ವಾಷಿಂಗ್ಟನ್: 14 ದೇಶಗಳ ಜೊತೆ ತೆರಿಗೆ ಸಮರ (Tariff War) ಆರಂಭಿಸಿದ ಟ್ರಂಪ್ ಭಾರತದ (India) ಜೊತೆ ಒಪ್ಪಂದ ಮಾಡಿಕೊಳ್ಳಲು ನಾವು ಬಹಳ ಹತ್ತಿರದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
ಈ ಹಿಂದೆ ತಾತ್ಕಾಲಿಕವಾಗಿ ತಡೆ ಹಿಡಿದಿದ್ದ ತೆರಿಗೆ ಸಮರವನ್ನು ಮತ್ತೆ ಟ್ರಂಪ್ ಆರಂಭಿಸಿದ್ದು ಆಗಸ್ಟ್ 1 ರಿಂದ 14 ದೇಶಗಳಿಂದ ಅಮೆರಿಕಕ್ಕೆ (USA) ಬರುವ ವಸ್ತುಗಳ ಮೇಲೆ ತೆರಿಗೆ ವಿಧಿಸಲಾಗುವುದು ಎಂದು ಘೋಷಿಸಿದ್ದಾರೆ.
ನಾವು ಯುನೈಟೆಡ್ ಕಿಂಗ್‌ಡಮ್, ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ನಾವು ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಬಹಳ ಹತ್ತಿರದಲ್ಲಿದ್ದೇವೆ ಎಂದು ಟ್ರಂಪ್ (Donald Trump) ಹೇಳಿದರು. ಇದನ್ನೂ ಓದಿ: ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಹೆಸರು ನಾಮ ನಿರ್ದೇಶನ ಮಾಡಿದ ಇಸ್ರೇಲ್
#WATCH | On trade deals, US President Donald Trump says, “…We are close to making a deal with India. We’ve made a deal with the United Kingdom. We’ve made a deal with China. Others we met with, and we don’t think we’re going to be able to make a deal, so we just send them a… pic.twitter.com/p5EWU1aeSU
— ANI (@ANI) July 8, 2025
ತೆರಿಗೆ ವಿಧಿಸಿದ ಬಳಿಕ ಹಲವು ದೇಶಗಳು ತಮ್ಮ ಅಮೆರಿಕದ ಬಳಿ ಮಾತುಕತೆ ನಡೆಸುತ್ತಿವೆ. ಈ 14 ದೇಶಗಳಿಗೆ ಈಗಲೂ ಮಾತನಾಡುವ ಆಯ್ಕೆ ಮುಕ್ತವಾಗಿದೆ ಎಂದು ತಿಳಿಸಿದ್ದಾರೆ. ಟ್ರಂಪ್ ತೆರಿಗೆ ಪೈಕಿ ಮ್ಯಾನ್ಮಾರ್ ಮತ್ತು ಲಾವೊ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ ಮೇಲೆ ಅತ್ಯಧಿಕ 40% ರಷ್ಟಿದೆ.
ಯಾವುದೇ ಕಾರಣಕ್ಕಾಗಿ ನೀವು ನಿಮ್ಮ ಸುಂಕಗಳನ್ನು ಹೆಚ್ಚಿಸಲು ನಿರ್ಧರಿಸಿದರೆ ನೀವು ವಿಧಿಸುವ ತೆರಿಗೆಯ ಮೇಲೆ 25% ಏರಿಕೆ ಮಾಡಲಾಗುವುದು ಎಂದು ಜಪಾನ್ ಮತ್ತು ದಕ್ಷಿಣ ಕೊರಿಯಾಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಅನಿವಾಸಿ ಭಾರತೀಯರಿಗೆ ಗುಡ್ ನ್ಯೂಸ್ – 23 ಲಕ್ಷಕ್ಕೆ ಜೀವಿತಾವಧಿ ‘ಗೋಲ್ಡನ್ ವೀಸಾ’ ಪರಿಚಯಿಸಿದ ಯುಎಇ
ಯಾವ ದೇಶಕ್ಕೆ ಎಷ್ಟು ತೆರಿಗೆ?
ಲಾವೋಸ್- 40%
ಮ್ಯಾನ್ಮಾರ್- 40%
ಥೈಲ್ಯಾಂಡ್- 36%
ಕಾಂಬೋಡಿಯಾ – 36%
ಬಾಂಗ್ಲಾದೇಶ – 35%
ಸೆರ್ಬಿಯಾ – 35%
ಇಂಡೋನೇಷ್ಯಾ – 32%
ದಕ್ಷಿಣ ಆಫ್ರಿಕಾ- 30%
ಬೋಸ್ನಿಯಾ ಮತ್ತು ಹರ್ಜೆಗೋವಿನಾ- 30%
ಮಲೇಷ್ಯಾ- 25%
ಟುನೀಶಿಯಾ- 25%
ಜಪಾನ್- 25%
ದಕ್ಷಿಣ ಕೊರಿಯಾ- 25%
ಕಝಾಕಿಸ್ತಾನ್- 25%