ಕಾಬೂಲ್: ತಾಲಿಬಾನಿಗಳು ನೀಡಿದ ಎಚ್ಚರಿಕೆಯಂತೆ ಅಮೆರಿಕ ಸೇನೆ ಸೋಮವಾರ ಕಾಬೂಲ್ ನಿಂದ ತೆರಳಿದ್ದಾರೆ. ಆದ್ರೆ ತೆರಳುವ ಮುನ್ನ ಕಾಬೂಲ್ ವಿಮಾನ ನಿಲ್ದಾಣದಲ್ಲಿ 73 ಏರ್ ಕ್ರಾಫ್ಟ್ ಗಳನ್ನು ಬಳಕೆ ಬರದಂತೆ ಮಾಡಿ ಹೋಗಿದ್ದಾರೆ. ಇತ್ತ ಅಮೆರಿಕ ಸೈನಿಕರ ವಿಮಾನ ಟೇಕಾಫ್ ಆಗುತ್ತಿದ್ದಂತೆ ತಾಲಿಬಾನಿಗಳು ಕಾಬೂಲ್ ಏರ್ ಪೋರ್ಟ್ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
73 ಏರ್ ಕ್ರಾಫ್ಟ್ ಗಳನ್ನು ಹಮಿದ್ ಕರ್ಜಾಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ಆದ್ರೆ ಇನ್ಮುಂದೆ ಈ ಏರ್ ಕ್ರಾಫ್ಟ್ ಬಳಕೆಗೆ ಬರದಂತೆ ನಿಷ್ಕ್ರಿಯಗೊಳಿಸಲಾಗಿದೆ. ಈ ವಿಮಾನಗಳು ಮುಂದೆ ಹಾರಾಡುವ ಸ್ಥಿತಿಯಲ್ಲಿಲ್ಲ. ಇವುಗಳನ್ನು ಮತ್ತೆ ರಿಪೇರಿ ಮಾಡಲು ಸಹ ಸಾಧ್ಯವಿಲ್ಲ ಎಂದು ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಜನರಲ್ ಕೆನೆಥ್ ಮೌಕೆಂಜಿ ಹೇಳಿದ್ದಾರೆ.
Advertisement
Advertisement
ಅಮೆರಿಕ ಸೇನೆ ಸುಮಾರು 70 ಮೇನ್ ರಿಜಿಸ್ಟೆಂಟ್ ಆಂಬುಶ್ ಪ್ರೊಟೆಕ್ಷನ್ (MRAP) ವೆಹಿಕಲ್ ಗಳನ್ನು ಕಾಬೂಲ್ ವಿಮಾನನಿಲ್ದಾಣದಲ್ಲಿ ಬಿಟ್ಟು ತೆರಳಿದೆ. ಈ ವೆಹಿಕಲ್ ಗಳು ಐಇಡಿ ದಾಳಿ ಮತ್ತು ಶತ್ರುಗಳ ದಾಳಿ ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿವೆ. ಒಂದು ವೆಹಿಕಲ್ ಬೆಲೆ ಸುಮಾರು 10 ಲಕ್ಷ ಡಾಲರ್ ಗೂ ಅಧಿಕವಾಗಿದೆ. ಆದ್ರೆ ಇವುಗಳನ್ನು ಸಹ ಅಮೆರಿಕ ಬಳಕೆ ಬಾರದಂತೆ ನಿಷ್ಕ್ರಿಯ ಮಾಡಿದೆ. ಇದನ್ನೂ ಓದಿ: ಕಾರಿನಿಂದ ರಾಕೆಟ್ ಉಡಾಯಿಸ್ತಿದ್ದ ಉಗ್ರರು- ಫೋಟೋಗಳು ಔಟ್
Advertisement
ಅಮೆರಿಕ ಸೇನೆ ತೆರಳುತ್ತಿದ್ದಂತೆ ರಾತ್ರಿ 12 ಗಂಟೆಗೆ ಕಾಬೂಲ್ ವಿಮಾನ ನಿಲ್ದಾಣ ಪ್ರವೇಶಿಸಿದ ತಾಲಿಬಾನಿಗಳು, ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಇನ್ಮುಂದೆ ಸಂಪೂರ್ಣ ಅಫ್ಘಾನಿಸ್ತಾನ ನಮ್ಮದು. ಇದು ನಮ್ಮೆಲ್ಲರ ಗೆಲುವು, ಇದುವೆ ಸ್ವತಂತ್ರ ದಿನ. ಅಮೆರಿಕ ಸೇರಿದಂತೆ ಎಲ್ಲ ದೇಶಗಳ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳೋಣ ಎಂದು ತಾಲಿಬಾನಿಗಳು ಘೋಷಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಇದನ್ನೂ ಓದಿ: ತಾಲಿಬಾನಿಗಳ ಮುಂದಿನ ಪ್ರಧಾನಿ ಅಫ್ರಿದಿ – ನೆಟ್ಟಿಗರಿಂದ ಫುಲ್ ಟ್ರೋಲ್