ವಾಷಿಂಗ್ಟನ್: ಉಕ್ರೇನ್ ಮೇಲೆ ಯುದ್ಧ ಸಾರಿದ್ದಕ್ಕೆ ರಷ್ಯಾದ ಮೇಲೆ ಅಮೆರಿಕ ತೈಲ ಖರೀದಿಗೆ ನಿರ್ಬಂಧ ಹೇರಿದೆ. ಆದರೆ ಯುರೋನಿಯಂ ಖರೀದಿ ನಿಷೇಧ ಹೇರದೆ ಇರುವ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.
ಅಮೆರಿಕ ಅಣು ಸ್ಥಾವರಗಳಿಗೆ ಯುರೋನಿಯಂ ಅಗತ್ಯವಿದೆ. ರಷ್ಯಾ ಹಾಗೂ ಅದರ ಮಿತ್ರರಾಷ್ಟ್ರಗಳಾದ ಕಝಕಿಸ್ತಾನ ಹಾಗೂ ಉಜ್ಬೇಕಿಸ್ತಾನದಲ್ಲಿ ಅತೀ ಹೆಚ್ಚು ಯುರೇನಿಯಂ ಸಿಗುತ್ತಿದ್ದು, ಅಮೆರಿಕ ಕೂಡಾ ಈ ದೇಶಗಳಿಂದಲೇ ಯುರೇನಿಯಂ ಅನ್ನು ಆಮದು ಮಾಡಿಕೊಳ್ಳುತ್ತದೆ. ಇದನ್ನೂ ಓದಿ: ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಇಳಿಕೆ
Advertisement
Advertisement
ಯುದ್ಧದ ಕಾರಣಕ್ಕೆ ಅಮೆರಿಕ ರಷ್ಯಾದಿಂದ ಆಮದಾಗುತ್ತಿದ್ದ ಕಚ್ಚಾತೈಲವನ್ನು ನಿಷೇಧಿಸಿದ್ದರೂ ಯುರೇನಿಯಂ ಆಮದಿಗೆ ಯಾವುದೇ ಕಡಿವಾಣ ಹಾಕಿಲ್ಲ. ಇದೀಗ ಈ ವಿಚಾರವಾಗಿ ಅಮೆರಿಕದ ನಡೆಯನ್ನು ಜನರು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: 12 ಸಾವಿರ ರಷ್ಯಾ ಸೈನಿಕರ ಸಾವು – 20 ಲಕ್ಷ ಉಕ್ರೇನಿಯನ್ನರು ಪಲಾಯನ
Advertisement
ಅಮೆರಿಕ ಅಧ್ಯಕ್ಷ ತೈಲ ನಿಷೇಧವನ್ನು ಘೋಷಿಸಿದ ಬಳಿಕ ಶ್ವೇತ ಭವನದಿಂದ ಬಿಡುಗಡೆಯಾದ ದಾಖಲೆಯಲ್ಲಿ ಯುರೇನಿಯಂ ಬಗ್ಗೆ ಯಾವುದೇ ನಿಷೇಧವನ್ನು ಉಲ್ಲೇಖಿಸಿಲ್ಲ ಎಂದು ವರದಿಗಳು ತಿಳಿಸಿವೆ.