ಹೈದರಾಬಾದ್: ಸ್ನೇಹಿತರೊಂದಿಗೆ ಅಡ್ವೆಂಚರ್ ರೆಸಾರ್ಟಿಗೆ ತೆರಳಿದ್ದ ಎನ್‍ಆರ್‍ಐ ಟೆಕ್ಕಿಯೊಬ್ಬರು ಎಟಿವಿ ಬೈಕ್ ರೈಡಿಂಗ್ ವೇಳೆ ಸಾವನ್ನಪ್ಪಿರುವ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ ನಡೆದಿದೆ.
45 ವರ್ಷದ ಅರವಿಂದ್ ಕುಮಾರ್ ಮೃತಪಟ್ಟ ದುರ್ದೈವಿಯಾಗಿದ್ದು, ಇವರು ಅಮೆರಿಕದ ಸಾಫ್ಟ್‍ವೇರ್ ಸಂಸ್ಥೆಯೊಂದರಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಬೈಕ್ ರೈಡಿಂಗ್ ವೇಳೆ ಯಾವುದೇ ರಕ್ಷಣಾ ಸಾಧನಗಳನ್ನು ಬಳಸದೆ ನಿರ್ಲಕ್ಷ್ಯ ವಹಿಸಲಾಗಿದ್ದು, ಈ ವೇಳೆ ಏಕಾಏಕಿ ಮುಗ್ಗರಿಸಿ ಬಿದ್ದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ. ಅವರ ಮೇಲೆಯೇ ಎಟಿವಿ ಬೈಕ್ ಕೂಡ ಬಿದ್ದಿದೆ. ಈ ದೃಶ್ಯಗಳು ಸ್ಥಳದಲ್ಲಿದ್ದ ಸ್ನೇಹಿತರ ಮೊಬೈಲ್ ನಲ್ಲಿ ಸೆರೆಯಾಗಿದೆ.
Advertisement
#FreakAccident
A fun off-roading experience turned fatal for an NRI in #Vikarabad at an adventure resort. The all-terrain vehicle he was riding turned turtle and landed on his head. He was rushed to the hospital but he was declared brought dead. The incident happened on Monday. pic.twitter.com/QXxkxjDPxI
— Paul Oommen (@Paul_Oommen) July 4, 2019
Advertisement
ಘಟನೆ ಬಗ್ಗೆ ಮೃತ ಅರವಿಂದ್ ಸ್ನೇಹಿತರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆಯಲ್ಲಿ ಅರವಿಂದ್ ಅವರ ತಲೆಗೆ ತೀವ್ರ ಪೆಟ್ಟಾಗಿದ್ದ ಪರಿಣಾಮ ಸಾವನ್ನಪ್ಪಿದ್ದಾರೆ. ಅಪಘಾತ ನಡೆದ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನವನ್ನು ಸ್ನೇಹಿತರು ಮಾಡಿದ್ದಾರೆ. ಆದರೆ ಆಸ್ಪತ್ರೆ ತೆರಳುವ ಮಾರ್ಗ ಮಧ್ಯದಲ್ಲೇ ಅರವಿಂದ್ ಸಾವನ್ನಪ್ಪಿದ್ದಾರೆ. ಸ್ನೇಹಿತರ ಮನೆಯಲ್ಲಿ ನಡೆಯಬೇಕಿದ್ದ ಶುಭ ಕಾರ್ಯವೊಂದರಲ್ಲಿ ಭಾಗಿಯಾಲು ಅರವಿಂದ್ ಹೈದರಾಬಾದ್‍ಗೆ ಆಗಮಿಸಿದ್ದರು ಎಂಬ ಮಾಹಿತಿ ಸಿಕ್ಕಿದೆ.
Advertisement
ಘಟನೆಯ ಸಂಬಂಧ ರೆಸಾರ್ಟ್ ಆಡಳಿತ ಅಧಿಕಾರಿಯ ವೇಲೆ ಪೊಲೀಸರು ದೂರು ದಾಖಲಿಸಿದ್ದು, ತನಿಖೆ ಆರಂಭಗೊಂಡಿದೆ. ಘಟನೆಯಿಂದ ಶಾಕ್ ಒಳಗಾಗಿರುವ ಅರವಿಂದ್ ಸ್ನೇಹಿತರು, ಸಾವಿಗೆ ವಿಶಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದ್ದಾರೆ.
Advertisement