ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಅಮೆರಿಕ ಉಪರಾಯಭಾರಿ (US Consulate) ಕಚೇರಿ ತೆರೆಯಲು ತೀರ್ಮಾನಿಸಿರುವ ಕ್ರಮವನ್ನು ಬಿಜೆಪಿ ಮುಖಂಡ ಎ.ಹೆಚ್.ಆನಂದ್ ಸ್ವಾಗತಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಮಾತುಕತೆಯ ಫಲವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಅವರು ಐಟಿ-ಬಿಟಿ ರಾಜಧಾನಿ ಎನಿಸಿರುವ ಬೆಂಗಳೂರಿನಲ್ಲಿ ಅಮೆರಿಕ ಉಪರಾಯಭಾರಿ ಕಚೇರಿ ಪ್ರಾರಂಭಿಸಲು ಮುಂದಾಗಿರುವುದರಿಂದ ಭವಿಷ್ಯದಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲೇ ಸಿಗಲಿದೆ ಅಮೆರಿಕ ವೀಸಾ – ಸಿಲಿಕಾನ್ ಸಿಟಿಯಲ್ಲಿ ರಾಯಭಾರ ಕಚೇರಿ ತೆರೆಯಲು US ನಿರ್ಧಾರ
Advertisement
Advertisement
ಈ ಹಿಂದೆ ಕೇಂದ್ರ ಸಚಿವರಾಗಿದ್ದ ಡಿ.ವಿ.ಸದಾನಂದಗೌಡ ಮತ್ತು ಹಾಲಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರಿಗೆ ಬೆಂಗಳೂರಿನಲ್ಲಿ ಉಪರಾಯಭಾರಿ ಕಚೇರಿ ಪ್ರಾರಂಭಿಸಲು ನವದೆಹಲಿಯಲ್ಲಿ ಭೇಟಿ ಮಾಡಿದ ನಿಯೋಗದಲ್ಲಿ ರಣಜಿತ್ ಕುಮಾರ್, ಮಾಗಡಿ ವೇಣುಗೋಪಾಲ್ ಮನವಿ ಪತ್ರವನ್ನು ನೀಡಲಾಗಿತ್ತು. ಇದರ ಪರಿಣಾಮವೇ ಇಂದು ಅಮೆರಿಕ ಸರ್ಕಾರ ದೇಶದ ಎರಡು ಕಡೆ ಉಪರಾಯಭಾರಿ ಕಚೇರಿಗಳನ್ನು ಪ್ರಾರಂಭಿಸಲು ಮುಂದಾಗಿದೆ. ಅದರಲ್ಲೂ ನಾಡಪ್ರಭು ಕೆಂಪೇಗೌಡ ನಿರ್ಮಿತ ಬೆಂಗಳೂರಿನಲ್ಲಿ ಈ ಕಚೇರಿ ಪ್ರಾರಂಭವಾಗುತ್ತಿರುವುದು ಕರುನಾಡಿನ ಮುಕುಟಕ್ಕೆ ಹೆಮ್ಮೆ ತಂದಿದೆ ಎಂದು ಬಣ್ಣಿಸಿದ್ದಾರೆ.
Advertisement
ಸಾಮಾನ್ಯವಾಗಿ ಅಮೆರಿಕಕ್ಕೆ ತೆರಳಬೇಕಾಗಿದ್ದ ಉದ್ಯೋಗಾಕಾಂಕ್ಷಿಗಳು ಹಾಗೂ ಉನ್ನತ ಶಿಕ್ಷಣ ಪಡೆಯಲು ಹೋಗಬೇಕಾಗಿದ್ದ ವಿದ್ಯಾರ್ಥಿಗಳು ಚೆನ್ನೈಗೆ ತೆರಳಿ ವಿಸಾ ಪಡೆಯಬೇಕಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನಲ್ಲಿ ಉಪರಾಯಭಾರಿ ಕಚೇರಿ ತೆರೆಯಬೇಕು ಎಂದು ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ 3,200 ಕೋಟಿ ಹೂಡಿಕೆ ಮಾಡಲಿದೆ ಸೆಮಿಕಂಡಕ್ಟರ್ ಕಂಪನಿ Applied Materials
Advertisement
ಎ.ಹೆಚ್.ಆನಂದ್ ಅವರು ಮನವಿ ಮಾಡಿಕೊಂಡ ಪತ್ರಕ್ಕೆ ಪ್ರತಿಕ್ರಿಯಿಸಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಬೆಂಗಳೂರಿನಲ್ಲಿ ಹೆಚ್ಚುವರಿ ರಾಯಭಾರಿ ಕಚೇರಿಯನ್ನು ತೆರೆಯಲು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುವುದಾಗಿ ಆಶ್ವಾಸನೆ ನೀಡಿದ್ದರು.
ಪ್ರಸ್ತುತ ಚೆನ್ನೈನಲ್ಲಿರುವ ಉಪರಾಯಭಾರಿ ಕಚೇರಿಗೆ ಕರ್ನಾಟಕದಿಂದ ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥರು ವಿಸಾ ಪಡೆಯಲು ತೆರಳಲು ಹೆಚ್ಚಿನ ಸಮಯಾವಕಾಶ ಮತ್ತು ಹೋಗಿಬರಲು ಹಣದ ಸಮಸ್ಯೆಯೂ ಎದುರಾಗುತ್ತದೆ ಎಂಬುದು ನನ್ನ ಗಮನದಲ್ಲಿದೆ. ಬೆಂಗಳೂರಿನ ಸೂಕ್ತ ಪ್ರದೇಶದಲ್ಲಿ ಉಪರಾಯಭಾರಿ ಕಚೇರಿಯನ್ನು ತೆರೆಯಲು ಪ್ರಯತ್ನ ಮಾಡುವುದಾಗಿ ಹೇಳಿದ್ದರು. ಇದನ್ನೂ ಓದಿ: ಭಾರತದಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಬಗ್ಗೆ ಮೋದಿಯನ್ನ ಕೇಳಬೇಕಿತ್ತು – ಬರಾಕ್ ಒಬಾಮಾ
ಬೆಂಗಳೂರಿನಲ್ಲಿ ಈ ಕಚೇರಿಯನ್ನು ಪ್ರಾರಂಬಿಸುವುದರಿಂದ ವಿದೇಶಗಳಿಗೆ ತೆರಳುವವರಿಗೆ ಅನುಕೂಲವಾಗಲಿದೆ. ನಮ್ಮ ಸರ್ಕಾರ ಖಂಡಿತವಾಗಿಯೂ ಪ್ರಯತ್ನ ನಡೆಸಲಿದೆ ಎಂದು ತಿಳಿಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ಫಲವಾಗಿ ಬೆಂಗಳೂರಿನಲ್ಲಿ ಉಪರಾಯಭಾರಿ ಕಚೇರಿ ಶೀಘ್ರದಲ್ಲೇ ತಲೆ ಎತ್ತಲಿದೆ.