಮೀಕ್ಷೆಗಳಿಗೆ ನಿಖರ ಫಲಿತಾಂಶವನ್ನು ಊಹಿಸಲು ಸಹಾಯವಾಗುತ್ತದೆ.

ನಿರ್ಣಾಯಕ ರಾಜ್ಯಗಳು:
ಅಮೆರಿಕ ಚುನಾವಣೆ ನಾರ್ಥ್‌ ಕೆರೊಲಿನಾ, ಅರಿಜೋನಾ, ಜಾರ್ಜಿಯಾ, ನೆವಾಡಾ, ಮಿಷಿಗನ್, ಪೆನ್ಸಿಲ್ವೇನಿಯಾ ಮತ್ತು ವಿಸ್ಕಾನ್ಸಿನ್ ನಿರ್ಣಾಯಕ ರಾಜ್ಯಗಳಾಗಿವೆ. ಈ ರಾಜ್ಯಗಳನ್ನು ಯಾರು ಗೆಲ್ಲುತ್ತಾರೋ ಅವರು ಅಧ್ಯಕ್ಷ ಸ್ಥಾನ ಅಲಂಕರಿಸುತ್ತಾರೆ.

ಈ ರಾಜ್ಯದ ಜನತೆ ಒಂದು ಬಾರಿ ರಿಪಬ್ಲಿಕನ್‌ ಅಭ್ಯರ್ಥಿಗೆ ಮತ ಹಾಕಿದರೆ ಇನ್ನೊಂದು ಬಾರಿ ಡೆಮಾಕ್ರಟಿಕ್ ಪಕ್ಷವನ್ನು ಬೆಂಬಲಿಸುತ್ತಾರೆ. ಹೀಗಾಗಿ ಅಧಿಕೃತವಾಗಿ ಒಂದೇ ಪಕ್ಷವನ್ನು ಬೆಂಬಲಿಸುತ್ತಾರೆ ಎನ್ನುವುದಕ್ಕೆ ಗ್ಯಾರಂಟಿ ಇಲ್ಲ. ಈ ಕಾರಣಕ್ಕೆ ಚುನಾವಣಾ ಫಲಿತಾಂಶವನ್ನೇ ಬದಲಿಸಬಲ್ಲ ಈ ರಾಜ್ಯಗಳನ್ನು ʼSwing States’ ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲದೇ ಈ ರಾಜ್ಯಗಳಲ್ಲಿ ಅಭ್ಯರ್ಥಿಗಳ ಗೆಲುವಿನ ಅಂತರ ಬಹಳ ಕಡಿಮೆ ಇರುತ್ತದೆ.  ಇದನ್ನೂ ಓದಿ: US Election 2024 | ಮತ ಎಣಿಕೆ ಯಾವಾಗ? ಸಂಖ್ಯೆ 270ಕ್ಕೆ ಯಾಕೆ ಮಹತ್ವ?

 

2016ರಲ್ಲಿ ಹಿಲರಿ ಕ್ಲಿಂಟನ್‌ ಅವರನ್ನು ಸೋಲಿಸಿ ಟ್ರಂಪ್‌ ಅಧಿಕಾರಕ್ಕೆ ಏರಲು ಮತ್ತು 2020ರಲ್ಲಿ ಟ್ರಂಪ್‌ ಅವರನ್ನು ಸೋಲಿಸಿ ಜೋ ಬೈಡೆನ್‌ ಅವರು ಅಧ್ಯಕ್ಷ ಸ್ಥಾನಕ್ಕೆ ಏರಲು ಈ ರಾಜ್ಯಗಳೇ ನಿರ್ಣಾಯವಾಗಿದ್ದವು. ಹೀಗಾಗಿ ಈ 7 ರಾಜ್ಯಗಳಲ್ಲಿ ಡೊನಾಲ್ಡ್‌ ಟ್ರಂಪ್‌ ಮತ್ತು ಕಮಲಾ ಹ್ಯಾರಿಸ್‌ ಭರ್ಜರಿ ಪ್ರಚಾರವನ್ನು ಕೈಗೊಂಡಿದ್ದಾರೆ. ಆದರೆ ಸದ್ಯ ಈ ರಾಜ್ಯಗಳಲ್ಲಿ ಡೊನಾಲ್ಡ್‌ ಟ್ರಂಪ್‌ ಮುನ್ನಡೆಯಲ್ಲಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ.

 

Share This Article