ಬೆಂಗಳೂರು: ಅಮೆರಿಕದ ಅಂತರರಾಷ್ಟ್ರೀಯ ಅಭಿವೃದ್ಧಿ ನಿಧಿಯ(USAID) ಇಂಡಿಯಾ ಮಿಷನ್ ನಿರ್ದೇಶಕಿ ವೀಣಾ ರೆಡ್ಡಿ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಆರೋಗ್ಯ ಕೇಂದ್ರ ಹಾಗೂ ಸಂಶೋಧನಾ ಕೇಂದ್ರವನ್ನು ವರ್ಚುಯಲ್ ಆಗಿ ಉದ್ಘಾಟಿಸಿದರು.
Advertisement
ಈ ಕುರಿತು ವೀಣಾ ರೆಡ್ಡಿ ಮಾತನಾಡಿದ್ದು, ಬ್ಯಾಪ್ಟಿಸ್ಟ್ ಆಸ್ಪತ್ರೆಯು ಲಾಭದ ಉದ್ದೇಶವಿಲ್ಲದೇ ಯಾವುದೇ ಧರ್ಮ, ಜನಾಂಗ ಅಥವಾ ಆರ್ಥಿಕ ಹಿನ್ನೆಲೆಯ ಭೇದಭಾವವಿಲ್ಲದೇ ಎಲ್ಲರಿಗೂ ಆರೋಗ್ಯ ಸೇವೆ ಒದಗಿಸುತ್ತಿದೆ. ಅದರ ಮೌಲ್ಯಗಳು ಪ್ರಪಂಚದಾದ್ಯಂತ ಅಮೆರಿಕ ಅಂತರರಾಷ್ಟ್ರೀಯ ನಿಧಿ ನಡೆಸುತ್ತಿರುವ ಕೆಲಸಗಳೊಂದಿಗೆ ಹೊಂದಾಣಿಕೆಯಾಗುತ್ತಿದೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಕೊಹ್ಲಿ ಯಾವುದೇ ವಿವಾದದಲ್ಲಿರಲು ಬಯಸುವುದಿಲ್ಲ: ಕೊಹ್ಲಿ ಬಾಲ್ಯದ ಕೋಚ್
Advertisement
‘ಅಮೆರಿಕನ್ ಸ್ಕೂಲ್ಸ್ ಅಂಡ್ ಹಾಸ್ಪಿಟಲ್ಸ್ ಅಬ್ರಾಡ್'(ಆಶಾ) ಯೋಜನೆಯಡಿ ಈ ನೆರವು ನೀಡಲಾಗುತ್ತಿದೆ. ಆಶಾ ಯೋಜನೆಯಡಿ 1979ರಿಂದ ಈವರೆಗೆ ಭಾರತದಲ್ಲಿ 28 ದಶಲಕ್ಷ ಡಾಲರ್ ನೆರವು ನೀಡಲಾಗಿದೆ ಎಂದು ತಿಳಿಸಿದರು.
Advertisement
ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ‘ಆಶಾ’ ಯೋಜನೆ ನೆರವಿನಿಂದ ಮಹಿಳೆಯರು ಮತ್ತು ಮಕ್ಕಳಿಗಾಗಿ 100 ಹೆಚ್ಚುವರಿ ಹಾಸಿಗೆಗಳು ಹಾಗೂ 220ಕ್ಕೂ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳಿಗಾಗಿ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ವಿವರಿಸಿದರು.
Advertisement
ಅಮೆರಿಕದ ಬೇಲರ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಈ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ ಎಂದ ಬೇಲರ್ ವಿವಿಯ ಡಾ.ಗಾರ್ನರ್ ಅವರಿಗೂ ಧನ್ಯವಾದ ಸಲ್ಲಿಸಿದರು. ಇದನ್ನೂ ಓದಿ: ‘ಪುಷ್ಪಾ’ ಸಿನಿಮಾಗೆ ಮುದ್ದಾದ ಗೌರವ ಸಲ್ಲಿಸಿದ ಅಮುಲ್
ಪ್ರಯಾಣ ಮತ್ತು ಸಭೆ ನಡೆಸಲು ಸುರಕ್ಷಿತ ಸನ್ನಿವೇಶ ನಿರ್ಮಾಣವಾದಾಗ ಖುದ್ದಾಗಿ ಈ ಕೇಂದ್ರಕ್ಕೆ ಭೇಟಿ ನೀಡುವುದಾಗಿ ಭರವಸೆ ನೀಡಿದರು.